ಶ್ರೀ ಕ್ಷೇತ್ರ ಇಟಲದಲ್ಲಿ ಕೊಡಿಮರ ಪ್ರತಿಷ್ಠಾಪನೆ ಸಂದರ್ಭ ಗರುಡ ಪ್ರತ್ಯಕ್ಷ:ದೇಗುಲಕ್ಕೆ ಮೂರು ಬಾರಿ ಪ್ರದಕ್ಷಿಣೆ
ಮೂಡುಬಿದಿರೆಯ ದರೆಗುಡ್ಡೆಯಲ್ಲಿರುವ ಶ್ರೀ ಕ್ಷೇತ್ರ ಇಟಲ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಭ್ರಮವು ಏಪ್ರಿಲ್ 23 ರಿಂದ ಮೇ 7ರವರೆಗೆ ನಡೆಯಲಿದ್ದು ಇದರ ಮುಂಚಿತವಾಗಿ ಕೊಡಿಮರ (ಧ್ವಜ ಸ್ತಂಭ) ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಿತು.
ಸೋಜಿಗದ ಸಂಗತಿಯೆಂದರೆ ಕೊಡಿಮರಕ್ಕೆ ಪೂಜಾದಿ ಕೈಂಕರ್ಯಗಳು ನಡೆಯುತ್ತಿರುವಾಗ ಗರುಡನ ಆಗಮನವಾಗಿದೆ. ದೇಗುಲಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಿದ ಗರುಡ ಪಕ್ಷಿ ನಂತರ ತೆರಳಿದ. ಇದು ಅಲ್ಲಿ ನೆರೆದಿದ್ದ ಭಕ್ತರಲ್ಲಿ ಕೌತುಕ ಉಂಟುಮಾಡಿತ್ತು.
ಪಣಪಿಲ ಅರಮನೆಯ ಮುಖ್ಯಸ್ಥರಾದ ವಿಮಲ್ ಕುಮಾರ್ ಶೆಟ್ಟಿ, ನರಸಿಂಹ ತಂತ್ರಿ, ರಾಘವೇಂದ್ರ ಭಟ್, ನಾಗರಾಜ್ ಭಟ್, ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾದ ಸುಕೇಶ್ ಶೆಟ್ಟಿ ಶಿರ್ತಾಡಿ, ಪ್ರಧಾನ ಕಾರ್ಯದರ್ಶಿ ಪ್ರಮೋದ್ ಆರಿಗ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ತಿಮ್ಮಯ್ಯ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಕೋಟ್ಯಾನ್ ಸೇರಿದಂತೆ ಇತರೆ ಪ್ರಮುಖರು ಉಪಸ್ಥಿತರಿದ್ದರು.
0 Comments