ರಜೆಯಲ್ಲಿ ಊರಿಗೆ ಆಗಮಿಸಿರುವ ಬಿಎಸ್ ಎಫ್ ಯೋಧನಿಗೆ ಭವ್ಯ ಸ್ವಾಗತ

ಜಾಹೀರಾತು/Advertisment
ಜಾಹೀರಾತು/Advertisment

 ರಜೆಯಲ್ಲಿ ಊರಿಗೆ ಆಗಮಿಸಿರುವ ಬಿಎಸ್ ಎಫ್ ಯೋಧನಿಗೆ ಭವ್ಯ ಸ್ವಾಗತ

ಮೂಡುಬಿದಿರೆ : ಬಿಎಸ್ಎಫ್ ನಲ್ಲಿ ಆರು ತಿಂಗಳ ಕತ೯ವ್ಯ ನಿವ೯ಹಿಸಿ ಒಂದು ತಿಂಗಳ ರಜೆಯಲ್ಲಿ ಊರಿಗೆ ಮರಳಿರುವ ಮೂಡುಬಿದಿರೆ ತಾಲೂಕಿನ ಮಾರೂರು ಗ್ರಾಮದ ಸಂದೀಪ್ ಶೆಟ್ಟಿ ಅವರನ್ನು ಪುರಸಭೆಯ ಉಪಾಧ್ಯಕ್ಷ ನಾಗರಾಜ ಪೂಜಾರಿ, ವಿವಿಧ ಸಂಘಟನೆಯ ಪದಾಧಿಕಾರಿಗಳು ಮತ್ತು ಕುಟುಂಬಸ್ಥರು ಭಾನುವಾರ ಬೆಳಿಗ್ಗೆ ಮೂಡುಬಿದಿರೆಯ ಬಸ್ ನಿಲ್ದಾಣದ ಆವರಣದಲ್ಲಿ ರಾಷ್ಟ್ರಧ್ವಜವನ್ನು ನೀಡಿ ಸ್ವಾಗತಿಸಿದರು.


   ನಂತರ ಮಾತನಾಡಿದ ನಾಗರಾಜ ಪೂಜಾರಿ ಅವರು ಸತತ ಪರಿಶ್ರಮ ಮತ್ತು ಪ್ರಯತ್ನದೊಂದಿಗೆ,  ನಮ್ಮೂರಿನ ಯುವಕನೊಬ್ಬ ಬಿಎಸ್ ಎಫ್ ನಲ್ಲಿ ಒಂದು ವಷ೯ದ ತರಬೇತಿಯನ್ನು ಪಡೆದು ಆರು ತಿಂಗಳ ಕತ೯ವ್ಯವನ್ನು ಮುಗಿಸಿರುವ ಬಗ್ಗೆ ಹೆಮ್ಮೆಯಾಗುತ್ತಿದೆ. ದೈವ ದೇವರ ಅನುಗ್ರಹದಿಂದಾಗಿ ದೇಶ ಕಾಯುವ ಸೈನಿಕನಾಗಿದ್ದು  ಮುಂದಿನ ದಿನಗಳಲ್ಲಿ ಸೈನ್ಯದಲ್ಲಿ ಉನ್ನತವಾದ ಹುದ್ದೆಗಳನ್ನು ಅಲಂಕರಿಸುವಂತ್ತಾಗಲಿ ಎಂದು ಶುಭ ಹಾರೈಸಿದರು.


  ಯೋಧ ಸಂದೀಪ್ ಶೆಟ್ಟಿ ಮಾರೂರು ಮಾತನಾಡಿ ಭಾರತದ ಸೈನಿಕನಾಗುವ ಹಾದಿ ಸುಲಭವಾಗಿಲ್ಲ. ನಮ್ಮ ತುಳುನಾಡಿನ ದೈವ ದೇವರ ಅನುಗ್ರಹ ಮತ್ತು ಹೆತ್ತವರ ಪ್ರೋತ್ಸಾಹ ಹಾಗೂ ಊರವರ ಸಹಕಾರದಿಂದ ಅದು ಸಾಧ್ಯವಾಗಿದೆ. ತಾನು ಒಬ್ಬನೇ ಮಗನಾಗಿದ್ದರೂ ಕೂಡಾ ಹೆತ್ತವರು ನನ್ನನ್ನು ಸೇನೆಗೆ  ಸೇರಿಸಿ ಭಾರತ ಮಾತೆಯ ಸೇವೆಯನ್ನು ಮಾತಲು ಅವಕಾಶ ಕಲ್ಪಿಸಿರುವುದಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

 ತಾನು ಬಾಂಗ್ಲಾದ ಗಡಿಯಲ್ಲಿ ಕತ೯ವ್ಯ ನಿವ೯ಹಿಸುತ್ತಿದ್ದು ಅಲ್ಲಿ ನನಗೆ ಒಬ್ಬನೇ ಒಬ್ಬ ತುಳು ಭಾಷೆಯನ್ನು ಮಾತನಾಡುವವ ಸಿಕ್ಕಿಲ್ಲ ನಾನು ಊರಿಗೆ ಬಂದೇ ತುಳು ಮಾತನಾಡಿದ್ದು ಎಂದು ಬೇಸರ ವ್ಯಕ್ತ ಪಡಿಸಿದ ಯೋಧ ತುಳುನಾಡಿನ ಹೆಚ್ಚೆಚ್ಚು ಯುವಕರು ಸೈನ್ಯಕ್ಕೆ ಸೇರಲು ಬಯಸಬೇಕೆಂದು ಹೇಳಿದರು.

  ಯೋಧ ಸಂದೀಪ್ ಶೆಟ್ಟಿಯ ಹೆತ್ತವರಾದ ರತಿ ರಾಜು ಶೆಟ್ಟಿ, ಬಾವಂದಿರಾದ ನಾಗರಾಜ್ ಶೆಟ್ಟಿ ಅಂಬೂರಿ, ಸತೀಶ್ ಶೆಟ್ಟಿ, ಪುರಸಭೆಯ ಮಾಜಿ ಸದಸ್ಯ ದಿನೇಶ್ ಪೂಜಾರಿ, ಊರಿನ ಗಣ್ಯರಾದ ಶಂಭು ಶೆಟ್ಟಿ,   ಸುನೀಲ್ ಶೆಟ್ಟಿ, ಶಂಕರ್ ಮಾರೂರು, ಯಶೋದರ್ ಕುಲಾಲ್, ಹಿರಿಯರು ಈ ಸಂದಭ೯ದಲ್ಲಿದ್ದರು.

  ಯೋಧನನ್ನು ಮೂಡುಬಿದಿರೆಯಿಂದ ಮಾರೂರಿಗೆ ತೆರೆದ ಜೀಪಿನಲ್ಲಿ ಮೆರವಣಿಗೆಯ ಮೂಲಕ ಕರೆದುಕೊಂಡು ಹೋಗಲಾಯಿತು.

Post a Comment

0 Comments