ಆಹಾರ ಮೇಳದಲ್ಲಿ ಸ್ಟಾಲ್ ಇಟ್ಟ ಬಿರುವೆರ್ ಕುಡ್ಲ ತಂಡ:ಗಳಿಸಿದ ಏಳು ಲಕ್ಷವೂ ಬಡವರಿಗೆ ವಿತರಣೆ
ಮಂಗಳೂರಿನಲ್ಲಿ ನಡೆದ ಫುಡ್ ಫೆಸ್ಟಿವಲ್ ನಲ್ಲಿ ಪಂಜಾಬ್ ಲಸ್ಸಿ ಎಂಬ ಸ್ಟಾಲ್ ಇಟ್ಟು ಇದರಲ್ಲಿ ಸಂಗ್ರಹಿಸಿದ ಸುಮಾರು ಏಳು ಲಕ್ಷ ರೂಪಾಯಿ ಹಣವನ್ನು ಅನಾರೋಗ್ಯ ಪೀಡಿತರಿಗೆ ವಿತರಿಸಿ ಬಿರುವೆರ್ ಕುಡ್ಲ ಸಂಘಟನೆ ಮಾನವೀಯತೆ ಮೆರೆದಿದೆ.
ಮಂಗಳೂರು ಫುಡ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಪಂಜಾಬ್ ಲಸ್ಸಿ ಎಂಬ ಸ್ಟಾಲ್ ಅನ್ನು ಅಳವಡಿಸಿತ್ತು. ಸಂಘಟನೆಯ ಒಂದಷ್ಟು ಯುವಕರು ಪ್ರತಿದಿನ ವ್ಯಾಪಾರದಲ್ಲಿ ತೊಡಗಿದ್ದರು. ಪ್ರತಿ ವರ್ಷದಂತೆ ಈ ವರ್ಷವೂ ಪಂಜಾಬ್ ಲಸ್ಸಿ ಸ್ಟಾಲ್ ನಲ್ಲಿ ಗಳಿಸಿದ ಸಂಪೂರ್ಣ ಆದಾಯವನ್ನು ಅನಾರೋಗ್ಯ ಪೀಡಿತರಿಗೆ ಸಂಘಟನೆ ವಿತರಿಸಿದೆ. ಸುಮಾರು 7 ಲಕ್ಷ ರೂಪಾಯಿ ವೆಚ್ಚದಲ್ಲಿ ಕೃತಕ ಕಾಲು ವಿತರಣೆ ಇತರೆ ಅನಾರೋಗ್ಯ ಬಾಧಿತ ವ್ಯಕ್ತಿಗಳಿಗೆ ಧನಸಹಾಯ ಸೇರಿದಂತೆ ಒಟ್ಟು ಏಳು ಲಕ್ಷ ರೂಪಾಯಿ ಮೊತ್ತದ ಪರಿಹಾರವನ್ನು ಒದಗಿಸಲಾಗಿದೆ.
ಸಂಸ್ಥಾಪಕರಾದ ಉದಯ ಪೂಜಾರಿ ಬಳ್ಳಾಲ್ಬಾಗ್ ರವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಾರ್ಟಿಯ ನಿಕಟ ಪೂರ್ವ ಅಧ್ಯಕ್ಷರು, ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲು, ವಿಧಾನಸಭಾಧ್ಯಕ್ಷರಾದ ಯು. ಟಿ. ಖಾದರ್, ಶಾಸಕರುಗಳಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಹರೀಶ್ ಪೂಂಜಾ, ಕಿಶೋರ್ ಕುಮಾರ್ ಪುತ್ತೂರು, ಕೆಪಿಸಿಸಿ ಕಾರ್ಯದರ್ಶಿ ಪದ್ಮರಾಜ್, ದೇವಳದ ಪ್ರಮುಖರಾದ ಶ್ರೀ ಸಾಯಿರಾಮ್ ಸೇರಿದಂತೆ ಇತರೆ ಗಣ್ಯರು, ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.
0 Comments