ಮಾನಸಿಕ ಖಿನ್ನತೆ - ಆತ್ಮಹತ್ಯೆ
ಮೂಡುಬಿದಿರೆ : ಕಳೆದ ಹಲವು ದಿನಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯೋವ೯ರು ತಾನು ವಾಸಿಸುತ್ತಿದ್ದ ಜೈನ್ ಪೇಟೆ ಬಳಿಯ ದೇವಿ ಕೃಪಾ ಅಪಾಟ್ ೯ಮೆಂಟಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಸಂಜೆ ಬೆಳಕಿಗೆ ಬಂದಿದೆ.
ಮೂಲತಃ ಚಿಕ್ಕಮಂಗಳೂರಿನವರಾಗಿರುವ ಎಂಜಿನಿಯರ್ ವೃತ್ತಿಯನ್ನು ಮಾಡುತ್ತಿದ್ದ ಸುಧಾಕರ ಆಚಾರ್ಯ (45ವ) ಆತ್ಮಹತ್ಯೆ ಮಾಡಿಕೊಂಡವರು.
ಇಂದು ಅಪಾಟ್೯ಮೆಂಟಿನಲ್ಲಿ ವಾಸನೆ ಬರುತ್ತಿದ್ದುದನ್ನು ಗಮನಿಸಿದ ಇತರರು ಪೊಲೀಸರಿಗೆ ಮಾಹಿತಿ ನೀಡಿದ್ದು ಅವರು ಬಂದು ನೋಡಿದಾಗ ಸುಧಾಕರ್ ಅವರು ಮಲಗಿದ್ದಲ್ಲಿಯೇ ರಕ್ತಕಾರಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರು ಮದ್ಯಕ್ಕೆ ವಿಷ ಬೆರೆಸಿ ಕುಡಿದು ಮೃತಪಟ್ಟಿರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ವಷ೯ಗಳಿಂದ ತನ್ನ ಕುಟುಂಬದೊಂದಿಗೆ ಮೂಡುಬಿದಿರೆಯಲ್ಲೇ ವಾಸಿಸುತ್ತಿದ್ದರಲ್ಲದೆ ವೃತ್ತಿಯನ್ನು ಮಾಡುತ್ತಿದ್ದರು. ಆದರೆ ಪತಿ-ಪತ್ನಿಯ ಮಧ್ಯೆ ವೈಮನಸು ಉಂಟಾಗಿ ಪತ್ನಿ ಊರಿಗೆ ಹೋಗಿದ್ದಾರೆನ್ನಲಾಗಿದೆ.
ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
0 Comments