ಶಾಲಾ ಮಕ್ಕಳ ಆಟೋ ಬಾಡಿಗೆ ರೂ. 42,000 ಹಸ್ತಾಂತರಿಸಿದ ಸಾಯೀ ಮಾನಾ೯ಡ್
ಮೂಡುಬಿದಿರೆ : ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್( ರಿ.)ಅಮನಬೆಟ್ಟು, ಪಡುಮಾರ್ನಾಡ್ ಇದರ 69ನೇ ಸೇವಾ ಯೋಜನೆಯ ಅಂಗವಾಗಿ ಮಹಾವೀರ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಒಂದು ವರ್ಷದ ರಿಕ್ಷಾ ಬಾಡಿಗೆ ರೂ. 42000ವನ್ನು ಭಾನುವಾರ ಹಸ್ತಾಂತರಿಸಲಾಯಿತು.
ನಮ್ಮ ಸೇವಾ ಸಂಘದ ಸದಸ್ಯರುಗಳು ವೈಯಕ್ತಿಕವಾಗಿ ಹಾಗೂ ಹಳೆ ವಿದ್ಯಾರ್ಥಿಗಳು ಒಟ್ಟುಗೂಡಿಸಿದ್ದರು.
ಶಾಲೆಯ ಅಧ್ಯಾಪಕರು,ಆಡಳಿತ ಮಂಡಳಿಯವರ ಉಪಸ್ಥಿತಿ ಯಲ್ಲಿ ಸಂಧ್ಯಾಹೆಗ್ಡೆ ಅವರ ಕೈಯಲ್ಲಿ ನೀಡಲಾಯಿತು. ಸಭೆಯಲ್ಲಿ ಶಾಲಾ ಸಂಚಾಲಕ ಎಂ. ಆರ್. ಬಲ್ಲಾಳ್, ಯುವಕ ಮಂಡಲದ ಅಧ್ಯಕ್ಷರು ವೈಷ್ಣವ್ ಹೆಗ್ಡೆ, ಪಡುಮಾನಾ೯ಡು ಗ್ರಾ.ಪಂಚಾಯತ್ ಸದಸ್ಯ ರಮೇಶ್ ಶೆಟ್ಟಿ, ಶನೈಶ್ಚರ ಸಮಿತಿ ಅಮನಬೆಟ್ಟು ಇದರ ಅಧ್ಯಕ್ಷ ರಮೇಶ್ ಶೆಟ್ಟಿ ಪಣರೊ ಟ್ಟು, ಜಯ ಬಿ. ಟೀಚರ್, ಯುವತಿ ಮಂಡಲ ಅಧ್ಯಕ್ಷೆ ಶೋಭಾ,ಸಾಯಿ ಮಾರ್ನಾಡ್ ಸೇವಾ ಸಂಘದ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರುಗಳು, ಅಧ್ಯಾಪಕರು, ಸಿಬ್ಬಂದಿ ವರ್ಗ ಶಾಲಾ ಮಕ್ಕಳ ಹೆತ್ತವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
0 Comments