ಶಿರ್ತಾಡಿ ಸೇವಾ ಸಹಕಾರಿ ಸಂಘದ ವಿಜೇತರಿಗೆ ಅಭಿನಂದನೆ
ಮೂಡುಬಿದಿರೆ: ಶಿರ್ತಾಡಿ ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿ ಗೆದ್ದವರನ್ನು ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಮಾಜ ಮಂದಿರದಲ್ಲಿ ಸನ್ಮಾನಿಸಲಾಯಿತು.
ಚುನಾವಣೆಯಲ್ಲಿ ವಿಜೇತರಾಗಿರುವ ಪ್ರವೀಣ್ ಕುಮಾರ್, ತಾರಾನಾಥ ಶೆಟ್ಟಿ,ಕೆ.ಎಚ್.ಲಕ್ಷ್ಮಣ, ಅಬ್ದುಲ್ ಖಾದರ್,ಸನತ್ ಶೆಟ್ಟಿ,ಆಗ್ನೆಸ್ ಡಿಸೋಜ,ಸುಗಂಧಿ,ರಾಘವ ಪಿ.ಸುವರ್ಣ, ಸದಾನಂದ ಸುವರ್ಣ,ಉಮೇಶ್ ನಾಯ್ಕ ಹಾಗೂ ಸುದೀಪ್ ಅವರನ್ನು ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಅವರು ಸನ್ಮಾನಿಸಿದರು.
ಮೂಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪುರಂದರ ದೇವಾಡಿಗ,ನಗರ ಅಧ್ಯಕ್ಷ ಜೊಸ್ಸಿ ಮಿನೇಜಸ್,ಯೂತ್ ಕಾಂಗ್ರೆಸ್ ಅಧ್ಯಕ್ಷ ಅನೀಶ್ ಡಿಸೋಜ, ಗ್ಯಾರಂಟಿ ಯೋಜನಾ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ, ವಲೇರಿಯನ್ ಸಿಕ್ವೇರಾ, ಚಂದ್ರಹಾಸ ಸನಿಲ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
0 Comments