ವಿದ್ಯಾಥಿ೯ನಿಯ ಉನ್ನತ ಶಿಕ್ಷಣಕ್ಕೆ ಸಾಯೀ ಮಾನಾ೯ಡ್ ಸೇವಾ ಸಂಘದಿಂದ ನೆರವು

ಜಾಹೀರಾತು/Advertisment
ಜಾಹೀರಾತು/Advertisment

 ವಿದ್ಯಾಥಿ೯ನಿಯ ಉನ್ನತ ಶಿಕ್ಷಣಕ್ಕೆ ಸಾಯೀ ಮಾನಾ೯ಡ್ ಸೇವಾ ಸಂಘದಿಂದ ನೆರವು

ಮೂಡುಬಿದಿರೆ: ಸಾಯೀ ಮಾರ್ನಾಡ್ ಸೇವಾ ಸಂಘ ಟ್ರಸ್ಟ್( ರಿ.)ಅಮನಬೆಟ್ಟು, ಪಡುಮಾರ್ನಾಡ್ ಇದರ 

68ನೇ ಸೇವಾ ಯೋಜನೆಯ

ಜೂನ್ ತಿಂಗಳ 4ನೇ ಯೋಜನೆಯನ್ನು ವಿದ್ಯಾಥಿ೯ನಿಯ ಉನ್ನತ ಶಿಕ್ಷಣಕ್ಕಾಗಿ ನೆರವು ನೀಡಲಾಯಿತು.


ಮೂಡುಬಿದಿರೆ ತಾಲೂಕಿನ ಬಡಗಮಿಜಾರ್ ಅಂಗಡಿ ಗುಟ್ಟು ಪರಿಸರದ ಸತೀಶ್ ಕೆ. ಸಾಲಿಯಾನ್- ದೀಪಾ ಸತೀಶ್ ದಂಪತಿಯ ಪುತ್ರಿ ನಿಧಿಶಾ ಸತೀಶ್ ಎಂಬವರಿಗೆ ಎಂಜಿನಿಯರಿಂಗ್ ಶಿಕ್ಷಣಕ್ಕೆ ರೂ. 10,000ನ್ನು ಮೂಡುಬಿದಿರೆಯ ಮಾರಿಗುಡಿ ಬಳಿ ಹಸ್ತಾಂತರಿಸಲಾಯಿತು.


 ಸತೀಶ್ ಸಾಲಿಯಾನ್ ಆಟೋ ದಲ್ಲಿ ದುಡಿಯುತ್ತಿದ್ದಾರೆ. ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದು 2ನೇ ಮಗಳು 10ನೇ ತರಗತಿ, 3ನೇ ಮಗಳು 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಹೆಂಡತಿ ಮನೆಯಲ್ಲೇ ಇದ್ದಾರೆ. ಮಗಳ ಉನ್ನತ ಶಿಕ್ಷಣಕ್ಕಾಗಿ ಹೆಚ್ಚು ಖರ್ಚಿದ್ದು ಅದನ್ನು ಭರಿಸುವ ಶಕ್ತಿ ಇಲ್ಲದಿರುವುದರಿಂದ ಸೇವಾ ಸಂಘವು ಅವರ ಕಷ್ಟಕ್ಕೆ ಸ್ಪಂದಿಸಿದೆ.

Post a Comment

0 Comments