"ಇರುವೈಲಿನಿಂದ ಕಟೀಲು ಅಮ್ಮನೆಡೆಗೆ ಭಕ್ತಿಯ ನಡಿಗೆ"
ಮೂಡುಬಿದಿರೆ: ಲೋಕಕಲ್ಯಾಣಾರ್ಥ ಹಾಗೂ ಭಕ್ತಾದಿಗಳ ಅಭೀಷ್ಟೆಯ ಫಲಸಿದ್ಧಿಗಾಗಿ ಶ್ರೀ ಕ್ಷೇತ್ರ ಇರುವೈಲು ಇದರ ನೇತೃತ್ವದಲ್ಲಿ ೧೨ ನೇ ವರ್ಷದ "ಭಕ್ತಿಯ ನಡಿಗೆ ಅಮ್ಮನೆಡೆಗೆ" ಪಾದಯಾತ್ರೆಯು ಇರುವೈಲು ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿವರೆಗೆ ಭಜನಾ ಸಂಕೀರ್ತನೆಯೊಂದಿಗೆ ಭಾನುವಾರ ನಡೆಯಿತು.
ಊರ-ಪರವೂರ ಭಕ್ತ ವೃಂದ ಭಕ್ತಾದಿಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡು ದಾರಿಮಧ್ಯೆ ಸಿಗುವ ದೇವಸ್ಥಾನ, ದೈವಸ್ಥಾನಗಳಿಗೆ ಭೇಟಿ ನೀಡಿ, ಕಟೀಲು ದೇಗುಲದಲ್ಲಿ ಭಜನಾ ಸಂಕೀರ್ತನೆಯೊಂದಿಗೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟಕರಾದ ಪದ್ಮನಾಭ ಕುಲಾಲ್ ಹೊಸ್ಮಾರ್, ಚೆನ್ನಕೇಶವ ಶೆಟ್ಟಿ, ಹಿರಿಯ ಭಜಕರಾದ ಮೋಹನ್ ಆಚಾರ್ಯ, ಸುದರ್ಶನ್ ಆಚಾರ್ಯ, ಭಜಕರು ಹಾಗೂ ಊರ,ಪರವೂರ ಭಕ್ತಾದಿಗಳು ಪಾಲ್ಗೊಂಡರು.
0 Comments