ಶಿವರಾಮ ಕಾರಂತ ಪುರಸ್ಕಾರ: ಕೃತಿಗಳ ಆಹ್ವಾನ

ಜಾಹೀರಾತು/Advertisment
ಜಾಹೀರಾತು/Advertisment

 ಶಿವರಾಮ ಕಾರಂತ ಪುರಸ್ಕಾರ: ಕೃತಿಗಳ ಆಹ್ವಾನ

ಮೂಡುಬಿದಿರೆ: ಶಿವರಾಮ ಕಾರಂತ ಪ್ರತಿಷ್ಠಾನ ನೀಡುವ 28ನೇ ವರ್ಷದ ಶಿವರಾಮ ಕಾರಂತ ಪುರಸ್ಕಾರಕ್ಕಾಗಿ 2020ರಿಂದ 2024ರವರೆಗಿನ ಪ್ರಥಮ ಮುದ್ರಿತ ಕೃತಿಗಳನ್ನು ಆಹ್ವಾನಿಸಲಾಗಿದೆ.


ಎಪ್ರಿಲ್ 20 ರೊಳಗೆ ಮೂರು ಪ್ರತಿಗಳನ್ನು 'ಶಿವರಾಮ ಕಾರಂತ ಪ್ರತಿಷ್ಠಾನ ರಿ., ಕನ್ನಡ ಭವನ, ಮೂಡಬಿದಿರೆ- 574227 ಇಲ್ಲಿಗೆ ಕಳುಹಿಸಬಹುದು. ಉತ್ತಮ ಕೃತಿಗಳನ್ನು ಆಸಕ್ತರೂ ಶಿಫಾರಸು ಮಾಡಬಹುದು. ಹೋದ ವರ್ಷ ಕಳುಹಿಸಿದ್ದವರು ಮತ್ತೆ ಕಳುಹಿಸಬೇಕಿಲ್ಲ ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ. ಜಯಪ್ರಕಾಶ ಮಾವಿನಕುಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.


ಪ್ರತಿಷ್ಠಾನದ ಆಡಳಿತ ಮಂಡಳಿ ಸದಸ್ಯ ಡಾ. ಎಂ. ಮೋಹನ ಆಳ್ವ ಮಾತನಾಡಿ, ಕನ್ನಡ ಭವನದಲ್ಲಿ ಪ್ರತಿಷ್ಠಾನ ಕ್ಕಾಗಿ ಕೊಠಡಿ ಅವಕಾಶ ಕಲ್ಪಿಸಲಾಗಿದೆ. ಮುಂದೆ ಅಲ್ಲೊಂದು ವ್ಯವಸ್ಥಿತ ಗ್ರಂಥಾಲಯ ರೂಪಿಸಲಾಗುವುದು ತಿಳಿಸಿದರು. ಎಂದು

ಪ್ರತಿಷ್ಠಾನದ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ, ಉಪಾಧ್ಯಕ್ಷ ಕೆ. ಶ್ರೀಪತಿ ಭಟ್, ಕೋಶಾಧಿಕಾರಿ ಕೆ. ಕೃಷ್ಣರಾಜ ಹೆಗ್ಡೆ ಉಪಸ್ಥಿತರಿದ್ದರು.

Post a Comment

0 Comments