ದೇಶ-ದೇವರು-ಧಮ೯ ಸದೃಢವಾಗಲು ನೇತಾಜಿ, ಬೋಸ್ ಪ್ರೇರಕ ಶಕ್ತಿಗಳು : ಶ್ರೀ ರಾಜಶೇಖರಾನಂದ ಸ್ವಾಮೀಜಿ
ಮೂಡುಬಿದಿರೆ: ನಮ್ಮ ಸಮಾಜ ಸರಿಯಾಗಬೇಕು. ಧಮ೯ ಸದೃಢವಾಗಬೇಕು ಎಂದು ಕನಸು ಕಂಡವರು ನೇತಾಜಿ ಮತ್ತು ವಿವೇಕನಂದರು. ದೇಶ, ದೇವರು ಮತ್ತು ಧಮ೯ ಉಳಿಯಬೇಕೆಂದು ಅವರು ಅಂದು ಮಾಡಿದ ಪಾಠ ಇಂದಿನ ಮಕ್ಕಳಿಗೆ ಸಿಕ್ಕಿದರೆ ಆಗ ಅವರೂ ಈ ದೇಶದ ಆ ಇಬ್ಬರು ಮಹಾ ಪುರುಷರಂತೆ ಆಗಲು ಸಾಧ್ಯವಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ಅವರು ಹಿಂದೂ ಜಾಗರಣ ವೇದಿಕೆ ಮೂಡುಬಿದಿರೆ ತಾಲೂಕು, ಮಂಗಳೂರು ಗ್ರಾಮಾಂತರ ಜಿಲ್ಲೆ ಇದರ ಆಶ್ರಯದಲ್ಲಿ ಸಂತ ಸ್ವಾಮೀ ವಿವೇಕಾನಂದ ಮತ್ತು ನೇತಾಜಿ ಸುಭಾಷ್ ಚಂದ್ರ ಜನ್ಮ ಜಯಂತಿಯ ಪ್ರಯುಕ್ತ ನೆಲ್ಲಿಕಾರಿನಲ್ಲಿ ನಡೆದ ಶೋಭಾ ಯಾತ್ರೆ ಮತ್ತು ಯುವ ಸಮಾವೇಶವನ್ನು ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಿದರು.
ಯುವ ಜನತೆಯಲ್ಲಿ ದೇಶ ಭಕ್ತಿ ಯನ್ನು ಹುಟ್ಟಿಸುವ ನಿಟ್ಟಿನಲ್ಲಿ ಹಿಂಜಾವೇ ಅಲ್ಲಲ್ಲಿ ಕಾಯ೯ಕ್ರಮಗಳನ್ನು ಆಯೋಜಿಸಿ ಸಮಾಜವನ್ನು ಸಂಘಟಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದ ಅವರು ಪುರಸಭೆ ಮಾರುಕಟ್ಟೆ ಗುತ್ತಿಗೆ ವಿಚಾರದಲ್ಲಿ ಭಿನ್ನ ಸ್ವರ ಮೂಡಿಸುತ್ತಿರುವ ಸ್ವಪಕ್ಷೀಯರ
ವಿರೋಧ ವ್ಯಕ್ತಪಡಿಸಿ ಹಿಂದೂಗಳು ಸ್ವಾವಲಂಬಿ ಜೀವನಕ್ಕೆ ಮುಂದಾದರೆ ನಮ್ಮವರೇ ಭಿನ್ನ ನಿಲುವು ತಾಳುವುದು ಸರಿಯಲ್ಲ. ಹಿಂದೂಗಳು ಒಗ್ಗೂಡಿ ತಮ್ಮ ಸಾಮರ್ಥ್ಯ ಸಾಬೀತು ಪಡಿಸಬೇಕು ಎಂದು ಹೇಳಿದರು.
ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕಾರ್ಯಕರ್ತನ ಕೈಯಲ್ಲಿ ಪುರಸಭೆ ಮಾರುಕಟ್ಟೆ ಇರುವುದನ್ನು ಸ್ವಪಕ್ಷೀಯರೇ ಸಹಿಸದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು ಬೆನ್ನಿಗೆ ಚೂರಿ ಹಾಕುವ, ಮತ್ಸರ್ಯ ತೋರುವ ಗುಣ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪುಷ್ಪರಾಜ್ ಕಮ್ಮಜೆ,ಜಿಲ್ಲಾ ಸಹ ಸಂಯೋಜಕ ಸಮಿತ್ ರಾಜ್ ದರಗುಡ್ಡೆ, ತಾಲೂಕು ಸಂಯೋಜಕ ಹರಿಶ್ಚಂದ್ರ ಕೆ ಸಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾಲೂಕು ಸಹಸಯೋಜಕರಾದ ಶರತ್ ಮಿಜಾರು, ಸಂತೋಷ್ ಕುಮಾರ್ ಜೈನ್, ಸಂದೀಪ್ ಹೆಗ್ಡೆ ಸಂದೀಪ್ ಸುವರ್ಣ, ಸುಂದರ ಪೂಜಾರಿ, ಗಣೇಶ್, ಧರಣೇಂದ್ರ ಜೈನ್, ಸುಚೇತನ್ ಜೈನ್, ಮಂಜುನಾಥ್ ಬೆಳುವಾಯಿ, ಮೂಡುಬಿದಿರೆ ದರೆಗುಡ್ಡೆ ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ನೆಲ್ಲಿಕಾರು ಪಂಚಾಯತ್ ಅಧ್ಯಕ್ಷ ಉದಯ ಪೂಜಾರಿ, ಪಂಚಾಯತ್ ಸದಸ್ಯರುಗಳು, ನೆಲ್ಲಿಕಾರ್ ಸಹಕಾರಿ ಸಂಘದ ನಿರ್ದೇಶಕ ಅಶ್ವಥ್ ಪಣಪಿಲ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಹ ಸಂಯೋಜಕ ಸಮಿತ್ ರಾಜ್ ದರೆಗುಡ್ಡೆ ಸ್ವಾಗತಿಸಿದರು.ಗಣೇಶ ಅಳಿಯೂರು ನಿರೂಪಿಸಿದರು. ಸಂದೀಪ್ ಸುವರ್ಣ ಕೆಲ್ಲಪುತ್ತಿಗೆ ಧನ್ಯವಾದವಿತ್ತರು. ಸಭಾ ಕಾರ್ಯಕ್ರಮ ಮುಂಚಿತವಾಗಿ ನೆಲ್ಲಿಕಾರು ಜಂಕ್ಷನ್‌ನಿಂದ ಗಣಪತಿ ಕಟ್ಟೆಯವರಿಗೆ ಕುಣಿತ ಭಜನೆಯೊಂದಿಗೆ ವೈಭವದ ಮೆರವಣಿಗೆ ನಡೆಯಿತು.
0 Comments