ಗಾಣಿಗರ ಸಂಘದ ವಾಷಿ೯ಕ ಮಹಾ ಸಭೆ ವಿದ್ಯಾಥಿ೯ ವೇತನ, ಪುಸ್ತಕ ವಿತರಣೆ, ಸತ್ಯನಾರಾಯಣ ಪೂಜೆ


ಜಾಹೀರಾತು/Advertisment
ಜಾಹೀರಾತು/Advertisment

 ಗಾಣಿಗರ ಸಂಘದ ವಾಷಿ೯ಕ ಮಹಾ ಸಭೆ

ವಿದ್ಯಾಥಿ೯ ವೇತನ, ಪುಸ್ತಕ ವಿತರಣೆ, ಸತ್ಯನಾರಾಯಣ ಪೂಜೆ

ಮೂಡುಬಿದಿರೆ: ಸಫಳಿಗರ ಯಾನೆ ಗಾಣಿಗರ ಸೇವಾ ಸಂಘದ ವಾರ್ಷಿಕ ಮಹಾಸಭೆ, ವಿದ್ಯಾರ್ಥಿ ವೇತನ, ಪುಸ್ತಕ ವಿತರಣೆ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜಾ ಕಾಯ೯ಕ್ರಮವು ಪೊನ್ನೆಚ್ಚಾರಿ  ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆಯಿತು.

 ಬಂಟ್ವಾಳ ವರ್ತಕರ ವಿವಿದ್ದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಯಂ. ಸುಭಾಶ್ಚಂದ್ರ ಜೈನ್ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿ

 ಯಾವುದೇ ಸಂಘಟನೆ ಬೆಳೆಯಬೇಕಾದರೆ ಅದಕ್ಕೆ ಒಬ್ಬ ಉತ್ತಮ ನಾಯಕ ಬೇಕು.   ಸಂಘಗಳು ಕೇವಲ  ಭಾಷಣಕ್ಕೆ ಸೀಮಿತವಾಗದೆ ಉತ್ತಮ ಕೆಲಸಗಳನ್ನು ಮಾಡುವ ಕನಸುಗಳನ್ನು ಕಂಡು ನನಸು ಮಾಡುತ್ತಾ ಹೋದಾಗ ಸಂಘಟನೆಗಳು ಇನ್ನಷ್ಟು ಬಲಿಷ್ಠವಾಗಲು ಸಾಧ್ಯ ಎಂದರು. ಸಪಳಿಗ ಯಾನೆ ಗಾಣಿಗರ ಸೇವಾ ಸಂಘದ ಅಧ್ಯಕ್ಷ ರಾಜೇಶ್ ಬಂಗೇರ ಅಧ್ಯಕ್ಷತೆ ವಹಿಸಿದರು.

ಸನ್ಮಾನ : ಸಮಾಜದ ಹಿರಿಯ ನಾಗರಿಕ ನ್ಯಾಯಬಸದಿಯ ಶೇಖರ ಸಪಳಿಗ ಹಾಗೂ ವನಜಾ ಬೆಟ್ಕೇರಿ ಅವರನ್ನು ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ರಾಜ್ ಬಂಗೇರ ಮತ್ತು ಈಜುಗಾರಿಕೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಶಾನ್ ಸಪಳಿಗರನ್ನು ಸನ್ಮಾನಿಸಲಾಯಿತು.


ಎಸ್.ಎಸ್.ಎಲ್.ಸಿ ಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು. ಮಂಗಳೂರು ಉತ್ತರ ಮಂಡಲದ ಬಿಜೆಪಿ ಯುವ ಮೋರ್ಚಾದ ಕಾರ್ಯದರ್ಶಿ ಪ್ರಮೋದ್ ಕರ್ಕೇರ, ಸಪಳಿಗ ಯಾನೆ ಗಾಣಿಗರ ಸಂಘದ ಗೌರವಾಧ್ಯಕ್ಷ ಡಾ. ಸತ್ಯಶಂಕರ್ ಪುತ್ರನ್, ಸಂಘದ ಯುವ ವೇದಿಕೆಯ ಅಧ್ಯಕ್ಷ ಶತ್ರುಘ್ನ, ಮಹಿಳಾ ವೇದಿಕೆಯ ಅಧ್ಯಕ್ಷೆ ಸುಜಯ ಬಂಗೇರ ಹಾಗೂ ವಿದ್ಯಾರ್ಥಿ ವೇದಿಕೆಯ ಅಧ್ಯಕ್ಷ ಪ್ರಥಮ್ ಉಪಸ್ಥಿತರಿದ್ದರು.


ಬಾಲಕೃಷ್ಣ ಸಪಳಿಗ ಕಾಯರ್ ವಾರ್ಷಿಕ ವರದಿಯನ್ನು ಸಾರಿಕಾ ಬಂಗೇರ ಹಾಗೂ ಲೆಕ್ಕಪತ್ರವನ್ನು ಸಂಘದ ಉಪಾಧ್ಯಕ್ಷ ಜಗನ್ನಾಥ ಸಪಳಿಗ ಮಂಡಿಸಿದರು.

ಸಮಾಜದ ಹಿರಿಯ ನಾಗರಿಕ ಸಂಮಾನ ಪತ್ರವನ್ನು ಸಂಘದ ಜತೆ ಕಾರ್ಯದರ್ಶಿ ಕೇಶವ ಪೊಳಲಿ ಹಾಗೂ ಸಾಧಕ ವಿದ್ಯಾರ್ಥಿಗಳ ಸನ್ಮಾನ ಪತ್ರವನ್ನು ರೂಪಾ ಪ್ರದೀಪ್ , ವಿದ್ಯಾರ್ಥಿ ವೇತನ ಪಟ್ಟಿಯನ್ನು ಲಕ್ಷ್ಮೀತಾ ಶತ್ರುಘ್ನ , ವಾರ್ಷಿಕ ಕ್ರೀಡಾಕೂಟದ ವಿಜೇತರ ಪಟ್ಟಿಯನ್ನು ಕು. ಸ್ವಸ್ತಿ , ಪ್ರಮೀಳಾ ಗುರುಬೆಟ್ಟು, ಕು.ದಿಯಾ ಬಂಗೇರ ವಾಚಿಸಿದರು.

ಸಂಧ್ಯಾ ಸಂದೀಪ್ ಹಾಗೂ ಮಾಲತಿ ನವೀನ್ ಕಾರ್ಯಕ್ರಮ ನಿರ್ವಹಿಸಿದರು. ಪ್ರತಾಪ್ ಬೆಟ್ಕೇರಿ ಧನ್ಯವಾದಗೈದರು.

 ಸಭೆಗೂ ಮೊದಲು ಸಂಘದ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ, ಭಜನಾ ಕಾರ್ಯಕ್ರಮ ನಡೆಯಿತು.

Post a Comment

0 Comments