ಉದ್ಯಮ ಪರವಾನಿಗೆಯಲ್ಲಿ ಶೇ. 10 ಹೆಚ್ಚಳ : ಮೂಡುಬಿದಿರೆ ಪುರಸಭಾ ಮಾಸಿಕ ಸಭೆಯಲ್ಲಿ ನಿಣ೯ಯ
ಮೂಡುಬಿದಿರೆ: ಉದ್ಯಮ ಪರವಾನಿಗೆಯಲ್ಲಿ ಶೇ.10 ಹೆಚ್ಚಿಸಲು ಪುರಸಭೆಯು ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ನಿಣ೯ಯ ಕೈಗೊಂಡಿದೆ.
ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ರಾಜೇಶ್ ನಾಯ್ಕ್ ಮಾತನಾಡಿ ವ್ಯಾಪ್ತಿಯಲ್ಲಿ ಉದ್ಯಮ ಪರವಾನಿಗೆ ಇಲ್ಲದೆ ನೂರಾರು ಸಂಸ್ಥೆಗಳು ವ್ಯವಹಾರ ನಡೆಸುತ್ತಿವೆ. ಎಲ್ಲರೂ ಉದ್ಯಮ ಪರವಾನಿಗೆ ಪಡೆಯಲು ಪುರಸಭೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪರವಾನಿಗೆ ಇಲ್ಲದಿರುವವರ ಪಟ್ಟಿ ತಯಾರಿಸಿದ್ದು, ಅವರಿಗೆ ನೋಟೀಸ್ ನೀಡಿ ಉದ್ಯಮ ಪರವಾನಿಗೆ ಪಡೆಯಲು ಸೂಚಿಸಲಾಗಿದೆ ಎಂದು ಮುಖ್ಯಾಧಿಕಾರಿ ಇಂದು ಎಂ. ತಿಳಿಸಿದರು.
ಪುರಸಭೆಗೆ ಸಂಬಂಧಿಸಿದ ವಾಣಿಜ್ಯ ಸಂಕೀರ್ಣಗಳ ಅಂಗಡಿ ಕೋಣೆಗಳ ಏಲಂನಲ್ಲಿ ಪುರಸಭಾ ವ್ಯಾಪ್ತಿಯಲ್ಲದವರು ಮಧ್ಯ ಪ್ರವೇಶಿಸಿ ಬಿಡ್ಡುದಾರರ ಮೇಲೆ ಒತ್ತಡ ಹೇರಿ ಹಣ ಸಂಪಾದಿಸಿದ್ದಾರೆ. ಬಾಡಿಗೆ ಮೊತ್ತ ಹರಾಜಿನಲ್ಲಿಯೂ ತಾರತಮ್ಯವಾಗಿದೆ. ಇದಕ್ಕೆ ಕಡಿವಾಣ ಹಾಕಬೇಕಾದರೆ ಪುರಸಭೆ ವ್ಯಾಪ್ತಿಯವರಿಗೆ ಮಾತ್ರ ಹರಾಜಿನಲ್ಲಿ ಪಾಲ್ಗೊಳ್ಳುವ ನಿರ್ಣಯ ಕೈಗೊಳ್ಳಬೇಕು ಎಂದು ಸದಸ್ಯರು ಸಲಹೆ ನೀಡಿದರು.
ಕರಿಂಜೆ ಗ್ರಾಮದ ರಾಮಗುಡ್ಡೆ ಎಂಬಲ್ಲಿ ಬಡ ರಮೇಶ್ ಆಚಾರ್ಯ ಎಂಬವರಿಗೆ 94 ಸಿಸಿಯಡಿ ಹಕ್ಕುಪತ್ರ ನೀಡಿದ್ದರೂ ಪುರಸಭೆಯ ಅಧಿಕಾರಿಗಳು ಖಾತೆ ನೀಡದೆ ಸತಾಯಿಸುತ್ತಿದ್ದಾರೆ. ಇಂತಹ ಹಲವು ಪ್ರಕರಣಗಳಿದ್ದು ಖಾತೆ ನೀಡದಿದ್ದರೆ ಲೋಕಾಯುಕ್ತರಿಗೆ ದೂರು ನೀಡುವುದಾಗಿ ಸದಸ್ಯ ಸುರೇಶ್ ಕೋಟ್ಯಾನ್ ಎಚ್ಚರಿಸಿದರು. ಸದ್ರಿ ಸ್ಥಳದ ರಸ್ತೆಯ ಬಗ್ಗೆ ವಿವಾದವಿದ್ದು ಈ ಕುರಿತು ಸಮಸ್ಯೆ ಬಗೆಹರಿಸಲು ತಹಸೀಲ್ದಾರರಿಗೆ ಪತ್ರ ಬರೆಯಲಾಗಿದೆ. ರಮೇಶ್ ಆಚಾರ್ಯ ಅವರಿಗೆ ಖಾತೆ ನೀಡುವುದಾಗಿ ಮುಖ್ಯಾಧಿಕಾರಿ ಇಂದು. ಎಂ ಉತ್ತರಿಸಿದರು.
ಗಾಂಧಿನಗರ ಮತ್ತು ಕೋಟೆಬಾಗಿಲಿನಲ್ಲಿರುವ ಪರಂಬೋಕು ತೋಡುಗಳನ್ನು ಮುಚ್ಚಿರುವುದರಿಂದ ಮಳೆ ನೀರು ಹರಿದು ಹೋಗಲು ಕಷ್ಟ ಸಾಧ್ಯವಾಗುತ್ತದೆ ಆದ್ದರಿಂದ ಇದನ್ನು ತೆರೆದು ಕೊಡಬೇಕೆಂದು ಸದಸ್ಯರಾದ ದಿವ್ಯ ಜಗದೀಶ್ ಮತ್ತು ಹಿಮಾಯತ್ ಶೇಖ್ ಆಗ್ರಹಿಸಿದರು.
ಮಾರ್ಪಾಡಿ ಗ್ರಾಮದ ಸರ್ವೇ ನಂ.2591ಎ ಯಲ್ಲಿ 0.25 ಸೆಂಟ್ಸ್ ಸರ್ಕಾರಿ ಜಮೀನಿನಲ್ಲಿ ಮಾಜಿ ಸೈನಿಕರ ವೇದಿಕೆಯು ಯುದ್ಧ ಸ್ಮಾರಕ ನಿರ್ಮಿಸಲು ಜಮೀನು ಮಂಜೂರುಗೊಳಿಸುವಂತೆ ಬರೆದ ಪತ್ರದ ಕುರಿತು ಚರ್ಚಿಸಲಾಯಿತು, ಈ ಸ್ಥಳವು ವಿವಾದದಲ್ಲಿರುವುದರಿಂದ ತಹಸೀಲ್ದಾರರಿಗೆ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಿದ ಬಳಿಕ ಕ್ರಮ ಕೈಗೊಳ್ಳಲು ನಿರ್ಣಯಿಸಲಾಯಿತು.
ಸದಸ್ಯರಾದ ಪಿ. ಕೆ. ಥೋಮಸ್, ಪ್ರಸಾದ್ ಕುಮಾರ್, ಕೊರಗಪ್ಪ, ಜೊಸ್ಸಿ ಮಿನೇಜಸ್, ಪುರಂದರ ದೇವಾಡಿಗ, ಸುರೇಶ್ ಪ್ರಭು, ರೂಪಾ ಶೆಟ್ಟಿ, ಸೌಮ್ಯ ಶೆಟ್ಟಿ, ಮಮತಾ ಆನಂದ್, ನಾಮ ನಿದೇ೯ಶಿತ ಸದಸ್ಯ ವರುಣ್, ಎಂಜಿನಿಯರ್ ಚಚೆ೯ಯಲ್ಲಿ ಪಾಲ್ಗೊಂಡಿದ್ದರು.
----------------------------
23 ವಾಡು೯ಗಳ ಅಭಿವೃದ್ಧಿ ಕಾಮಗಾರಿಗಳಿಗೆ ಸಮಾನವಾಗಿ ಹಂಚಿಕೆಯಾದ 20 ಲಕ್ಷ
ಪ್ರತೀ ವಾರ್ಡುಗಳಲ್ಲಿ ರಸ್ತೆ ದುರಸ್ತಿ ಹಾಗೂ ಇತರ ತುರ್ತು ಕಾಮಗಾರಿಗಳಿಗಾಗಿ ಪುರಸಭೆಯು ರೂ.10 ಲಕ್ಷ ಮೀಸಲಿಡಲಿದೆ. ಈಗಾಗಲೇ ಒಂದು ಹಂತದಲ್ಲಿ ಎಲ್ಲಾ ವಾಡು೯ಗಳಿಗೆ ಅಭಿವೃದ್ಧಿ ಕಾಮಗಾರಿಗೆ ರೂ 10 ಲಕ್ಷವನ್ನು ನೀಡಲಾಗಿದೆ ಈ ಮೂಲಕ ಯಾವುದೇ ಪಕ್ಷವೆಂದು ಬೇಧಭಾವ ಮಾಡದೆ ಪ್ರತಿಯೊಬ್ಬ ಸದಸ್ಯರ ವಾಡು೯ಗಳಿಗೂ 6 ತಿಂಗಳಲ್ಲಿ 20 ಲಕ್ಷ ಅನುದಾನವನ್ನು ಹಂಚಿಕೆ ಮಾಡಿದ ಹೆಗ್ಗಳಿಕೆ ಅಧ್ಯಕ್ಷೆ ಜಯಶ್ರೀ ಕೇಶವ್ ಮತ್ತು ಉಪಾಧ್ಯಕ್ಷ ನಾಗರಾಜ ಪೂಜಾರಿ ಅವರಿಗೆ ಸಲ್ಲುತ್ತದೆ.
-------------------
0 Comments