ರಾಷ್ಟ್ರಮಟ್ಟದ ಪ್ರಬಂಧ ಸ್ಪಧೆ೯ : ಅಳಿಯೂರು ಸ. ಪ್ರೌ. ಶಾಲೆಯ ತನ್ವಿ ತೃತೀಯ
ಮೂಡುಬಿದಿರೆ : ಆಧುನಿಕ ಕಾಲದಲ್ಲಿ ಅಂಚೆ ಪತ್ರಗಳ ಪಾತ್ರ’ ಎಂಬ ವಿಷಯದಲ್ಲಿ ನಡೆದ ರಾಜ್ಯ, ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯದ ಪುತ್ತೂರು ಅಂಚೆ ವಿಭಾಗದಿಂದ ಅಳಿಯೂರು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಕು.ತನ್ವಿ ತೃತೀಯ ಬಹುಮಾನ ಪಡೆದಿದ್ದಾರೆ.
ಈ ಸ್ಪರ್ಧೆಯಲ್ಲಿ ರಾಜ್ಯದ ಬೇರೆ ಬೇರೆ ಕಡೆಯ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.ತನ್ವಿ ತೃತೀಯ ಬಹುಮಾನ ಪಡೆಯುವುದರೊಂದಿಗೆ 5 ಸಾವಿರ ನಗದು ಪಡೆದಿದ್ದಾರೆ.
ಬಹುಮಾನ ವಿಜೇತೆಗೆ ಅಳಿಯೂರು ಶಾಖೆಯ ಅಂಚೆಪಾಲಕ ವೇದಪ್ರಕಾಶ್, ಸಹಾಯಕ ಅಂಚೆಪಾಲಕ ದಾನೇಶ್ ಬಹುಮಾನ ವಿತರಿಸಿದರು.ಅಳಿಯೂರು ಪ್ರೌಢಶಾಲಾ ಶಿಕ್ಷಕ ಸುಬ್ರಹ್ಮಣ್ಯ ಅವರು ಉಪಸ್ಥಿತರಿದ್ದರು.
ಬಹುಮಾನ ವಿಜೇತೆ ತನ್ವಿ ವಾಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯೆ ಯಶೋಧ ನಾಯ್ಕ್ ಅವರ ಪುತ್ರಿ.
0 Comments