ಶಿವಪಾಡಿಯಲ್ಲಿ ಜನಸಾಗರ-ಮಹಾಶಿವರಾತ್ರಿಯಂದು ಸಾಗರೋಪಾದಿಯಲ್ಲಿ ಬಂದ ಭಕ್ತ ಸಾಗರ:ಶಿವಪಾಡಿ ವೈಭವ ಸಂಪನ್ನ

ಜಾಹೀರಾತು/Advertisment
ಜಾಹೀರಾತು/Advertisment

 ಶಿವಪಾಡಿಯಲ್ಲಿ ಜನಸಾಗರ-ಮಹಾಶಿವರಾತ್ರಿಯಂದು ಸಾಗರೋಪಾದಿಯಲ್ಲಿ ಬಂದ ಭಕ್ತ ಸಾಗರ:ಶಿವಪಾಡಿ ವೈಭವ ಸಂಪನ್ನ


ಕಳೆದ 5 ದಿನಗಳಿಂದ ಉಡುಪಿಯ ಮಣಿಪಾಲದಲ್ಲಿರುವ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆದ ಶಿವಪಾಡಿ ವೈಭವ ನಿನ್ನೆ ಅಂದರೆ ಮಹಾಶಿವರಾತ್ರಿ ಬೃಹತ್ ಕಾರ್ಯಕ್ರಮಗಳ ಮೂಲಕ ಸಂಪನ್ನಗೊಂಡಿತು.

ಮಹಾಶಿವರಾತ್ರಿಯಂದು ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ಸಹಸ್ರಾರು ಸಂಖ್ಯೆಯ ಭಕ್ತರು ಆಗಮಿಸಿದ್ದು ಕೊನೆಯ ದಿನವಾದ ನಿನ್ನೆ ಸಾಗರದಂತೆ ಭಕ್ತರು ತುಂಬಿಕೊಂಡಿದ್ದರು. 

ಕಳೆದ ಐದು ದಿನಗಳಿಂದ ಆರೋಗ್ಯ ಬೇಡ ಕೃಷಿಮೇಳ ಆಹಾರಮೇಳ ಯಕ್ಷಗಾನ ಮೇಳ ಮತ್ತು ಮನೋರಂಜನ ಮೇಳಗಳನ್ನು ಒಳಗೊಂಡು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿದ ಶಿವಪಾಡಿ ವೈಭವ ಆಚರಣ ಸಮಿತಿ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಪನ್ನಗೊಳಿಸುವಲ್ಲಿ ಸಾಕ್ಷಿಯಾಯಿತು. ಮಾಜಿ ಶಾಸಕರು ಹಾಗೂ ಶಿವಪಾಡಿ ವೈಭವ ಆಚರಣೆ ಸಮಿತಿಯ ಅಧ್ಯಕ್ಷರಾದ ಕೆ ರಘುಪತಿ ರವರು ಮತ್ತು ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಹೇಶ್ ಠಾಕೂರ್ ಸೇರಿದಂತೆ ಇತರೆ ಪ್ರಮುಖರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮವು ಅದ್ಭುತವಾಗಿ ಯಶಸ್ಸು ಕಂಡಿದೆ.

Post a Comment

0 Comments