ಸಾಯೀ ಮಾನಾ೯ಡ್ ಸೇವಾ ಸಂಘದಿಂದ ಚಿಕಿತ್ಸೆಗೆ ನೆರವು

ಜಾಹೀರಾತು/Advertisment
ಜಾಹೀರಾತು/Advertisment

 ಸಾಯೀ ಮಾನಾ೯ಡ್ ಸೇವಾ ಸಂಘದಿಂದ ಚಿಕಿತ್ಸೆಗೆ ನೆರವು

ಮೂಡುಬಿದಿರೆ : ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್( ರಿ.)ಅಮನಬೆಟ್ಟು, ಪಡುಮಾರ್ನಾಡ್ ಇದರ

67ನೇ ಸೇವಾ ಯೋಜನೆಯ

ಜೂನ್ ತಿಂಗಳ 3ನೇ ಯೋಜನೆಯನ್ನು ಅನಾರೋಗ್ಯದಿಂದ ಬಳಲುತ್ತಿರುವ 


ಬಂಟ್ವಾಳ ತಾಲೂಕಿನ ನಾವೂರು ಮೈದಾನ್ ಗುಡ್ಡೆ ಪರಿಸರದ ವಿಮಲ ಎಂಬವರ ಚಿಕಿತ್ಸೆಗೆ ರೂ. 10,000ವನ್ನು ನೆರವು ನೀಡಲಾಯಿತು.


ವಿಮಲ ಎಂಬವರು ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದು, ಇವರಿಗೆ 3ಮಕ್ಕಳಿದ್ದು, ಮಗ ಶಾಮಿಯಾನ ದ ಕೆಲಸಕ್ಕೆ ಹೋಗುತ್ತಿದ್ದು, ದೊಡ್ಡ ಮಗಳು ಮದುವೆ ಯಾಗಿದ್ದು, ಇನ್ನೊಬ್ಬಳು ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಗಂಡ ಮರಣ ಹೊಂದಿದ್ದಾರೆ.  

ವಿಮಲ ಅವರಿಗೆ ಒಂದೇ ತಿಂಗಳಲ್ಲಿ 3ಬಾರಿ ಶಸ್ತ್ರಚಿಕಿತ್ಸೆ ಆಗಿರುತ್ತದೆ. (ಗರ್ಭ ಕೋಶ, ಹಾಗೂ ಕರುಳಿನ ರಕ್ತಸ್ರಾವ ತೊಂದರೆ).ಇವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸುಮಾರು 5ರಿಂದ 6ಲಕ್ಷ ಖರ್ಚು ಆಗಬಹುದು ಎಂದು ವೈದ್ಯರು ತಿಳಿಸಿರುತ್ತಾರೆ. ಅವರ ಕಷ್ಟ ಕ್ಕೆ ಸ್ಪಂದಿಸಿ ಮೂಡುಬಿದ್ರಿ ಮಾರಿಗುಡಿ ದೇವಸ್ಥಾನದ ಆವರಣದಲ್ಲಿ ಗುರುವಾರದಂದು

 10000 ರೂಪಾಯಿಯ ಸೇವಾ ಧನವನ್ನು ಹಸ್ತಾಂತರಿಸಿದೆ.

Post a Comment

0 Comments