ಶಾಸಕ ಭರತ್ ಶೆಟ್ಟಿ ಮನವಿಗೆ ತುರ್ತು ಸ್ಪಂದನೆ:ಮಂಗಳೂರಿನಲ್ಲಿ ಐಟಿ ಪಾರ್ಕಿಗೆ ಸ್ಥಳ ವೀಕ್ಷಣೆ ಮಾಡಿದ ಕಿಯೋನಿಕ್ಸ್ ಅಧ್ಯಕ್ಷ ಶರತ್ ಬೆಚ್ಚೇಗೌಡ

ಜಾಹೀರಾತು/Advertisment
ಜಾಹೀರಾತು/Advertisment

 ಶಾಸಕ ಭರತ್ ಶೆಟ್ಟಿ ಮನವಿಗೆ ತುರ್ತು ಸ್ಪಂದನೆ:ಮಂಗಳೂರಿನಲ್ಲಿ ಐಟಿ ಪಾರ್ಕಿಗೆ ಸ್ಥಳ ವೀಕ್ಷಣೆ ಮಾಡಿದ ಕಿಯೋನಿಕ್ಸ್ ಅಧ್ಯಕ್ಷ ಶರತ್ ಬೆಚ್ಚೇಗೌಡ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐಟಿ - ಬಿಟಿ ಪಾರ್ಕ್ ನಿರ್ಮಾಣ ಮಾಡುವ ಕುರಿತು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ ವೈ ಭರತ್ ಶೆಟ್ಟಿಯವರು ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡರಿಗೆ ನೀಡಿದ ಮನವಿಯ ಮೇರೆಗೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬ್ಲೂ ಹೆರಿ ಹಿಲ್ಸ್ ಬಳಿ ಕಿಯೋನಿಕ್ಸ್ ಸಾಫ್ಟ್ವೇರ್ ಪಾರ್ಕ್ ನಿರ್ಮಾಣದ ಕುರಿತು ಕಿಯೋನಿಕ್ಸ್ ಅಧ್ಯಕ್ಷರಾದ ಶರತ್ ಬಚ್ಚೆಗೌಡ ಹಾಗೂ ವಿವಿಧ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸ್ಥಳ ಪರಿಶೀಲನೆ ನಡೆಸಿದರು. 

 ಆ ಬಳಿಕ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಐಟಿ-ಬಿಟಿ ಪಾರ್ಕ್ ನಿರ್ಮಾಣಕ್ಕೆ ಸಂಬಂಧಪಟ್ಟ ಮಹತ್ವದ  ಸಭೆಯಲ್ಲಿ‌ ಭಾಗವಹಿಸಿ ಈ ವಿಚಾರದ ಕುರಿತಾಗಿ ಚರ್ಚಿಸಿದರು. ಸಭೆಯಲ್ಲಿ ಕಿಯೋನಿಸ್ಕ್ ಅಧ್ಯಕ್ಷರಾದ ಶರತ್ ಬಚ್ಚೆಗೌಡ, ದಕ್ಷಿಣ ಕನ್ನಡದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ಭರತ್ ಶೆಟ್ಟಿ, ಶ್ರೀ ಮಂಜುನಾಥ್ ಭಂಡಾರಿ, ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಶ್ರೀ ಮುಲ್ಲೈ ಮುಗಿಲನ್, ಮಂಗಳೂರು ಮಹಾ ನಗರ ಪಾಲಿಕೆಯ ಆಯುಕ್ತರು, ಕಿಯೋನಿಸ್ಕ್ ನ ವ್ಯವಸ್ಥಾಪಕ ನಿರ್ದೇಶಕರು, ಕ್ರೆಡಿ ಅಸೋಸಿಯೇಷನ್ ಸದಸ್ಯರು ಹಾಗೂ ಸಂಬಂಧಪಟ್ಟ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Post a Comment

0 Comments