ಇಟಲದಲ್ಲಿ ಬ್ರಹ್ಮಕಲಶೋತ್ಸವ ತಯಾರಿ: ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಭೇಟಿ
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಖಾವಂದರ ಸಹೋದರ ಶ್ರೀ ಹರ್ಷೇಂದ್ರ ಕುಮಾರ್ ರವರು ಇಂದು ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗಿರುವ ಮಹತೋಭಾರ ಶ್ರೀ ಸೋಮನಾಥೇಶ್ವರ ಕ್ಷೇತ್ರ ಇಟಲ ಇಲ್ಲಿಗೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದು ದೇಗುಲದ ಕೆಲಸವನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಪಣಪಿಲ ಅರಮನೆಯ ಪ್ರಮುಖರು, ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಮುಖರು ಮತ್ತು ಅರ್ಚಕ ವರ್ಗದವರು ಉಪಸ್ಥಿತರಿದ್ದರು
.
0 Comments