ಭರತನಾಟ್ಯದಲ್ಲಿ ಮಂಗಳೂರಿನ ರೆಮೋನಾ ಪಿರೇರಾ ವಿಶ್ವ ದಾಖಲೆ
* ನಿರಂತರ 170 ಗಂಟೆಗಳ ದಿನಗಳ ಪ್ರದರ್ಶನ
ಮೂಡುಬಿದಿರಗ : ಕಳೆದ 170 ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನ ನೀಡಿ ದಾಖಲೆ ಮಾಡುವ ಮೂಲಕ ಮಂಗಳೂರಿನ ರೆಮೋನಾ ಪಿರೇರಾ ಅವರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ತನ್ನ ಹೆಸರನ್ನು ಬರೆಸಿಕೊಂಡಿದ್ದಾರೆ.
ಸಂತ ಅಲೋಶಿಯಸ್ ವಿ.ವಿ.ಯಲ್ಲಿ ಜು.೨೮ ರಂದು ನಡೆದ ಕಾರ್ಯಕ್ರಮದಲ್ಲಿ ರೆಮೋನಾ ಪಿರೇರಾ ಅವರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ತಂಡದಿಂದ ಅಧಿಕೃತವಾಗಿ ಘೋಷಣೆ ಪಡೆದುಕೊಂಡು, ಪ್ರಶಸ್ತಿ ಸ್ವೀಕರಿಸಿದರು.
ಮಂಗಳೂರಿನ ಸಂತ ಅಲೋಶಿಯಸ್ ವಿ.ವಿ.ಯ ವಿದ್ಯಾರ್ಥಿನಿ ರೆಮೋನಾ ಅವರು ಇದೇ ಕಾಲೇಜಿನ ರಾಬರ್ಟ್ ಸಿಕ್ವೇರಾ ಹಾಲ್‌ನಲ್ಲಿ ಜು. ೨೧ರಂದು ಬೆಳಗ್ಗೆಯಿಂದ ಆರಂಭಿಸಿದ ಭರತನಾಟ್ಯ ಪ್ರದರ್ಶನ ಹಗಲು-ರಾತ್ರಿ ನಿರಂತರವಾಗಿ ಜು.೨೮ ರ ಮಧ್ಯಾಹ್ನವರೆಗೆ ನಡೆದಿತ್ತು. ಈ ಮೂಲಕ ೧೭೦ ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನ ನೀಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಲಾತೂರ್‌ನ ೧೬ ವರ್ಷದ ಸುಧೀರ್ ಜಗಪತ್ ಅವರು ೨೦೨೩ರಲ್ಲಿ ೧೨೭ ಗಂಟೆಗಳ ಕಾಲ ನಿರಂತರ ನೃತ್ಯ ಪ್ರದರ್ಶನ ನೀಡಿರುವುದು ಈವರೆಗಿನ ದಾಖಲೆ. ರೆಮೋನಾ ಪಿರೇರಾ ಅವರು ಈ ದಾಖಲೆಯನ್ನು ಜು.೨೬ ರ ಸಂಜೆಯೇ ಮುರಿದಿದ್ದು ಸೋಮವಾರ ಮಧ್ಯಾಹ್ನದವರೆಗೆ ಭರತನಾಟ್ಯ ಪ್ರದರ್ಶನವನ್ನು ಮುಂದುವರೆಸಿದ್ದರು. ಪ್ರತೀ ೩ ಗಂಟೆಗೆ ೧೫ ನಿಮಿಷ ಮಾತ್ರ ಬಿಡುವು ಇರುತ್ತಿತ್ತು. ರೆಮೋನಾ ಅವರ ಸಾಧನೆಗೆ ಜನಪ್ರತಿನಿಧಿಗಳು ಸೇರಿದಂತೆ ಗಣ್ಯರು, ಸಾರ್ವಜನಿಕರು ಅಭಿನಂದಿಸಿದ್ದಾರೆ.
0 Comments