ಮಹಾವೀರ ಜನ್ಮ ಕಲ್ಯಾಣೋತ್ಸವ : ಮೂಡುಬಿದಿರೆಯಲ್ಲಿ ವೈ ಭವದ ಮೆರವಣಿಗೆ
ಮೂಡುಬಿದಿರೆ: ಭಗವಾನ್ ಶ್ರೀ ಮಹಾವೀರ ಸ್ವಾಮಿಯ, 2624ನೇ ಜನ್ಮ ಕಲ್ಯಾಣ ಮಹೋತ್ಸವ, ಮಹಾವೀರ ಜಯಂತಿಯ ದಿನವಾದ ಗುರುವಾರ ಸಂಜೆ ಬೆಟ್ಕೇರಿಯಿಂದ ಸಾವಿರ ಕಂಬದ ಬಸದಿ ವರೆಗೆ ಮಹಾವೀರ ಸ್ವಾಮಿಯ ವೈ ಭವದ ಮೆರವಣಿಗೆಯು ನಡೆಯಿತು.
ಜೈನ ಮಠದ ಭಟ್ಟಾರಕ ಚಾರುಕೀತಿ೯ ಪಂಡಿತಾಚಾಯ೯ವಯ೯ ಸ್ವಾಮೀಜಿ ಮೆರವಣಿಗೆಗೆ ಚಾಲನೆಯನ್ನು ನೀಡಿದರು. ಮಹಾವೀರ ಸ್ವಾಮಿಯ ಮೂತಿ೯ ಮತ್ತು ಧವಳಗ್ರಂಥಗಳನ್ನು ಮೆರವಣಿಗೆಯಲ್ಲಿ ಹೊತ್ತು ತರಲಾಯಿತು.
ನಂತರ 125 ಮಂದಿಯಿಂದ ಸಾಮೂಹಿಕ ಅಷ್ಟ ವಿಧಾಚ೯ನೆ ಸೇವೆ ನಡೆಯಿತು.
ವಕೀಲ ಎಂ. ಬಾಹುಬಲಿ ಪ್ರಸಾದ್, ಪಟ್ಣಶೆಟ್ಟಿ ಎಂ. ಸುದೇಶ್ ಕುಮಾರ್, ಉದ್ಯಮಿ ಶೈಲೇಂದ್ರ ಕುಮಾರ್, ಜೈನ್ ಮಿಲನ್ ನ ರಾಜೇಶ್ ಪುಷ್ಪರಾಜ್ ಜೈನ್, ಸವ೯ಮಂಗಳ ಮಹಿಳಾ ಮಂಡಲದ ಅಧ್ಯಕ್ಷೆ ಮಂಗಳ, ಕಾಯ೯ದಶಿ೯ ಆರತಿ, ನೋಟರಿ ಶ್ವೇತಾ ಜೈನ್, ಅನಂತವೀರ್, ರಾಜವಮ೯ ಬೈಲಂಗಡಿ ಮತ್ತಿತರರು ಈ ಸಂದಭ೯ದಲ್ಲಿದ್ದರು.
ಮಿತ್ರಸೇನ ಇಂದ್ರ ಮತ್ತು ಸೂರಜ್ ಪೂಜಾವಿಧಿವಿಧಾನಗಳನ್ನು ನೆರವೇರಿಸಿದರು.
0 Comments