ಮೂಡುಬಿದಿರೆ: ಪುತ್ತಿಗೆ ಮಹತೋಬಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಬುಧವಾರ ಶ್ರೀ ಗಣಪತಿ ಮತ್ತು ಶ್ರೀ ನರಸಿಂಹ ದೇವರಿಗೆ ಕಲಶಾಭಿಷೇಕ ಸಹಿತ ವಿವಿಧ ಕಾರ್ಯಕ್ರಮಗಳು ನಡೆಯಿತು.
ಬೆಳಗ್ಗೆ ತತ್ವಹೋಮ, ತತ್ವಕಲಶಾಭಿಷೇಕ, ಚಂಡಿಕಾಯಾಗ, ಕಲಶ ಮಂಡಲ ರಚನೆ, ಸಾಯಂಕಾಲ ಬ್ರಹ್ಮಕಲಶಾಧಿವಾಸ, ಕುಂಭೇಶಕಲಶಾಧಿವಾಸ, ಕರ್ಕರಿಪೂಜೆ, ಅಧಿವಾಸ ಹೋಮಗಳು ನಡೆಯಿತು.
ರಾತ್ರಿ ಚೌಟರಾಣಿ ಅಬ್ಬಕ್ಕ ವೇದಕೆಯಲ್ಲಿ ವಿದುಷಿ ಮಂಜುಳ ಸುಬ್ರಹ್ಮಣ್ಯ ನಾಟ್ಯರಂಗ ಪುತ್ತೂರು ತಂಡದಿAದ ಭರತನಾಟ್ಯ ವೈಭವ, ವಿದುಷಿ ಡಾ.ಸಹನಾ ಭಟ್ ತಂಡದಿAದ ನಾಟ್ಯ ವೈಭವ,£ ಮೂಡುಬಿದಿರೆ ಯಕ್ಷನಿಧಿ ಶಿಕ್ಷಣ ಸಂಸ್ಥೆ ಮತ್ತು ಮಕ್ಕಳ ಮೇಳದಿಂದ ಸಹಸ್ರ ಲಿಂಗೋದ್ಭವ ದೊಂದಿ ಬೆಳಕಿನ ಯಕ್ಷಗಾನ ನಡೆಯಿತು. ತಿರುಮಲರಾಜ ಚೌಟ ವೇದಿಕೆಯಲ್ಲಿ ಸನಾತನ ನಾಟ್ಯಲಯ ಮಂಗಳೂರು, ಅರೆಹೊಳೆ ಪ್ರತಿಷ್ಠಾನ ಮಂಗಳೂರು, ನೃತ್ಯ ವಸಂತ ನಾಟ್ಯಾಲಯ ಕುಂದಾಪುರ, ನೃತ್ಯ ನಿಕೇತನ ಕೊಡವೂರು ತಂಡದಿAದ ನೃತ್ಯೋಲ್ಲಾಸ ಕಾರ್ಯಕ್ರಮವಿತ್ತು. ಅಡಿಗಳ್ ಶ್ರೀ ನಿವಾಸ ಭಟ್ ವೇದಿಕೆಯಲ್ಲಿ ಬೆಳಗ್ಗೆ 8 ಗಂಟೆಯಿAದ ಭಜನಾ ಕಾರ್ಯಕ್ರಮ ನಡೆಯಿತು.
0 Comments