ಮೂಡುಬಿದಿರೆಯಲ್ಲಿ "ಮಾಧ್ಯಮ ಹಬ್ಬ"
ಯುವ ಸುದ್ದಿವಾಚಕಗೆ "ಪ್ರೆಸ್ ಕ್ಲಬ್ ಗೌರವ"
ಮೂಡುಬಿದಿರೆ : ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಮೂಡುಬಿದಿರೆ ಪ್ರೆಸ್‌ಕ್ಲಬ್ ವತಿಯಿಂದ ಪತ್ರಿಕಾ ದಿನಾಚರಣೆ ಪ್ರಯುಕ್ತ ಮಂಗಳವಾರ ಸಮಾಜ ಮಂದಿರದಲ್ಲಿ ನಡೆದ
ಮಾಧ್ಯಮ ಹಬ್ಬದಲ್ಲಿ ಕನ್ನಡ ಸುದ್ದಿವಾಹಿನಿಯ ಸುದ್ದಿ ವಾಚಕ ವಾಸುದೇವ ಭಟ್ ಮಾರ್ನಾಡು ಅವರಿಗೆ ಪ್ರೆಸ್ ಕ್ಲಬ್ ಗೌರವ ನೀಡಿ ಸನ್ಮಾನಿಸಲಾಯಿತು.
ಶಾಸಕ ಉಮಾನಾಥ ಎ. ಕೋಟ್ಯಾನ್ ಅವರು ಮಾಧ್ಯಮ ಹಬ್ಬವನ್ನು ಉದ್ಘಾಟಿಸಿ ಮಾತನಾಡಿ ಸಮಾಜದಲ್ಲಿ ಅಂಕುಡೊಂಕುಗಳನ್ನು ತಿಳಿದು, ತಿದ್ದಿ ಹೇಳುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದು. ಮೂಡುಬಿದಿರೆ ಪತ್ರಿಕಾ ಭವನಕ್ಕೆ ನಿವೇಶನ ಒದಗಿಸಲು ವಿವಿಧ ಹಂತದಲ್ಲಿ ಪ್ರಯತ್ನಗಳನ್ನು ಮಾಡಿದ್ದೇನೆ. ಇನ್ನು ಅರೇಳು ತಿಂಗಳಲ್ಲಿ ಮೂಡುಬಿದಿರೆಯಲ್ಲಿ ಪತ್ರಿಕಾ ಭವನ ಲೋಕಾರ್ಪಣೆಗೊಳ್ಳಲಿದೆ ಎಂದರು.
ಸಂಘದ ಅಧ್ಯಕ್ಷ ಬೆಳುವಾಯಿ ಸೀತಾರಾಮ ಆಚಾರ್ಯ ಅಧ್ಯಕ್ಷತೆ ವಹಿಸಿದರು.
ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಮುಖ್ಯ ಅತಿಥಿಯಾಗಿ ಮಾತನಾಡಿ,ಜನರ ಮನಸ್ಥಿತಿಯನ್ನು ಒಳ್ಳೆಯ ವಿಚಾರಕ್ಕೆ ಬದಲಾಯಿಸಲು ಪತ್ರಿಕೆಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ತಪ್ಪಿಗೆ ಕ್ಷಮೆ ಇದೆ ಆದರೆ ಮೋಸಕ್ಕೆ ಕ್ಷಮೆ ಇಲ್ಲ. ಇದನ್ನು ಅರಿತು ಸಮಾಜವನ್ನು ತಿದ್ದುವ ಕೆಲಸವನ್ನು ಮಾಧ್ಯಮ ಮಾಡಬೇಕಾಗಿದೆ ಎಂದರು.
ವಿಶ್ರಾಂತ ಪತ್ರಕರ್ತ ಸದಾನಂದ ಹೆಗಡೆಕಟ್ಟೆ ಪ್ರಾಯೋಜಿತ ದತ್ತಿನಿಧಿ ಉಪನ್ಯಾಸದಲ್ಲಿ ದೈಜಿ ವರ್ಲ್ಡ್ ಮಾಧ್ಯಮ ಸ್ಥಾಪಕ ವಾಲ್ಟರ್ ನಂದಳಿಕೆ, ಭವಿಷ್ಯದಲ್ಲಿ ಮಾಧ್ಯಮಗಳಿಗಿರುವ ಸವಾಲುಗಳು ವಿಷಯದ ಕುರಿತು ಉಪನ್ಯಾಸ ನೀಡಿದರು.
ಎಸ್‌ಎಸ್‌ಎಲ್‌ಸಿ ಸಾಧಕರಾದ ರುಚಿರಾ ಕುಂದರ್, ಸುಶಾಂತ್ ದರೆಗುಡ್ಡೆ, ಸಿಂಚನಾ ಮೂಡುಮಾರ್ನಾಡು ಅವರನ್ನು ಗೌರವಿಸಲಾಯಿತು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಅಭಯಚಂದ್ರ ಜೈನ್
ಇಬ್ಬರು ಶಾಸಕರಿಂದ 10 ಲಕ್ಷ ರೂ. ಮತ್ತು ವೈಯಕ್ತಿಕ ನೆಲೆಯಲ್ಲಿ 1 ಲಕ್ಷ ರೂ. ಮೊತ್ತವನ್ನು ಪತ್ರಿಕಾ ಭವನ ನಿರ್ಮಾಣಕ್ಕೆ ನೀಡುವುದಾಗಿ ತಿಳಿಸಿದರು.
ಸದಸ್ಯರಾದ ಜೈಸನ್ ತಾಕೊಡೆ, ಯಶೋಧರ ವಿ.ಬಂಗೇರ, ರಾಘವೇಂದ್ರ ಶೆಟ್ಟಿ, ಪುನೀತ್ ಮುಂಡ್ಕೂರು, ಶರತ್ ದೇವಾಡಿಗ, ಪ್ರೆಸ್ ಕ್ಲಬ್ ನಿರ್ವಾಹಕಿ ದೀಪ್ತಿ ಉಪಸ್ಥಿತರಿದ್ದರು
ಸಂಘದ ಕೋಶಾಧಿಕಾರಿ ಪ್ರಸನ್ನ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅಶ್ರಫ್ ವಾಲ್ಪಾಡಿ ಕಾಯ೯ಕ್ರಮ ನಿರೂಪಿಸಿದರು. ನವೀನ್ ಸಾಲ್ಯಾನ್ ವಂದಿಸಿದರು.
---------------------------
ಮೂಡುಬಿದಿರೆ ಪತ್ರಿಕಾ ಭವನ ನಿರ್ಮಾಣಕ್ಕೆ ರೂ.25 ಲಕ್ಷ
ಪತ್ರಿಕಾಭವನ ಮೂಡುಬಿದಿರೆಗೆ ಹೆಮ್ಮೆಯ ವಿಷಯ. ಭವನ ನಿರ್ಮಾಣಕ್ಕೆ ಒಟ್ಟು 25 ಲಕ್ಷ ರೂವನ್ನು ತನ್ನ ಅನುದಾನದಲ್ಲಿ ಅದಷ್ಟು ಶೀಘ್ರದಲ್ಲೇ ನೀಡುತ್ತೇನೆ ಎಂದು ಶಾಸಕ ಉಮಾನಾಥ ಎ. ಕೋಟ್ಯಾನ್ ಘೋಷಿಸಿದರು.
----------------------
0 Comments