ಜೈನ್ ಮೆಡಿಕಲ್ ಸೆಂಟರ್‌ನಲ್ಲಿ ದಿ.ಎರ್ಮೋಡಿ ಗುಣಪಾಲ ಜೈನ್ ಸ್ಮರಣಾರ್ಥ
ಉಚಿತ ಕೊಲೆಸ್ಟರಾಲ್ ತಪಾಸಣಾ ಶಿಬಿರ
ಮೂಡುಬಿದಿರೆ:. ದಿ.ಎರ್ಮೋಡಿ ಗುಣಪಾಲ ಜೈನ್ ಅವರ ಸಂಸ್ಮರಣಾರ್ಥ ಜ್ಯೋತಿನಗರದ
ಬಳಿಯಿರುವ ಜೈನ್ ಮೆಡಿಕಲ್ ಸೆಂಟರ್, ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ಮತ್ತು ಮ್ಯಾನ್ ಕೈಂಡ್ ಫಾರ್ಮಾ ಇವುಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ಮೂಡುಬಿದಿರೆ ಪರಿಸರದ ಎಲ್ಲಾ ಅಂಗನವಾಡಿ ಕೇಂದ್ರಗಳ ಆಯಾಗಳಿಗೆ ಉಚಿತ ಬ್ಲಡ್ ಕೊಲೆಸ್ಟ್ರಾಲ್ ಟೆಸ್ಟ್, ಮಧುಮೇಹ, ರಕ್ತದೊತ್ತಡ ಮತ್ತು ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ರೋಟರಿ ಕ್ಲಬ್ ಅಧ್ಯಕ್ಷ ಹರೀಶ್ ಎಂ.ಕೆ. ಅವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ರೋಟರಿ ಸಂಸ್ಥೆಯ ಎಲ್ಲಾ ಸಮಾಜಮುಖಿ ಕಾರ್ಯಕ್ರಮ ಗಳಿಗೆ ತಕ್ಷಣ ಸ್ಪಂದಿಸುವ ಅಂಗನವಾಡಿ ಕೇಂದ್ರಗಳಲ್ಲಿ ಕೆಲಸ ಮಾಡುವ ಆಯಾಗಳು ಮಕ್ಕಳ ಬಗ್ಗೆ ಕಾಳಜಿ ವಹಿಸಿ ಮಾಡುವ ಲಾಲನೆ, ಪೋಷಣೆ ಸ್ಮರಣಿಯವಾಗಿದ್ದು ಈ ಕಾರಣಕ್ಕೆ ಅಂಗನವಾಡಿ ಕೇಂದ್ರಗಳಲ್ಲಿ ಪ್ರಾಮಾಣಿಕವಾಗಿ ದುಡಿಯುವ ಆಯಾಗಳಿಗೆ ಈ ಉಚಿತ ಆರೋಗ್ಯ
ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ಈ ಹಿಂದೆ ಅಂಗನವಾಡಿ ಕಾರ್ಯಕರ್ತೆ ಯರಿಗೂ ಇಂತಹುದೇ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಾಗಿದೆ ಎಂದರು.
ಕೊಲೆಸ್ಟರಾಲ್ ಬಗ್ಗೆ ಮಾಹಿತಿ ನೀಡಿದ ಜೈನ್ ಮೆಡಿಕಲ್ ಸೆಂಟರ್ ಸಾಮಾನ್ಯ ರೋಗ ತಜ್ಞೆ ಡಾ. ಪ್ರಣಮ್ಯಾ ಜೈನ್ ಅವರು ರಕ್ತದೊತ್ತಡ ಮತ್ತು ಮದುಮೇಹ ಅನುಭವಕ್ಕೆ ಬರುತ್ತದೆ ಆದರೆ ಕೊಲೆಸ್ಟರಾಲ್ ಅನುಭವಕ್ಕೆ ಬರುವುದಿಲ್ಲ. ಕೊಲೆಸ್ಟರಾಲ್ ಹೃದಯ ಮತ್ತು ಮೆದುಳಿನ ರಕ್ತನಾಳವನ್ನು ಬ್ಲಾಕ್ ಮಾಡುವ ಸಾಧ್ಯತೆ ಮಾತ್ರವಲ್ಲದೆ ಫ್ಯಾಟಿ ಲಿವರ್ ಸಮಸ್ಯೆಗೂ ಕಾರಣವಾಗಿದ್ದು ಇದರಿಂದಾಗು ಲವರ್ ಫೇಲ್ ಹಾಗೂ ಲಿವರ್ ಕ್ಯಾನ್ಸರ್ ಗೂ ಸಮಸ್ಯೆ ಸಮಸ್ಯೆಗೂ ಕಾರಣವಾಗುತ್ತದೆ. ಆದುದರಿಂದ ಸ್ಕೂಲಕಾಯ ಇರುವವರು ಕೊಲೆಸ್ಟರಾಲ್ ತಪಾಸಣೆ ಮಾಡಿಸಿಕೊಳ್ಳುವುದು ತುಂಬಾ ಆಗತ್ಯವಾಗಿದೆ ಎಂದರು.
ಜೈನ್ ಮೆಡಿಕಲ್ ಸೆಂಟರ್ ಆಸ್ಪತ್ರೆಯ ಇ.ಎನ್.ಟಿ. ತಜ್ಞ ಡಾ. ಮಹಾವೀರ ಜೈನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ತಮ್ಮ ಆಸ್ಪತ್ರೆಯಲ್ಲಿ ಇರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಹೈಕೊಲೆಸ್ಟರಾಲ್ ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಿದ್ದು ಕೊಲೆಸ್ಟ್ರಾಲ್ ತಪಾಸಣೆ ಮಾಡಿಸಿಕೊಂಡರೆ ಹೃದಯದ ರಕ್ಷಣೆ ಸಾಧ್ಯ ಎಂದರು.
ಮ್ಯಾನ್ ಕೈಂಡ್ ಫಾರ್ಮಾದ ಸಂದೀಪ್, ರೋಟರಿ ಕ್ಲಬ್ ಕಾರ್ಯದರ್ಶಿ ಭರತ್ ಶೆಟ್ಟಿ, ಸದಸ್ಯರಾದ ಬಲರಾಮ್ ಕೆ.ಎಸ್.. ಬಿ. ಸೀತಾರಾಮ ಆಚಾರ್ಯ ಮತ್ತು ಶಂಕರ ಎ. ಕೋಟ್ಯಾನ್ ಉಪಸ್ಥಿತರಿದ್ದರು.
0 Comments