ಮಣಿಪಾಲ ಮಾಹೆಯಿಂದ ಮಹಾವೀರ ಕಾಲೇಜಿನಲ್ಲಿ ಎರಡನೇ ವಷ೯ದ ಉದ್ಯೋಗಮೇಳ ಅಭಿಯಾನ

ಜಾಹೀರಾತು/Advertisment
ಜಾಹೀರಾತು/Advertisment

 ಮಣಿಪಾಲ ಮಾಹೆಯಿಂದ ಮಹಾವೀರ ಕಾಲೇಜಿನಲ್ಲಿ ಎರಡನೇ ವಷ೯ದ ಉದ್ಯೋಗಮೇಳ ಅಭಿಯಾನ



ಮೂಡುಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜಿನಲ್ಲಿ ಅಂತಿಮ ಪದವಿ ವಿದ್ಯಾರ್ಥಿಗಳಿಗಾಗಿ ಮಣಿಪಾಲ ಮಾಹೆಯಿಂದ ಎರಡನೇ ವರ್ಷದ ವಿಶೇಷ ಉದ್ಯೋಗ ಮೇಳ ಅಭಿಯಾನವು ಗುರುವಾರ ನಡೆಯಿತು.


 ಈ ಉದ್ಯೋಗ ಮೇಳಕ್ಕೆ ಮಣಿಪಾಲ ಮಾಹೆಯ ಸಂಪನ್ಮೂಲ ವಿಭಾಗದ ನಿರ್ದೇಶಕ ಜೆರ್ರಿ ಕೆ ಜೋಸೆಫ್ ಚಾಲನೆ ನೀಡಿದರು. ಇವರು ಈ ಸಂದರ್ಭದಲ್ಲಿ ಮಾತನಾಡಿ ಮಹಾವೀರ ಕಾಲೇಜು, ಮಾಹೆಯ ಅವಿಭಾಜ್ಯ ಅಂಗ ಇಲ್ಲಿ ಬಂದು ಉದ್ಯೋಗ ಮೇಳ ನಡೆಸಲು ಸಂತೋಷವಾಗುತ್ತದೆ. ಕಳೆದ ವರ್ಷ ಮಾಹೆಗೆ ಈ ಕಾಲೇಜಿನ 7 ಜನ ವಿದ್ಯಾರ್ಥಿಗಳು ಆಯ್ಕೆಗೊಂಡು ಉತ್ತಮವಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಮಹಾವೀರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಕೆ.ಅಭಯಚಂದ್ರ ಜೈನ್ ಅವರು ಮಾತನಾಡಿ ಶ್ರೀ ಮಹಾವೀರ ಕಾಲೇಜಿನ ಪ್ರಗತಿಗಾಗಿ ಮಾಹೆಯು ನಡೆಸುತ್ತಿರುವ ಉದ್ಯೋಗಮೇಳಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು.


ಶ್ರೀ ಮಹಾವೀರ ಕಾಲೇಜಿನ ಹಳೆ ವಿದ್ಯಾರ್ಥಿಯೂ ಆಗಿರುವ ಮೈಂಡ್ ಫುಲ್ ಕನ್ಸಲ್ಟಿಂಗ್ ಸಂಸ್ಥೆಯ ಆಡಳಿತ ನಿರ್ದೇಶಕ ಸಂಜಯ್ ಭಟ್ ಅವರು ಮಹಾವೀರ ಕಾಲೇಜಿಗೆ ಕಳೆದ ೨ ವರ್ಷಗಳಿಂದಲೂ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶವನ್ನು ಕಲ್ಪಿಸಿ ನೀಡುತ್ತಿರುವ ಸಹಕಾರಕ್ಕೆ ಮಾಹೆಯವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು. 


ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣ, ಪ.ಪೂ. ಕಾಲೇಜಿನ ಪ್ರಾಂಶುಪಾಲ ಪ್ರೊ. ರಮೇಶ್ ಭಟ್, ವಿದ್ಯಾರ್ಥಿಕ್ಷೇಮ ಪಾಲನಾಧಿಕಾರಿ ಪ್ರೊ. ಹರೀಶ್, ಡಾ. ಹರೀಶ್ ಹೆಚ್. ಉಪಸ್ಥಿತರಿದ್ದರು. ವಿದ್ಯಾರ್ಥಿ ನಾಯಕಿ ಕು. ಶೃತಿ ಪೆರಿ ಸ್ವಾಗತಿಸಿದರು. ದಕ್ಷ ಎಂ. ಸಾಲಿಯಾನ್ ಮುಖ್ಯ ಅತಿಥಿಯವರನ್ನು ಪರಿಚಯಿಸಿದರು. ಪ್ರಾಂಶುಪಾಲ ಡಾ. ರಾಧಾಕೃಷ್ಣ ವಂದಿಸಿದರು. ಕು. ಪ್ರಜಾ  ಕಾಯ೯ಕ್ರಮ ನಿರೂಪಿಸಿದರು.


 

ಕಳೆದ ವರ್ಷ ಶ್ರೀ ಮಹಾವೀರ ಕಾಲೇಜಿನ 12.25% ವಿದ್ಯಾರ್ಥಿಗಳು ಮಾಹೆಯ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಂದರ್ಶನಕ್ಕೆ ಅರ್ಹತೆ ಪಡೆದಿದ್ದರು. ಆದರೆ ಈ ವರ್ಷ ಇದೇ ಲಿಖಿತ ಪರೀಕ್ಷೆಯಲ್ಲಿ 27.27% ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶ್ರೀ ಮಹಾವೀರ ಕಾಲೇಜಿನ ಸಾಧನೆಯನ್ನು ಎರಡು ಪಟ್ಟಿಗಿಂತ ಹೆಚ್ಚಾಗಿ ಸುಧಾರಿಸಿದ್ದಾರೆ. ಇದಲ್ಲದೇ ಈ ಎರಡೂ ವರ್ಷಗಳಲ್ಲಿ ಶ್ರೀ ಮಹಾವೀರ ಕಾಲೇಜಿನ ಕಾರ್ಯಕ್ಷಮತೆಯು ಮಾಹೆಯ ಸರಾಸರಿ 11.6% ದರಕ್ಕಿಂತ ಉತ್ತಮವಾಗಿದೆ.

Post a Comment

0 Comments