ಅಂಗನವಾಡಿ ಕೇಂದ್ರಗಳಲ್ಲಿ ಕಾಡುತ್ತಿದೆ ಮಕ್ಕಳ ಕೊರತೆ * ಫುಡ್ ವಿತರಣೆಗೆ ಮಾತ್ರ ಸೀಮಿತವಾಗಲಿದೆಯೇ ಅಂ. ಕೇಂದ್ರಗಳು..?

ಜಾಹೀರಾತು/Advertisment
ಜಾಹೀರಾತು/Advertisment

 ಅಂಗನವಾಡಿ ಕೇಂದ್ರಗಳಲ್ಲಿ ಕಾಡುತ್ತಿದೆ ಮಕ್ಕಳ ಕೊರತೆ

 * ಫುಡ್ ವಿತರಣೆಗೆ ಮಾತ್ರ ಸೀಮಿತವಾಗಲಿದೆಯೇ ಅಂ. ಕೇಂದ್ರಗಳು..?

ಮೂಡುಬಿದಿರೆ : ತಾಲೂಕಿನಲ್ಲಿರುವ ವಿವಿಧ ಅಂಗನವಾಡಿ ಕೇಂದ್ರಗಳು ಇತ್ತೀಚಿನ ದಿನಗಳಲ್ಲಿ ಮಕ್ಕಳ ಕೊರತೆಯನ್ನು ಎದುರಿಸುತ್ತಿದ್ದು ಹೀಗಾದರೆ ಮುಂದಿನ ದಿನಗಳಲ್ಲಿ ಗಭಿ೯ಣಿ ಮಹಿಳೆಯರಿಗೆ, ಪುಟಾಣಿ ಮಕ್ಕಳಿಗೆ ಕೇವಲ ಫುಡ್ ವಿತರಣೆ ಮಾಡಲು ಮಾತ್ರ ಸೀಮಿತವಾಗಲಿದೆಯೇ ಈ ಕೇಂದ್ರಗಳು ಎಂಬ ಸಂಶಯಗಳು ಮೂಡುತ್ತಿವೆ.

 ಮೂರರಿಂದ ಆರು ವಷ೯ದವರೆಗಿನ ಮಕ್ಕಳಿಗಾಗಿ ಅಕ್ಷರಾಭ್ಯಾಸ, ಬೆಳವಣಿಗೆಗೆ ಮತ್ತು ಗಭಿ೯ಣಿ, ಬಾಣಂತಿಯರಿಗೆ ಆರೋಗ್ಯಪೂಣ೯ ಆಹಾರವನ್ನು ವಿತರಿಸುವ ನಿಟ್ಟಿನಲ್ಲಿ ಸರಕಾರಗಳು ಅಂಗನವಾಡಿ ಕೇಂದ್ರಗಳನ್ನು ತೆರೆದಿದ್ದು ಕಳೆದ ಹಲವು ವಷ೯ಗಳಿಂದ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡುತ್ತಾ ಬಂದಿರುತ್ತದೆ.


   ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿಯೂಒಂದೊಂದು ಅಂಗನವಾಡಿ ಕೇಂದ್ರಗಳು ಉತ್ತಮ ರೀತಿಯಲ್ಲಿ ಕಾಯ೯ಚರಿಸುತ್ತಾ ಬಂದಿವೆ ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ಪುಟಾಣಿ ಸಂಖ್ಯೆಯೂ ಕಡಿಮೆಯಾಗುತ್ತಿತ್ತು ಸರಕಾರಿ ಶಾಲೆಗಳು ಮಕ್ಕಳ ಕೊರತೆಯನ್ನು ಎದುರಿಸುತ್ತಿರುವಂತಹ ಪರಿಸ್ಥಿತಿಯನ್ನು ಮುಂದಿನ ದಿನಗಳಲ್ಲಿ ಅಂಗನವಾಡಿ ಕೇಂದ್ರಗಳೂ ಎದುರಿಸುವ ದಿನಗಳೂ ದೂರದಲ್ಲಿಲ್ಲ.

 

 ಹಿಂದೆ ಅಂಗನವಾಡಿ ಕೇಂದ್ರಗಳಲ್ಲಿ 50-60 ರಷ್ಟು ಪುಟಾಣಿಗಳು ಇರುತ್ತಿದ್ದರು ಇವರೆಲ್ಲರಿಗೂ ಆರು ವಷ೯ ತುಂಬಿದ ನಂತರ ಅಲ್ಲಿಯೇ ಪಕ್ಕದಲ್ಲಿರುವ ಸರಕಾರಿ ಶಾಲೆಗಳಿಗೆ ದಾಖಲಾತಿ ಮಾಡುತ್ತಿದ್ದರು. 

 ಆದರೆ ನಂತರದ ದಿನಗಳಲ್ಲಿ ತಾಲೂಕಿನಲ್ಲಿ ಒಂದೆರಡು ಆಂಗ್ಲ ಮಾಧ್ಯಮ ಶಾಲೆಗಳು ತೆರೆದು ಕೊಂಡಿದ್ದು ಸ್ಥಿತಿವಂತರ ಮಕ್ಕಳೆಲ್ಲಾ ಅಲ್ಲಿನ ಎಲ್ ಕೆಜಿಗೆ ಹೋಗಲಾರಂಭಿಸಿದರು ಆದರೆ ಬಡವರ ಮಕ್ಕಳೆಲ್ಲಾ ಅಂಗವಾಡಿಗಳಿಗೆ ಬರಲಾರಂಭಿಸಿದರು ಆದರೆ ಇತ್ತೀಚಿನ ದಿನಗಳಲ್ಲಿ ಅಲಲ್ಲಿ ಪ್ಲೇ ಸ್ಕೂಲ್ ಗಳು ಆರಂಭಗೊಂಡಿದಲ್ಲದೆ ತಾಲೂಕಿನ ಕೆಲವು ಸರಕಾರಿ ಶಾಲೆಗಳಲ್ಲೂ ಎಲ್ ಕೆಜಿ ತರಗತಿಗಳು ಆರಂಭಗೊಂಡಿದ್ದರಿಂದ ಅಂಗವಾಡಿ ಕೇಂದ್ರಗಳಲ್ಲಿ ಮಕ್ಕಳ ಕೊರತೆ ಕಾಡಲು ಕಾರಣವಾಗಿದೆ.

ವರದಿ : ಪ್ರೇಮಶ್ರೀ ಕಲ್ಲಬೆಟ್ಟು

Post a Comment

0 Comments