ಅಂಚೆ ಇಲಾಖೆಯಿಂದ ಸೇವಾ ಸೌಲಭ್ಯಗಳ ಮಾಹಿತಿ
ಮೂಡುಬಿದಿರೆ : ದ.ಕ. ಜಿಲ್ಲಾ ಶಾಮಿಯಾನ ಮಾಲಕರ ಸಂಘ ಮೂಡುಬಿದಿರೆ ಘಟಕ ಇದರ 7ನೇ ವರ್ಷದ ವಾರ್ಷಿಕ ಮಹಾ ಸಭೆಯಲ್ಲಿಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ವತಿಯಿಂದ ಅಂಚೆ ಇಲಾಖೆಯ ಸೇವಾ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮ ನಡೆಯಿತು.
ಪುತ್ತೂರು ವಿಭಾಗದ ಮಾಕೆ೯ಟಿಂಗ್ ಎಕ್ಸಿಕ್ಯೂಟಿವ್ ಗುರುಪ್ರಸಾದ್ ಕೆ. ಎಸ್. ಮೂಡುಬಿದಿರೆ ಅವರು ಅಂಚೆ ಇಲಾಖೆಯ ಸಣ್ಣ ಉಳಿತಾಯ, ಅಂಚೆ ಜೀವ ವಿಮೆ, ಪ್ರಧಾನ ಮಂತ್ರಿ ಜನಸುರಕ್ಷಾ ಯೋಜನೆಗಳು, ಅಪಘಾತ ಹಾಗೂ ಆರೋಗ್ಯ ವಿಮೆಯ ಬಗೆಗೆ ಮಾಹಿತಿ ನೀಡಿದರು.
ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಶಿವಪ್ರಸಾದ್, ಕಾರ್ಯದರ್ಶಿ ದಿವಾಕರ್ ಮತ್ತಿತರರು ಈ ಸಂದಭ೯ದಲ್ಲಿದ್ದರು.
0 Comments