ಮೂಡುಬಿದಿರೆ: ಪ್ಲಾಸ್ಟಿಕ್ ನಿಷೇಧಕ್ಕೆ ಅಧಿಸೂಚನೆ
ಮೂಡುಬಿದಿರೆ : ಅರಣ್ಯ, ವಸ್ತುಗಳ ಬಳಕೆಯನ್ನು ಪುರಸಭಾ ಪರಿಸರಮತ್ತು ಜೀವಿಶಾಸ್ತ್ರಸಚಿವಾಲಯದ ವ್ಯಾಪ್ತಿಯಲ್ಲಿ ನಿಷೇಧಿಸಲಾಗಿದೆ. ಇದರ ಅಧಿಸೂಚನೆಯಂತೆ, ಯಾವುದೇ ವ್ಯಕ್ತಿ, ಜತೆಗೆ, ಸಾರ್ವಜನಿಕರ ಆರೋಗ್ಯದ ಅಂಗಡಿ ಮಾಲಕ, ಮಾರಾಟಗಾರ, ಹಿತದೃಷ್ಟಿಯಿಂದ ಹೋಟೆಲ್, ಸಗಟು ಮಾರಾಟಗಾರ, ಕೈಗಾರಿಕೆ, ಚಿಲ್ಲರೆ ಕ್ಯಾಂಟೀನ್, ಇತರೆ ಸಿದ್ದ ಆಹಾರ ವ್ಯಾಪಾರಿ, ವ್ಯಾಪಾರಿ, ಮಾರಾಟಗಾರರು ಮತ್ತು ಗ್ರಾಹಕರು ಯಾವುದೇ ದಪ್ಪದ, ಯಾವುದೇ ಅಳತೆಯ, ಯಾವುದೇ ರೀತಿಯ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ನಾನ್ ವೊವನ್ ಪಾಲಿ ಪ್ರೊಪಿಲೀನ್ ಬ್ಯಾಗ್, ಪ್ಲಾಸ್ಟಿಕ್ ಭಿತ್ತಿಪತ್ರ, ಪ್ಲಾಸ್ಟಿಕ್ ತೋರಣ, ಪ್ಲೆಕ್ಸ್, ಪ್ಲಾಸ್ಟಿಕ್ ಬಾವುಟ, ಪ್ಲಾಸ್ಟಿಕ್ ತಟ್ಟೆ ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ಚಮಚ, ಕ್ಲಿಂಗ್ ಪಿಲ್ಡ್, 200 ಮಿ.ಲೀ. ನೀರಿನ ಪ್ಲಾಸ್ಟಿಕ್ ಬಾಟಲ್, ನೀರಿನ ಪ್ಯಾಕೆಟ್, ಪ್ಲಾಸ್ಟಿಕ್ ಸ್ಟ್ರಾ ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆ, ಥರ್ಮೋಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋ ಬೀಡ್ ನಿಂದ ತಯಾರಾದಂತಹ ಮೇಲ್ಕಂಡ ತಯಾರಿಕಾ ಉದ್ದಿಮೆಗಳಲ್ಲಿ ಯಾವುದೇ ರೀತಿಯ ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್ ಕವರ್‌ಗಳಲ್ಲಿ ಹಾಕಿ ನೀಡುವುದನ್ನು ನಿಷೇಧಿಸಲಾಗಿದೆ. ಇದೇ ಮಾ.1ರಿಂದ ಕಡ್ಡಾಯವಾಗಿ ಅನ್ವಯವಾಗುವಂತೆ, ಸಾರ್ವಜನಿಕರು ಪರ್ಯಾಯ ವ್ಯವಸ್ಥೆಯಾದ ಬಟ್ಟೆ ಚೀಲ, ಸೆಣಬಿನ ಚೀಲ, ಪೇಪರ್ ಕವರ್, ಬುಟ್ಟಿ, ಸ್ಟೀಲ್ ಡಬ್ಬಗಳು, ಬಾಳೆಎಲೆ, ಅಡಿಕೆ ಹಾಳೆ ಇನ್ನಿತರ ಪರ್ಯಾಯ ವಸ್ತುಗಳನ್ನು ಉಪಯೋಗಿಸಬೇಕೆಂದೂ ತಪ್ಪಿದಲ್ಲಿ ಗರಿಷ್ಟದಂಡ ವಿಧಿಸಲಾಗುವುದು ಎಂದೂ ಪುರಸಭೆ ಕಚೇರಿ ಪ್ರಕಟನೆ ತಿಳಿಸಿದೆ.
0 Comments