ಬಿಜೆಪಿಯಿಂದ ಮೂಡುಬಿದಿರೆಯಲ್ಲಿ "ಆಟಿಡೊಂಜಿ ಕಮಲಕೂಟ"
*ಯುವಜನತೆ ನಮ್ಮ ಆಚಾರ ವಿಚಾರಗಳನ್ನು ಅರಿಯಿರಿ: ಕುಂಪಲ ಸಲಹೆ
ಮೂಡುಬಿದಿರೆ : ಭಾರತೀಯ ಜನತಾ ಪಾರ್ಟಿ ಮೂಲ್ಕಿ - ಮೂಡುಬಿದಿರೆ ಮಂಡಲ, ಬಿಜೆಪಿ ಮಹಿಳಾ ಮೋರ್ಚಾ ಮತ್ತು ಮೂಡುಬಿದಿರೆ ನಗರ ಮಹಾಶಕ್ತಿ ಕೇಂದ್ರ ಇವುಗಳ ವತಿಯಿಂದ “ಆಟಿಡೊಂಜಿ ಕಮಲ ಕೂಟ” ಕಾಯ೯ಕ್ರಮವು ಮೂಡುಬಿದಿರೆ ಸ್ವರಾಜ್ಯ ಮೈದಾನದ ಬಳಿಯ ಕಾಮಧೇನು ಸಭಾಭವನದಲ್ಲಿ ಭಾನುವಾರ ನಡೆಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹಿಂಗಾರವನ್ನು ಅರಳಿಸುವ ಮೂಲಕ ಸಭಾ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿ
ಭಾರತೀಯ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಆಚಾರ ವಿಚಾರಗಳು ಮೌಲ್ಯಯುತವಾದುದು. ಕಟ್ಟಡಗಳ ಮಧ್ಯೆ ಸ್ವತಂತ್ರ ಬದುಕನ್ನು ಬಯಸುವ ಜನರು ಭಾರತೀಯ ವಿಚಾರಗಳನ್ನು ಆದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಸಾರ್ಥಕ ಬದುಕು ನಡೆಸಲು ಸಾಧ್ಯವಿದೆ ಈ ನಿಟ್ಟಿನಲ್ಲಿ ಬಿಜೆಪಿಯು ಕಾಯ೯ಕ್ರಮವನ್ನು ಆಯೋಜಿಸಿ ಇಂದಿನ ಯುವಜನತೆಗೆ ಆಟಿಯ ಬಗ್ಗೆ, ನಮ್ಮ ಆಚಾರ ವಿಚಾರಗಳ ಬಗ್ಗೆ ಪರಿಚಯಿಸುವ ಕೆಲಸ ಮಾಡಿರುವುದು ಸಾರ್ಥಕವಾಗಿದೆ ಎಂದರು.
ಶಾಸಕ ಉಮಾನಾಥ ಎ. ಕೋಟ್ಯಾನ್ ದೀಪ ಬೆಳಗಿಸಿ ಕಾಯ೯ಕ್ರಮಕ್ಕೆ ಚಾಲನೆ ನೀಡಿದರು.
ಮಂಡಲಾಧ್ಯಕ್ಷ ದಿನೇಶ್ ಪುತ್ರನ್ ಅಧ್ಯಕ್ಷತೆ ವಹಿಸಿ, ವಿವಿಧ ಸ್ಪಧೆ೯ಗಳ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ ಭಾರತೀಯ ಜನತಾ ಪಕ್ಷ ಒಂದು ಅವಿಭಕ್ತ ಕುಟುಂಬವಿದ್ದಂತೆ. ನಾವೆಲ್ಲರೂ ಒಗ್ಗಟ್ಟಾಗಿದ್ದರೆ ಮಾತ್ರ ಯಾವುದೇ ಕೆಲಸವನ್ನು ಸಾಧಿಸಲು ಸಾಧ್ಯ. ಕಾರ್ಯಕರ್ತರು, ಜನಪ್ರತಿನಿಧಿಗಳೆಲ್ಲರೂ ಒಟ್ಟಾಗಿ ಸಹಕಾರ ನೀಡಿದರೆ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಸಾಧ್ಯ ಎಂದು ಹೇಳಿದರು.
ಸನ್ಮಾನ : ಪಕ್ಷದ ಕಾಯ೯ಕತ೯ರಾದ ಕೆ. ಆರ್. ಪಂಡಿತ್, ಬಾಹುಬಲಿ ಪ್ರಸಾದ್, ಹಿರಿಯ ಹೋರಾಟಗಾರ, ನಿವೃತ್ತ ಅಂಚೆಪಾಲಕ ಸದಾನಂದ ನಾರಾವಿ, ಮೇಘನಾಥ ಶೆಟ್ಟಿ, ನಿವೃತ್ತ ಯೋಧ ಹರೀಶ್ ಕರಿಂಜೆ ಅವರನ್ನು ಸನ್ಮಾನಿಸಲಾಯಿತು.
ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ರಾವ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಾಂತಿಪ್ರಸಾದ್ ಹೆಗ್ಡೆ, ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಲಕ್ಷ್ಮಣ್ ಪೂಜಾರಿ, ಜಯಂತ್ ಕೋಟ್ಯಾನ್, ಮಹಿಳಾ ಮೋರ್ಚಾದ ರಶ್ಮಿ , ಶಶಿಕಲಾ, ಪುರಸಭಾಧ್ಯಕ್ಷೆ ಜಯಶ್ರೀ ಕೇಶವ್, ಹಿರಿಯ ನಾಯಕರುಗಳಾದ ಮೇಘನಾಥ್ ಶೆಟ್ಟಿ, ಈಶ್ವರ್ ಕಟೀಲ್ ಹಾಗೂ ಪುರಸಭಾ ಸದಸ್ಯರು ಉಪಸ್ಥಿತರಿದ್ದರು.
ಪುರಸಭಾ ಉಪಾಧ್ಯಕ್ಷ ನಾಗರಾಜ ಪೂಜಾರಿ ಸ್ವಾಗತಿಸಿದರು. ವಿಖ್ಯಾತ್ ಕಾರ್ಯಕ್ರಮ ನಿರ್ವಹಿಸಿದರು.
ಮಹಿಳಾ ಮೋರ್ಚಾದ ಅಧ್ಯಕ್ಷೆ ಗೀತಾ ಲಕ್ಷ್ಮಿ ವಂದಿಸಿದರು.
ನಂತರ ಆಟಿ ತಿಂಗಳಲ್ಲಿ ಸೇವಿಸುವ ವಿವಿಧ ಆಹಾರ ಪದಾಥ೯, ಖಾದ್ಯಗಳೊಂದಿಗೆ ಸಹಬೋಜನ ಸವಿದರು.
0 Comments