ಹಿಂಜಾವೇ ಯ ಮುಖಂಡ ಸಮಿತ್ ರಾಜ್ ದರೆಗುಡ್ಡೆಗೆ 15 ದಿನಗಳ ನ್ಯಾಯಾಂಗ ಬಂಧನ
ಮೂಡುಬಿದಿರೆ:ಬಸ್ಸಿನ ಮಾಲಕರೊಬ್ಬರು ತನ್ನ ಬಸ್ಸಿಗೆ ಹಾನಿಗೊಳಿಸಿರುವುದಲ್ಲದೆ ತನ್ನಿಂದ ರೂ.5ಲಕ್ಷ ಬೇಡಿಕೆ ಮುಂದಿಟ್ಟು ವಸೂಲಿ ನಡೆಸಿದ್ದಾನೆ ಎಂಬ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿ ಹಿಂಜಾವೆ ಮುಖಂಡ ಸಮಿತ್ ರಾಜ್ ದರೆಗುಡ್ಡೆಯನ್ನು ಬಂಧಿಸಲಾಗಿದೆ.
ಮೈಟ್ ಕಾಲೇಜು ಬಳಿ ಇತ್ತೀಚೆಗೆ ನಡೆದ ರಸ್ತೆ ಅಪಘಾತವೊಂದರಲ್ಲಿ ಗಾಯಗೊಂಡಿರುವವರಿಗೆ ಬಸ್ ಮಾಲಕ ಸ್ಥಳದಲ್ಲಿಯೇ ಪರಿಹಾರ ನೀಡುವಂತೆ ಎಬಿವಿಪಿ, ಬಿಜೆಪಿ ಸಹಿತ ಸಾರ್ವಜನಿಕರು ಪ್ರತಿಭಟಿಸಿದ್ದರು. ಈ ಸಂದರ್ಭದಲ್ಲಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಹಿಂದೂ ಜಾಗರಣ ವೇದಿಕೆಯ ಮುಖಂಡ ಸಮಿತ್ ರಾಜ್ ದರೆಗುಡ್ಡೆಯನ್ನು ಮೂಡುಬಿದಿರೆ ಪೊಲೀಸರು ಗುರುವಾರ ಕಾಕ೯ಳದ ವಾಣಿಜ್ಯ ಸಂಕೀಣ೯ವೊಂದರಿಂದ ಬಂಧಿಸಿ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
2024ರ ನವಂಬರ್ 11ರಂದು ಮಿಜಾರು ಬಳಿ ಘಟನೆ ನಡೆದಿತ್ತು. ಘಟನೆಯಲ್ಲಿ ಖಾಸಗಿ ಬಸ್ 'ಮಾಸ್ಟರ್'' ಢಿಕ್ಕಿ ಹೊಡೆದ ಪರಿಣಾಮವಾಗಿ ದ್ವಿಚಕ್ರ ಸವಾರರಾದ ಸುಮಿತ್ರಾ ಮತ್ತು ಅವರ ಮಗಳು ಸಾನ್ವಿ ಗಾಯಗೊಂಡಿದ್ದರು. ಬಸ್ಸು ಚಾಲಕನ ನಿಲ೯ಕ್ಷ್ಯದ ಚಾಲನೆಯಿಂದಾಗಿ ಘಟನೆಗೆ ಸಂಭವಿಸಿದೆಂದು ಈ ಸಂದಭ೯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದರಲ್ಲದೆ ಹಿಂದೂ ಪರ ಸಂಘಟನೆಯ ಕಾಯ೯ಕತ೯ರು ಹೋರಾಟಕ್ಕೆ ಇಳಿದಿದ್ದರು.
ಆ ಹೋರಾಟದಲ್ಲಿ ಸಮಿತ್ ರಾಜ್ ದರೆಗುಡ್ಡೆಯೂ ಪಾಲ್ಗೊಂಡು ಗಾಯಾಳುಗಳಿಗೆ ಪರಿಹಾರ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಸಾಂಘಿಕ ಹೋರಾಟಕ್ಕೆ ಮಣಿದ ಬಸ್ ಮಾಲಿಕರು ಘಟನೆ ಸಂಭವಿಸಿದ ಕೆಲವೇ ಗಂಟೆಗೊಳಗಾಗಿ ಬಸ್ ಮಾಲಕ ರೂ 5ಲಕ್ಷವನ್ನು ಗಾಯಾಳುಗಳಿಗೆ ಪರಿಹಾರ ನೀಡಿದ್ದರು.
ಆದರೆ ಈ ವಿಚಾರದಲ್ಲಿ ತನಗೆ ಬೆದರಿಕೆ ಹಾಗೂ ವಸೂಲಿಗೆ ಇಳಿದಿದ್ದರು ಎಂದು ಆರೋಪಿಸಿ ಬಸ್ ಮಾಲೀಕರು ಕೇಸು ದಾಖಲಿಸಿದ್ದರು.
0 Comments