ರಾಷ್ಟ್ರಮಟ್ಟದ ಯುನಿಫೀಲ್ಡ್ ಹ್ಯಾಂಡ್ ಬಾಲ್ : ಸ್ಪೂತಿ೯ ವಿಶೇಷ ಶಾಲೆ ವಿದ್ಯಾಥಿ೯ನಿ ಸಹಳಾಗೆ ಬೆಳ್ಳಿ ಪದಕ
ಮೂಡುಬಿದಿರೆ : ಸ್ಪೆಷಲ್ ಒಲಂಪಿಕ್ ಭಾರತ್ ವತಿಯಿಂದ ರಾಜಸ್ಥಾನದಲ್ಲಿ ನಡೆದ ರಾಷ್ಟ್ರ ಮಟ್ಟದ ಯುನಿಫೀಲ್ಡ್ ಹ್ಯಾಂಡ್ ಬಾಲ್ ಕ್ರೀಡಾ ಕೂಟದಲ್ಲಿ ಕನಾ೯ಟಕ ತಂಡವನ್ನು ಪ್ರತಿನಿಧಿಸಿದ್ದ ಬೆಳುವಾಯಿ ಸ್ಫೂರ್ತಿ ವಿಶೇಷ ಮಕ್ಕಳ ಶಾಲೆಯ ವಿದ್ಯಾಥಿ೯ನಿ ಸಹಳಾ ಬೆಳ್ಳಿಯ ಪದಕವನ್ನು ಪಡೆದುಕೊಂಡಿದ್ದಾರೆ.
ಕ್ರೀಡಾಕೂಟದಲ್ಲಿ ಕನಾ೯ಟಕ ರಾಜ್ಯ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ವಿದ್ಯಾರ್ಥಿನಿ ಸಹಳಾ ಹಾಗೂ ತರಬೇತಿ ನೀಡಿರುವ ಶಿಕ್ಷಕಿ ಸುಚಿತ್ರ ಅವರನ್ನು ಶಾಲಾ ಸ್ಥಾಪಕಾಧ್ಯಕ್ಷ ಪ್ರಕಾಶ್ ಜೆ. ಶೆಟ್ಟಿಗಾರ್ ಅವರು ಅಭಿನಂದಿಸಿದ್ದಾರೆ.
0 Comments