ಆಳ್ವಾಸ್ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಂದ ಪಣಪಿಲದಲ್ಲಿ ರಸ್ತೆ ದುರಸ್ತಿ-ಒಂದು ದಿನದ ಶಿಬಿರ ಸಂಪನ್ನ
ಆಳ್ವಾಸ್ ಶಿಕ್ಷಣ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಂದ ಗ್ರಾಮ ಪಣಪಿಲ ಗ್ರಾಮದ ಬೋರುಗುಡ್ಡೆ ನೆಲ್ಲಿಕಾರು ಕೂಡು ರಸ್ತೆಯ ದುರಸ್ತಿ ಕಾರ್ಯವನ್ನು ನಡೆಸಲಾಯಿತು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರಾದ ಶ್ರೀಮತಿ ತುಳಸಿ ಮೂಲ್ಯ, ಪಂಚಾಯತ್ ಸದಸ್ಯರಾದ ದೀಕ್ಷಿತ್ ಪಣಪಿಲ, ವಿ ಎಸ್ ಎರೇಂಜರ್ಸ್ ಮಾಲೀಕರಾದ ರಮಾನಾಥ ಸಾಲಿಯನ್, ಪಣಪಿಲ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರವಿ ಪೂಜಾರಿ, ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷರಾದ ರಾಮಪ್ಪ ಮೂಲ್ಯ, ಪ್ರಮುಖರಾದ ಸುಧಾಕರ ಡಿ ಪೂಜಾರಿ, ಸುನಿಲ್ ಪಣಪಿಲ ಸೇರಿದಂತೆ ಇತರರು ಚಾಲನೆ ನೀಡಿದರು.
ಸುಮಾರು 60 ಮಂದಿ ವಿದ್ಯಾರ್ಥಿಗಳು ರಸ್ತೆಯ ಗುಂಡಿ ಮುಚ್ಚುವುದು, ರಸ್ತೆಯ ಇಕ್ಕಲಗಳಲ್ಲಿದ್ದ ಸೊಪ್ಪುಗಳನ್ನು ಕಡಿದು ಸ್ವಚ್ಛತೆಗೊಳಿಸುವುದು ಸೇರಿದಂತೆ ಇತರೆ ಕೆಲಸಗಳನ್ನು ನಡೆಸಿದ್ದಾರೆ. ಶಿಬಿರಾಧಿಕಾರಿ ಸುದೀಪ್ ಬುಣ್ಣನ್, ಅಕ್ಷತಾ ರವರು ತಂಡದ ತಂಡವನ್ನು ಮುನ್ನಡೆಸಿದ್ದಾರೆ.
0 Comments