ಮೂಡುಬಿದಿರೆಯಲ್ಲಿ ನಾಳೆ " ಮಾಧ್ಯಮ ಹಬ್ಬ"
ಮೂಡುಬಿದಿರೆ:ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮೂಡುಬಿದಿರೆ ಇದರ ವತಿಯಿಂದ ಪತ್ರಿಕಾ ದಿನಾಚರಣೆ 'ಮಾಧ್ಯಮ ಹಬ್ಬ 2025' ಜುಲೈ 1 ರಂದು ಮಂಗಳವಾರ ಅಪರಾಹ್ನ 3 ಗಂಟೆಗೆ ಸಮಾಜ ಮಂದಿರದಲ್ಲಿ ನಡೆಯಲಿದೆ.
ಶಾಸಕ ಉಮಾನಾಥ ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸುವರು
ನ್ಯೂಸ್ ಫಸ್ಟ್ ಚಾನೆಲ್ ನ ಸುದ್ದಿ ವಾಚಕ ವಾಸುದೇವ ಭಟ್ ಮಾರ್ನಾಡು ಅವರಿಗೆ ಪ್ರಸಕ್ತ ಸಾಲಿನ ಪ್ರೆಸ್ ಕ್ಲಬ್ ಗೌರವ ನೀಡಿ ಸನ್ಮಾನಿಸಲಾಗುವುದು.
ಎಸ್ಸೆಸ್ಸೆಲ್ಸಿ ಅಂತಿಮ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ರುಚಿರಾ ಕುಂದರ್, ಸುಶಾಂತ್ ಮತ್ತು ಸಿಂಚನ ಇವರನ್ನು ಗೌರವಿಸಲಾಗುವುದು. ದೈಜಿ ವಲ್ಡ್ ಮಾಧ್ಯಮ ಸ್ಥಾಪಕ ವಾಲ್ಟರ್ ನಂದಳಿಕೆ ಅವರು
ನಿವೃತ್ತ ಪತ್ರಕರ್ತ ಸದಾನಂದ ಹೆಗಡೆಕಟ್ಟೆ ಪ್ರಾಯೋಜಿತ ದತ್ತಿನಿಧಿ ಉಪನ್ಯಾಸ ನೀಡಲಿದ್ದಾರೆ.
ಸಂಘದ ಅಧ್ಯಕ್ಷ ಸೀತಾರಾಮ ಆಚಾರ್ಯ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಅಭಯಚಂದ್ರ ಜೈನ್, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ ಇಂದಾಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
0 Comments