ಮೂಡುಬಿದಿರೆ ಮೆಸ್ಕಾಂ ಜನ ಸಂಪರ್ಕ ಸಭೆ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ ಮೆಸ್ಕಾಂ ಜನ ಸಂಪರ್ಕ ಸಭೆ 


ಮೂಡುಬಿದಿರೆ: ಹೊಸಬೆಟ್ಟಿನ ಶೇಡಿ ಗುರಿ ಬಳಿ, ಹುಡ್ಕೋ ಕಾಲನಿ, ಗಂಟಾಲ್ ಕಟ್ಟೆ, ಗಾಂಧಿನಗರ, ಬನ್ನಡ್ಕ ಇತ್ಯಾದಿ ಪ್ರದೇಶದಲ್ಲಿ ಇರುವ ಫೀಡರ್ ನಿಂದ ಬೀಳುವ ಬೆಂಕಿ ಕಿಡಿಗಳಿಂದ ಒಣಗಿದ ಎಲೆ ಇತ್ಯಾದಿಗಳಿಗೆ ಬೆಂಕಿ ಹಿಡಿಯುತ್ತಿದ್ದು ನಿರ್ವಹಣೆ ಅಗತ್ಯ ಇದೆ. ಹೊಸಬೆಟ್ಟಿನಿಂದ ಇರುವೈಲಿಗೆ, ಪಾಲಡ್ಕ ಪ್ರದೇಶದ ಹೋಗುವ ರಸ್ತೆಯಲ್ಲಿ ಹಲವಾರು ಮರಗಳು ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯಾಗುವ ಸಾಧ್ಯತೆ ಇರುವುದರಿಂದಾಗಿ ಸಾರ್ವಜನಿಕ ಹಿತಾಸಕ್ತಿಯಿಂದ ಅಂತಹ ಮರಗಳ ರೆಂಬೆಗಳನ್ನು ಕಡಿದು ಸಮರ್ಪಕಗೊಳಿಸಬೇಕಾಗಿದೆ ಎಂದು ಮೆಸ್ಕಾಂ ಜನ ಸಂಪಕ೯ ಸಭೆಯಲ್ಲಿ ನಾಗರಿಕರು ಅಹವಾಲು ಸಲ್ಲಿಸಿದರು. 


ಪಂಚಾಯತ್ ಗಳು ಬಾಕಿ ಇಟ್ಟಿರುವ ಬಿಲ್ಲನ್ನು ಮೆಸ್ಕಾಂಗೆ ಪಾವತಿಸಿದರೆ   ಹೆಚ್ಚಿನ ಮುತುವರ್ಜಿ ವಹಿಸಲು ಸಾಧ್ಯ ಎಂದು ಮೆಸ್ಕಾಂ ಅಧೀಕ್ಷಕ ಕೃಷ್ಣರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು. 

ಸಭೆಯಲ್ಲಿ ಸಹಾಯಕ ಅಭಿಯಂತರ ಸಂತೋಷ ನಾಯಕ್, ಮೋಹನ್, ಮೂಡುಬಿದಿರೆ ಮೆಸ್ಕಾಂ ನ ಪ್ರವೀಣ್, ತಾಂತ್ರಿಕ ವಿಭಾಗದ ಮುರಳಿ, ಬೆಳುವಾಯಿಯ ಅಪ್ಸರ್ ಪಾಟೀಲ್, ಗೇಮಾ ನಾಯಕ್, ಕಲ್ಲಮುಂಡ್ಕೂರುಗಳ ಇಂಜಿನಿಯರ್ ಭಾಗವಹಿಸಿದ್ದರು. ಒಟ್ಟು 12 ದಾಖಲೆಯುಕ್ತ ಅರ್ಜಿ ಸಲ್ಲಿಕೆಯಾಗಿದೆ.

Post a Comment

0 Comments