ಗಾಳಿ ಮಳೆ : ಸ್ನಾನಗೃಹ ಕುಸಿದು ಬಿದ್ದು ಮಹಿಳೆಯ ಕಾಲಿನ ಮೂಳೆ ಮುರಿತ

ಜಾಹೀರಾತು/Advertisment
ಜಾಹೀರಾತು/Advertisment

 ಗಾಳಿ ಮಳೆ : ಸ್ನಾನಗೃಹ ಕುಸಿದು ಬಿದ್ದು ಮಹಿಳೆಯ ಕಾಲಿನ ಮೂಳೆ ಮುರಿತ

ಮೂಡುಬಿದಿರೆ : ಗುರುವಾರ ಬೀಸಿದ ಗಾಳಿ ಮಳೆಗೆ ಸ್ನಾನ ಗೃಹವೊಂದು ಕುಸಿದು ಬಿದ್ದ ಪರಿಣಾಮವಾಗಿ ಮಹಿಳೆಯೋವ೯ರು ಕಾಲಿನ ಮೂಳೆ ಮುರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಪಡುಮಾನಾ೯ಡು ಗ್ರಾ. ಪಂ. ವ್ಯಾಪ್ತಿಯ ಮೂಡುಮಾನಾ೯ಡಿನಲ್ಲಿ ನಡೆದಿದೆ.


 

 ಮೂಡುಮಾನಾ೯ಡಿನ ನಾಯ್ಲ ಹೊಸಮನೆಯ ರತ್ನಾಕರ ಪೂಜಾರಿ ಅವರ ಮನೆಯ ಸ್ನಾನ ಗೃಹ ಮತ್ತು ಶೌಚಾಲಯ ನಿನ್ನೆ ಮಧ್ಯಾಹ್ನ ಕುಸಿದು ಬಿದ್ದಿದ್ದು ಈ ಸಂದಭ೯ ರತ್ನಾಕರ ಅವರ ಪತ್ನಿ ನೀರು ಕಾಯಿಸುತ್ತಿದ್ದು ಜೋರಾಗಿ ಬೀಸಿದ ಗಾಳಿ ಮಳೆಗೆ ಸ್ನಾನ ಗೃಹದ ಶೀಟ್ ಕಾಲಿಗೆ ಬಿದ್ದಿದೆ ಇದರ ಪರಿಣಾಮವಾಗಿ ಕಾಲಿನ ಮೂಳೆ ಮುರಿತಕ್ಕೊಳಗಾಗಿದೆ.

 ಸ್ನಾನ ಗೃಹ ಮತ್ತು ಶೌಚಾಲಯ ಕುಸಿದು ಬಿದ್ದಿದ್ದರಿಂದ ನಷ್ಟ ಉಂಟಾಗಿದೆ.

Post a Comment

0 Comments