ಪಣಪಿಲ ಶಾಲೆಯಲ್ಲಿ ವನಮಹೋತ್ಸವ ಮತ್ತು ಬೀಜದುಂಡೆ ಬಿತ್ತನೆ
ಮೂಡುಬಿದಿರೆ: ಇಲ್ಲಿನ ಅರಣ್ಯ ಇಲಾಖೆ, ಗ್ರಾಮ ಅರಣ್ಯ ಸಮಿತಿ ನೆಲ್ಲಿಕಾರು-ಪಣಪಿಲ ಹಾಗೂ ದ.ಕ.ಜಿ.ಪ.ಹಿ.ಪ್ರಾಥಮಿಕ ಶಾಲಾ ವತಿಯಿಂದ ವನಮಹೋತ್ಸವ ಹಾಗೂ ಬೀಜದುಂಡೆ ಬಿತ್ತನೆ ಕಾರ್ಯಕ್ರಮವು ಮಂಗಳವಾರ ಪಣಪಿಲ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಿತು. ಉಪ ವಲಯ ಅರಣ್ಯಾಧಿಕಾರಿ ಬಸಪ್ಪ ಹಲಗೇರ ಅವರು ಅರಣ್ಯ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು.
ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಹರೀಶ ಆಚಾರ್ಯ ಅವರು ಮಾತನಾಡಿ ಕಾಡು ಇದ್ದರೆ ನಾಡು, ಅರಣ್ಯವನ್ನು ನಾವೆಲ್ಲರೂ ಸೇರಿ ರಕ್ಷಿಸೋಣ ಎಂಬ ಮಾತನ್ನು ಹೇಳಿದರು. .
ದರೆಗುಡ್ಡೆ ಗ್ರಾಮ ಪಂಚಾಯತ್ ಸದಸ್ಯರಾದ ಮುನಿರಾಜ್ ಹೆಗ್ಡೆ, ದೀಕ್ಷಿತ್ ಪಣಪಿಲ, ಎಸ್ ಡಿಎಂಸಿ ಅಧ್ಯಕ್ಷ ರವಿ ಪೂಜಾರಿ, ಬಿಜೆಪಿ ಮುಖಂಡ ಅಶ್ವತ್ ಪಣಪಿಲ, ಗಸ್ತು ಅರಣ್ಯ ಪಾಲಕ ಮಂಜುನಾಥ ಮಳ್ಳಿ ಅತಿಥಿಗಳಾಗಿ ಭಾಗವಹಿಸಿದ್ದರು.
ಶಾಲಾ ಶಿಕ್ಷಕರು ಗ್ರಾಮ ಅರಣ್ಯ ಸಮಿತಿ ಸದಸ್ಯರು ಹಾಗೂ ಶಾಲಾ ಮಕ್ಕಳು ಹಾಜರಿದ್ದರು.
ಶಾಲಾ ಮುಖ್ಯೋಪಧ್ಯಾಯ ಅನಂತ ಅವರು ಸ್ವಾಗತಿಸಿ ವಂದಿಸಿದರು.
0 Comments