ಮೂಡುಬಿದಿರೆಯ ಒಂಟಿಕಟ್ಟೆಯಲ್ಲಿ "ಕುದಿ ಕಂಬಳ"ಕ್ಕೆ ಚಾಲನೆ
ಮೂಡುಬಿದಿರೆ: ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಮೂಡುಬಿದಿರೆ ಆಶ್ರಯದಲ್ಲಿ ನಡೆಯುವ 23ನೇ ವಷ೯ದ ಕಂಬಳಕ್ಕೆ ಪೂರಕವಾಗಿ ನಡೆಯುವ ಕುದಿ ಕಂಬಳಕ್ಕೆ ಶಾಸಕ ಉಮಾನಾಥ ಎ. ಕೋಟ್ಯಾನ್ ಬುಧವಾರ ಚಾಲನೆ ನೀಡಿದರು.ಮಿಜಾರು ಹರಿಮೀನಾಕ್ಷಿ ತೋಟದ ಹರಿಯಪ್ಪ ಶೆಟ್ಟಿ ಕರೆಗೆ ತೆಂಗಿನಕಾಯಿ ಒಡೆಯುವ ಮೂಲಕ ಉದ್ಘಾಟಿಸಿದರು.
ಪುರಸಭಾ ಉಪಾಧ್ಯಕ್ಷ ನಾಗರಾಜ ಪೂಜಾರಿ, ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್, ಕಂಬಳ ಸಮಿತಿಯ ಪ್ರಮುಖರಾದ ರಂಜಿತ್ ಪೂಜಾರಿ, ಭಾಸ್ಕರ್ ಎಸ್. ಕೋಟ್ಯಾನ್, ಸುರೇಶ್ ಕೆ.ಪೂಜಾರಿ, ಕಂಬಳ ಕೋಣಗಳ ಯಜಮಾನ ಸತೀಶ್ಚಂದ್ರ ಪಾಣಿಲ ಇರುವೈಲು, ದಿನೇಶ್ ಪೂಜಾರಿ, ಬೆಳುವಾಯಿ ಗ್ರಾ. ಪಂ. ಸದಸ್ಯ ರಘು ಬೆಳುವಾಯಿ, ಸೂರಜ್ ಆಳ್ವ, ಶ್ರೀನಾಥ್ ಎಸ್.ಸುವರ್ಣ, ವಿಜಯ ಕುಮಾರ್ ಕಂಗೀನಮನೆ, ಅಪ್ಪು ಸರಪ್ಪಾಡಿ, ಓಟಗಾರರಾದ ರಾಜೇಶ್ ಮಾರ್ನಾಡ್, ಗುರು ಚರಣ್, ವಿವೇಕ್ ಪೂಜಾರಿ, ಸುಹಾನ್ ಒಂಟಿಕಟ್ಟೆ, ರಿತೇಶ್ ಒಂಟಿಕಟ್ಟೆ ಮತ್ತಿತರರು ಈ ಸಂದಭ೯ದಲ್ಲಿದ್ದರು.
,
0 Comments