ಹಿಂಜಾವೇ ಯ ಮುಖಂಡ ಸಮಿತ್ ರಾಜ್ ದರೆಗುಡ್ಡೆ ಬಿಡುಗಡೆ

ಜಾಹೀರಾತು/Advertisment
ಜಾಹೀರಾತು/Advertisment

 ಹಿಂಜಾವೇ ಯ ಮುಖಂಡ ಸಮಿತ್ ರಾಜ್ ದರೆಗುಡ್ಡೆ ಬಿಡುಗಡೆ

ಮೂಡುಬಿದಿರೆ : ಎರಡು ದಿನಗಳ ಹಿಂದೆ ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲು ಸೇರಿದ್ದ ಹಿಂದೂ ಜಾಗರಣ ವೇದಿಕೆಯ ಮುಖಂಡ ಸಮಿತ್ ರಾಜ್ ದರೆಗುಡ್ಡೆಗೆ ಜಾಮೀನಿನ ಮೇಲೆ ಶುಕ್ರವಾರ ಬಿಡುಗಡೆಯಾಗಿದೆ.

ಮೈಟ್ ಕಾಲೇಜು ಬಳಿ ಇತ್ತೀಚೆಗೆ ನಡೆದ  ರಸ್ತೆ ಅಪಘಾತವೊಂದರಲ್ಲಿ ಗಾಯಗೊಂಡಿರುವವರಿಗೆ ಬಸ್ ಮಾಲಕ ಸ್ಥಳದಲ್ಲಿಯೇ ಪರಿಹಾರ ನೀಡುವಲ್ಲಿ ಮುಂಚೂಣಿಯಲ್ಲಿದ್ದು ಹೋರಾಟ ನಡೆಸಿದ್ದ ಹಿಂದೂ ವೇದಿಕೆಯ ಮುಖಂಡ ಸಮಿತ್ ರಾಜ್ ದರೆಗುಡ್ಡೆಯನ್ನು ಮೂಡುಬಿದಿರೆ ಪೊಲೀಸರು ಜೂ. 26ರಂದು  ಕಾಕ೯ಳದ ವಾಣಿಜ್ಯ ಸಂಕೀಣ೯ವೊಂದರಿಂದ ಬಂಧಿಸಿದ್ದು ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು.

 2024ರ ನವಂಬರ್ 11ರಂದು ಮಿಜಾರು ಬಳಿ ಘಟನೆ ನಡೆದಿತ್ತು. ಘಟನೆಯಲ್ಲಿ ಖಾಸಗಿ ಬಸ್ 'ಮಾಸ್ಟರ್'' ಢಿಕ್ಕಿ ಹೊಡೆದ ಪರಿಣಾಮವಾಗಿ ದ್ವಿಚಕ್ರ ಸವಾರರಾದ ಸುಮಿತ್ರಾ ಮತ್ತು ಅವರ ಮಗಳು ಸಾನ್ವಿ ಗಾಯಗೊಂಡಿದ್ದರು. ಬಸ್ಸು ಚಾಲಕನ ನಿಲ೯ಕ್ಷ್ಯದ ಚಾಲನೆಯಿಂದಾಗಿ ಘಟನೆಗೆ ಸಂಭವಿಸಿದೆಂದು ಈ ಸಂದಭ೯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದರಲ್ಲದೆ ಹಿಂದೂ ಪರ ಸಂಘಟನೆಯ ಕಾಯ೯ಕತ೯ರು ಹೋರಾಟಕ್ಕೆ ಇಳಿದಿದ್ದರು.

ಆ ಹೋರಾಟದಲ್ಲಿ ಸಮಿತ್ ರಾಜ್ ದರೆಗುಡ್ಡೆ ಮುಂಚೂಣಿಯಲ್ಲಿದ್ದು ಗಾಯಾಳುಗಳಿಗೆ ಪರಿಹಾರ ನೀಡಬೇಕೆಂದು ಪಟ್ಟು ಹಿಡಿದಿದ್ದರಿಂದ ಅಪಘಾತ ಸಂಭವಿಸಿದ ಕೆಲವೇ ಗಂಟೆಗೊಳಗಾಗಿ ಬಸ್ ಮಾಲಕ ರೂ 5ಲಕ್ಷವನ್ನು ಗಾಯಾಳುಗಳಿಗೆ ಪರಿಹಾರ ನೀಡಿದ್ದರು.

 ಇತ್ತ ಬಸ್ಸಿನ ಮಾಲಕ ಬಸ್ಸಿಗೆ ಹಾನಿಗೊಳಿಸಿರುವುದಲ್ಲದೆ ತನ್ನಿಂದ ರೂ.5ಲಕ್ಷ ಬೇಡಿಕೆ ಮುಂದಿಟ್ಟು ವಸೂಲಿ ನಡೆಸಿರುವ ಬಗ್ಗೆ  ಪೊಲೀಸರಿಗೆ ದೂರು ನೀಡಿದ್ದರು. ಇದೇ ವಿಷಯವನ್ನು ಮುಂದಿಟ್ಟು ಪೊಲೀಸರು ತನಿಖೆ ನಡೆಸಿ ಸಮಿತ್ ರಾಜ್ ನನ್ನು ಬಂಧಿಸಿದ್ದರು.

Post a Comment

0 Comments