ಪುರಸಭಾ ವ್ಯಾಪ್ತಿಯಲ್ಲಿ ಕಾಯ೯ನಿವ೯ಹಿಸಲಿವೆ ಸೋಲಾರ್ ಸಿಸಿ ಕೆಮರಾಗಳು

ಜಾಹೀರಾತು/Advertisment
ಜಾಹೀರಾತು/Advertisment

 ಪುರಸಭಾ ವ್ಯಾಪ್ತಿಯಲ್ಲಿ ಕಾಯ೯ನಿವ೯ಹಿಸಲಿವೆ ಸೋಲಾರ್ ಸಿಸಿ ಕೆಮರಾಗಳು

ಮೂಡುಬಿದಿರೆ : ಪುರಸಭಾ ವ್ಯಾಪ್ತಿಯ ರಸ್ತೆ ಬದಿಗಳಲ್ಲಿ ಕಸವನ್ನು ತಂದು ಹಾಕುವವರು ಯಾರೆಂದು ತಿಳಿಯಲು 10 ಸೋಲಾರ್ ಸಿಸಿ ಕೆಮರಾಗಳನ್ನು ಅಳವಡಿಸಿ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಜಂಟಿ ಕಾಯ೯ಚರಣೆ ನಡೆಸಲಾಗುವುದೆಂದು ಎಂದು ಮುಖ್ಯಾಧಿಕಾರಿ ಇಂದು ಅವರು ಸಭೆಯ ಗಮನಕ್ಕೆ ತಂದರು.

ಅವರು ಪುಸಭಾಧ್ಯಕ್ಷೆ ಜಯಶ್ರೀ ಕೇಶವ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಪುರಸಭೆಯ ಸಭಾಂಗಣದಲ್ಲಿ ನಡೆದ ಮಾಸಿಕ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. 

ಪುರಸಭಾ ವ್ಯಾಪ್ತಿಯಲ್ಲಿ 45 ಸಿ ಸಿ ಕೆಮೆರಾಗಳಿದ್ದು ಅವುಗಳು ಉಪಯೋಗ ಇಲ್ಲದಂತ್ತಾಗಿದೆ. ಎಂದು ಸದಸ್ಯರಾದ ಕೊರಗಪ್ಪ, ಪುರಂದರ ದೇವಾಡಿಗ, ಸುರೇಶ್ ಪ್ರಭು, ರಾಜೇಶ್ ನಾಯ್ಕ್ , ಇಕ್ಬಾಲ್ ಕರೀಂ ಅವರು ಸಭೆಯ ಗಮನಸೆಳೆದಾಗ ಮಾತನಾಡಿದ ಮುಖ್ಯಾಧಿಕಾರಿ ಅವರು ಸೋಲಾರ್ ಸಿಸಿ ಕೆಮರಾಗಳಿಗೆ ಟೆಂಡರ್ ಆಗಿದ್ದು ಅದನ್ನು ಒಂದು ತಿಂಗಳೊಳಗೆ ಅಳವಡಿಸಲಾಗುವುದು ಮತ್ತು ಎಲ್ಲಾ ಕೆಮರಾಗಳ ಕಂಟ್ರೋಲ್ ಪುರಸಭೆಯಲ್ಲಿರುತ್ತದೆ ಇವುಗಳನ್ನು ಸಮರ್ಪಕವಾಗಿ ನಿವ೯ಹಿಸುವ ನಿಟ್ಟಿನಲ್ಲಿ ಓವ೯ ಸ್ಟಾಫ್ ನ್ನು ನಿಯೋಜಿಸಲಾಗುವುದೆಂದು ತಿಳಿಸಿದರು.


   ಕಟ್ಟಡಗಳ ಮೇಲೆ ಜಾಹೀರಾತು ಫಲಕಗಳನ್ನು ಅಳವಡಿಸಲು ಅನುಮತಿ ನೀಡಬಾರದೆಂದು, ಮೆಸ್ಕಾಂ ಬಳಿ ರಸ್ತೆ ಅಗಲ ಕಡಿಮೆಯಿದೆ ಮತ್ತು ರಸ್ತೆ ತಾಗಿಕೊಂಡೆ ಗೂಡಂಗಡಿಗಳು ಇರುವುದರಿಂದ ರಸ್ತೆ ಅಪಘಾತಗಳು ಆಗುವ ಸಂಭವವಿದೆ ಆದ್ದರಿಂದ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವಂತೆ ಸದಸ್ಯ ಸುರೇಶ್ ಕೋಟ್ಯಾನ್ ಕೇಳಿಕೊಂಡರು.

ಗೂಡಂಗಡಿಗಳನ್ನು ತೆರವು ಮಾಡುವುದು ಬೇಡ ರಸ್ತೆಯನ್ನು ಅಗಲೀಕರಣಗೊಳಿಸಲು ಪ್ರಯತ್ನಿಸೋಣ ಎಂದು ಉಪಾಧ್ಯಕ್ಷ ನಾಗರಾಜ ಪೂಜಾರಿ ಭರವಸೆ ನೀಡಿದರು.

 ಮೂಡುಬಿದಿರೆ ಪೇಟೆಯಲ್ಲಿರುವ ಶೌಚಾಲಯಗಳಲ್ಲಿ ನೀರಿಲ್ಲದಿರುವುದರಿಂದ ಪ್ರಯಾಣಿಕರು ತೊಂದರೆಯನ್ನು ಅನುಭವಿಸುತ್ತಿದ್ದಾರೆ ಆದ್ದರಿಂದ ಸರಿಯಾಗಿ ನೀರಿನ ವ್ಯವಸ್ಥೆಯನ್ನು ಕಲ್ಪಿಸಿ, ರಾಜೀವ್ ಗಾಂಧಿ ಕಾಂಪ್ಲೆಕ್ಸ್ ಖಾಸಗಿ ಬಸ್ ನಿಲ್ದಾಣದಲ್ಲಿ ಪಾಕಿ೯ಂಗ್ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. 23 ಸದಸ್ಯರಿದ್ದರೂ ಸರಿಯಾದ ನಿಧಾ೯ರ ಕೈಗೊಳ್ಳಲು ಸಾಧ್ಯವಾಗದಿರುವ ಬಗ್ಗೆ ಸದಸ್ಯ ಕೊರಗಪ್ಪ ಅವರು ಬೇಸರ ವ್ಯಕ್ತಪಡಿಸಿದರು.

ಸರಕಾರಿ ಆಸ್ಪತ್ರೆಗೆ ಅಗತ್ಯವಿರುವ ಶವಾಗಾರ ಕಟ್ಟಡ ನೀಡುವ ಬಗ್ಗೆ ಉಪಾಧ್ಯಕ್ಷ ನಾಗರಾಜ ಪೂಜಾರಿ ಸಭೆಯ ಗಮನಕ್ಕೆ ತಂದರು. ಜಿಲ್ಲಾ ಪಂಚಾಯತ್ ನ ವ್ಯಾಪ್ತಿಗೆ ಆಸ್ಪತ್ರೆ ಬರುವುದರಿಂದ ನಮಗೆ ಶೀತಲೀಕರಣ ಕೊಠಡಿಯನ್ನು ನೀಡಲು ಬರುವುದಿಲ್ಲ ಈ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆದುಕೊಂಡು ಮುಂದುವರೆಯೋಣ ಎಂದು ಪಿ. ಕೆ. ಥೋಮಸ್, ಕೊರಗಪ್ಪ ಸುರೇಶ್ ಕೋಟ್ಯಾನ್ ಸಲಹೆ ನೀಡಿದರು. ಹಿಂದೂ ರುದ್ರಭೂಮಿ ನವೀಕರಣಕ್ಕೆ ರೂ. 10 ಲಕ್ಷ ವನ್ನು ಇಡಲಾಗಿದೆ ಎಂದು ಉಪಾಧ್ಯಕ್ಷರು ತಿಳಿಸಿದರು.

.ಪ.ಜಾ.,ಪ.ವರ್ಗದ ನೀರು ಬಿಲ್ಲು ಬಾಕಿ ಇರುವವರ ಅದಾಲತ್ ನಡೆಸಿ ಎಂದು ವಿಲೇವಾರಿ ಮಾಡದಿರುವ ಬಗ್ಗೆ ಸದಸ್ಯರಾದ ಶ್ವೇತಾ, ಶಕುಂತಲಾ ಆಕ್ಷೇಪ ವ್ಯಕ್ತಪಡಿಸಿದರು. ಕಳೆದ ಎರಡೂವರೆ ವರ್ಷದ ಹಿಂದೆ ಟೆಂಡರ್ ಆದ ಹಳೆ ಬಸ್ ನಿಲ್ದಾಣದ ಎದುರುಗಡೆ ಹಾಸಿರುವ ಚಪ್ಪಡಿಕಲ್ಲು ಮುರಿದ ಸ್ಥಿತಿಯಲ್ಲಿದ್ದು ಈ ವರ್ಷ ಮಳೆಗಾಲಕ್ಕೆ ಮೊದಲು ಒಳ ಚರಂಡಿ ಅಗಲಗೊಳಿಸಿ ಸರಿಪಡಿಸಬೇಕೆಂದು ಸದಸ್ಯ ರಾಜೇಶ್ ನಾಯ್ಕ್ ಹೇಳಿದರು.

ಮಳೆಗಾಲಕ್ಕೆ ಮೊದಲು ಡಾಮರೀಕರಣ, ಬೀದಿ ದೀಪ ಸಮರ್ಪಕಗೊಳಿಸಲು ಸುರೇಶ್ ಪ್ರಭು ಒತ್ತಾಯಿಸಿದರು. ಮೂಡುಬಿದಿರೆಯ ಹದಿನೆಂಟು ಕೆರೆಗಳನ್ನು ವಿವಿಧ ಸಂಘ ಸಂಸ್ಥೆಗಳು ಸಹಕಾರದಿಂದ ಅಭಿವೃದ್ಧಿ ಪಡಿಸುವ ಕಾರ್ಯ ಯೋಜನೆಗಳನ್ನು ಪಿ.ಕೆ.ಥೋಮಸ್ ಸಭೆಯಲ್ಲಿ ಪ್ರಸ್ತಾಪಿಸಿದರು.ಈ ನಿಟ್ಟಿನಲ್ಲಿ ಅಧ್ಯಯನ ನಡೆಸಿ ಕಾರ್ಯಗತ ಮಾಡಲು ಮುಖ್ಯಾಧಿಕಾರಿಗಳಿಗೆ ಸಭೆ ಒಪ್ಪಿಗೆಯನ್ನು ಸೂಚಿಸಿತು. ಸ್ವಚ್ಛ ಭಾರತ್ ಫಂಡ್ ನಿಂದ ಡಂಪಿಂಗ್ ಯಾರ್ಡ್ ಸಮರ್ಥ ನಿರ್ವಹಣೆಯಾಗಿದ್ದು ಸರಕಾರದ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಮುಖ್ಯಾಧಿಕಾರಿ ಇಂದು ಸಭೆಯ ಗಮನಕ್ಕೆ ತಂದರು.

ಪ್ರಸಾದ್ ಕುಮಾರ್, ರೂಪಾ ಶೆಟ್ಟಿ, ದಿವ್ಯಾ ಜಗದೀಶ್, ಸೌಮ್ಯ ಶೆಟ್ಟಿ,ಸ್ಥಾಯೀ ಸಮಿತಿ ಅಧ್ಯಕ್ಷೆ ಸ್ವಾತಿ ಪ್ರಭು, ಎಂಜಿನಿಯರ್ ರಾಜೇಶ್, ಶಶಿರೇಖಾ ಚಚೆ೯ಯಲ್ಲಿ ಪಾಲ್ಗೊಂಡಿದ್ದರು.

Post a Comment

0 Comments