ನಂಬಿಕೆಗಳು ಇಲ್ಲದ ಪೂಜೆ ಫಲ ನೀಡುವುದಿಲ್ಲ

ಜಾಹೀರಾತು/Advertisment
ಜಾಹೀರಾತು/Advertisment

 ನಂಬಿಕೆಗಳು ಇಲ್ಲದ ಪೂಜೆ ಫಲ ನೀಡುವುದಿಲ್ಲ 

ಮೂಡುಬಿದಿರೆ: ನಮ್ಮ ಜೀವನ ಸಮಾಜದಲ್ಲಿ ಸಾರ್ಥಕವಾಗಬೇಕಾದರೆ ಧರ್ಮದ ಅವಶ್ಯಕತೆ ಇದೆ. ಶ್ರದ್ದೆ, ಭಕ್ತಿ, ನಂಬಿಕೆಗಳು ಇಲ್ಲದ ಪೂಜೆ ಫಲ ನೀಡುವುದಿಲ್ಲ ಎಂದು ಉಪನ್ಯಾಸಕಿ ಚೇತನಾ ರಾಜೇಂದ್ರ ಹೆಗ್ಡೆ ಪುತ್ತಿಗೆ ಹೇಳಿದರು. 

ಅವರು ಇರುವೈಲು ದೇವಳದ ಜಾತ್ರಾ ಮಹೋತ್ಸವದ ಸಂಧರ್ಭದಲ್ಲಿ  ನಡೆದ ಇರುವೈಲು ಫಲ್ಗುಣಿ ಯುವಕ ಮಂಡಲದ 37ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು. 

ಮುಂಡ್ಕೂರು ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪ್ರಕಾಶ್ ನಾಯ್ಕ್ ಶಿರ್ತಾಡಿ ಅಧ್ಯಕ್ಷತೆ ವಹಿಸಿದರು. 

ಇರುವೈಲಿನ ಹಿರಿಯ ಯಕ್ಷಗಾನ ಕಲಾವಿದ, ದೈವ ಪರಿಚಾರಕ ಸಂಜೀವ ಭಂಡಾರಿ ಮತ್ತು ಮಲ್ಪೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರೇಮಾನಂದ ಅವರನ್ನು ಸನ್ಮಾನಿಸಲಾಯಿತು. ಕ್ರೀಡೆಯಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ಹೊಸಬೆಟ್ಟು ಶಾಲೆಯ ಪವನ್, ಸಾನಿಧ್ಯ ಮತ್ತು ಸಾನ್ವಿ ಅವರನ್ನು ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಹಾಗೂ 8ರಿಂದ 10ನೇ ತರಗತಿಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. 

ದಿನೇಶ್ ಪೂಜಾರಿ ಕಟ್ಟಣಿಗೆ, ಯುವಕ ಮಂಡಲದ ಅಧ್ಯಕ್ಷ ಲಕ್ಷ್ಮೀಶ ನಾಯ್ಕ್ ಉಪಸ್ಥಿತರಿದ್ದರು. 

ಧನಂಜಯ ಶೆಟ್ಟಿ ಬರ್ಕೆ ಸ್ವಾಗತಿಸಿದರು. ಕಾರ್ಯದರ್ಶಿ ಬಾಲಕೃಷ್ಣ ಸುವರ್ಣ ವರದಿ ವಾಚಿಸಿದರು. ಮನೋಹರ್ ನಾಯ್ಕ್ ಮತ್ತು ಸಂದೇಶ್ ಪೂಜಾರಿ ಸಮ್ಮಾನ ಪತ್ರ ವಾಚಿಸಿದರು. ಪ್ರಶಾಂತ್ ಸಫಲಿಗ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಹಿರಿಯ ಸದಸ್ಯ ಪ್ರಸಾದ್ ಶೆಟ್ಟಿ ಬೊಂಡಾಲ ನಿರೂಪಿಸಿ, ಶುಭಕರ ಸಾಲ್ಯಾನ್ ವಂದಿಸಿದರು.

Post a Comment

0 Comments