ಕೈ ಕೊಟ್ಟ ಪ್ರೀತಿ..? ಕಾಲೇಜು ವಿದ್ಯಾಥಿ೯ ಆತ್ಮಹತ್ಯೆ

ಜಾಹೀರಾತು/Advertisment
ಜಾಹೀರಾತು/Advertisment

 ಕೈ ಕೊಟ್ಟ ಪ್ರೀತಿ..?

ಕಾಲೇಜು ವಿದ್ಯಾಥಿ೯ ಆತ್ಮಹತ್ಯೆ


ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಕರಿಂಜೆಯಲ್ಲಿರುವ ನ್ಯೂ ವೈಬ್ರೆಂಟ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯೋರ್ವನಿಗೆ ಆತನ ಪ್ರೇಯಸಿ ಮಾತು ಬಿಟ್ಟ ಕಾರಣ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. 


ಬೆಳಗಾವಿ ಜಿಲ್ಲೆ ನೆಹರುನಗರದ ವಿನಾಯಕ ಟಿ.ಮಿಸಾಳ ಅವರ ಮಗ ಸೂರ್ಯಮ್ ವಿನಾಯಕ ಮಿಸಾಳ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ಈತ ನ್ಯೂ ವೈಬ್ರೆಂಟ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದು ತಾನು ವಾಸ್ತವ್ಯದಲ್ಲಿದ್ದ ರೂಮಿನಲ್ಲಿ ಡೆತ್ ನೋಟ್ ಬರೆದಿಟ್ಟು  ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ತನ್ನದೇ ಊರಿನ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದು ಆ ಪ್ರೀತಿಗೆ ಅದ್ಹೇಗೋ ಬ್ರೇಕ್ ಬಿದ್ದಿತ್ತೆನ್ನಲಾಗಿದ್ದು ಇದೇ ಜಿಗುಪ್ಸೆಯಿಂದ ಈತ ಈ ಕೃತ್ಯವೆಸಗಿಕೊಂಡಿದ್ದಾನೆಂದು ಹೇಳಲಾಗುತ್ತಿದೆ.

ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Post a Comment

0 Comments