"ಆಧ್ಯಾತ್ಮ ಜೈನ ಧರ್ಮದ ದೊಡ್ಡ ಶಕ್ತಿ : ಜಗದೀಪ್ ಧನಕರ್"
ಹುಬ್ಬಳ್ಳಿ ,ಬಹು ಪುರಾತನವಾದ ಜೈನ ಧರ್ಮ ಶಾಂತಿ ಅಹಿಂಸೆ ಸಂಸ್ಕೃತಿ, ಸಂಸ್ಕಾರಗಳ ಪ್ರತೀಕವಾಗಿದ್ದು, ನಂಬಿಕೆ -ಜ್ಞಾನ ಮತ್ತು ಆಧ್ಯಾತ್ಮಗಳೆಂಬ ಮೂರು ವಿಚಾರಗಳನ್ನು ಪ್ರತಿನಿಧಿಸಿ ಇದೊಂದು ದೊಡ್ಡ ಶಕ್ತಿಯಾಗಿದೆ ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ತಿಳಿಸಿದರು.
ಅವರಿಂದು ತಾಲೂಕಿನ ವರೂರು ನವಗ್ರಹ ತೀರ್ಥದಲ್ಲಿ 405 ಅಡಿಗಳ ಎತ್ತರದ ಸುಮೇರು ಪರ್ವತದ ಉದ್ಘಾಟನೆ ಹಾಗೂ ಭಗವಾನ್ ಶ್ರೀ ಪಾರ್ಶ್ವನಾಥ ತೀರ್ಥಂಕರರ ಮಹಾಮಸ್ತಕಾಭಿಷೇಕದ ಅಂಗವಾಗಿ ಮೂರ್ತಿಗೆ ಅಭಿಷೇಕ ನೆರವೇರಿಸಿ ಮಾತನಾಡಿದರು.
ಸುಮೇರು ಪರ್ವತ ಧಾರ್ಮಿಕತೆಯ ಮೇರು ಪರ್ವತವಾಗಿದ್ದು ,ಇoದು ವಿಶ್ವಕ್ಕೆ ಶಾಂತಿ ಅಗತ್ಯವಿದೆ, ಜೈನ ಧರ್ಮದ ಮೂಲ ತತ್ವವಾದ ಮಾನವೀಯ ಮೌಲ್ಯ ಅಳವಡಿಸಿಕೊಳ್ಳಿ ಎಂದು ಅವರು ,ಈ ಹಿಂದೆ ಧಾರ್ಮಿಕತೆಯ ಕೇಂದ್ರವಾಗಿದ್ದ ಮಠ ಮಂದಿರಗಳು ಎಂದು ಶೈಕ್ಷಣಿಕ ಕೇಂದ್ರಗಳಾಗುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು .
ವಿಶ್ವದಲ್ಲಿ ಸಂಘರ್ಷಗಳ ಕಾರಣದಿಂದಾಗಿ ಬಿಕ್ಕಟ್ಟುಗಳು ಹೆಚ್ಚುತ್ತಿವೆ , ಶಾಂತಿಗೆ ಯಾವುದೇ ಮಾನ್ಯತೆ ದೊರೆಯುತ್ತಿಲ್ಲ ಇಂದು ಶಾಂತಿಮಂತ್ರ ಅವಶ್ಯವಿದೆ ಎಂದರು. ಶ್ರೀಕ್ಷೇತ್ರ ವರೂರು ದೊಡ್ಡ ಕ್ಷೇತ್ರವಾಗಿ ಬೆಳೆಯಲಿ ಎಂದು ಹಾರೈಸಿದರು.
ಪರಿಸರ ವಿನಾಶ ಮನುಕುಲ ವನ್ನು ಕಾಡುತ್ತಿದ್ದು ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ ಅಗತ್ಯವಿದೆ ,ಇದರಿಂದ ವಿಕಸಿತ ಭಾರತ ಸಾಧ್ಯ. ಅಹಿಂಸಾ ತತ್ವದಿಂದ ಮಾನವ ಸನ್ಮಾರ್ಗ, ಉತ್ತಮ ನಡತೆಯಿಂದ ಬದುಕಲು ಸಾಧ್ಯ , ಸಂಸ್ಕಾರ ಉಳಿಸುವುದರ ಜೊತೆಗೆ ಪೋಷಕರು ಮಕ್ಕಳಿಗೆ ಸದ್ಗುಣ ಕಲಿಸಲಿ ಎಂದು ಹಾರೈಸಿದರು.
ರಾಜ್ಯಪಾಲ ತಾವರ್ ಚಂದ್ ಗೆಲ್ಹೊಟ್ ಮಾತನಾಡಿ, ಕ್ಷೇತ್ರ ಧಾರ್ಮಿಕತೆಯ ಜೊತೆಗೆ ಶೈಕ್ಷಣಿಕ ಸೇವೆಯನ್ನು ಮಾಡುತ್ತಿರುವುದು ಸಂತಸದ ವಿಚಾರ ,ಸಾಧು ಸಂತರ ಆಶೀರ್ವಾದದಿಂದ ನಮ್ಮ ಜೀವನ ಪಾವನಗೊಳಿಸಿಕೊಳ್ಳಬೇಕು .ಇನ್ನೊಬ್ಬರ ದುಃಖಕ್ಕೆ ಸ್ಪಂದಿಸಬೇಕು, ಇದು ಜೈನ ಧರ್ಮದ ಮೂಲ ತತ್ವವಾಗಿದ್ದು, ಈ ಪಂಚಕಲ್ಯಾಣ ವಿಶ್ವ ಶಾಂತಿಗೆ ನಾಂದಿಯಾಗಲಿದೆ ಎಂದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ ಕ್ಷೇತ್ರದ ಬೆಳವಣಿಗೆಗೆ ಗುಣದರನಂದಿ ಶ್ರೀಗಳವರ ಶ್ರಮ ಅಪಾರ ಧರ್ಮ ಜಾಗೃತಿಯ ಜೊತೆಗೆ ಶೈಕ್ಷಣಿಕ ಕ್ರಾಂತಿ ಸ್ಮರಣೀಯ ಎಂದರು.ಕುಂದುಗೋಳ ಶಾಸಕ ಎಂ.ಆರ್ .ಪಾಟೀಲ್ ಮಾತನಾಡಿ ಧರ್ಮದ ಬೆಳವಣಿಗೆಗೆ ಶಾಂತಿ ಸಂದೇಶಗಳು ಅಗತ್ಯವಿದೆ ಎಂದರು.
ಹುಬ್ಬಳ್ಳಿ ಶಾಸಕ ಪ್ರಸಾದ್ ಭಯ್ಯ ಮಾತನಾಡಿ 24 ತೀರ್ಥoಕರರು ಸಮಾಜದ ಬೆಳವಣಿಗೆಗೆ ಕ್ರಾಂತಿ ಮಾಡಿದ್ದಾರೆ , ಶಾಂತಿ,ಅಹಿಂಸೆ ಮೂಲತತ್ವವಾಗಿರುವ ಜೈನ ಧರ್ಮ ವಿಶ್ವಕಲ್ಯಾಣಕ್ಕೆ ವಿದ್ಯಾಧಾನ ಮಾಡಿದೆ ಎಂದರು.ರಾಜ್ಯ ಬಿಜೆಪಿ ಅಧ್ಯಕ್ಷ ಬಿ .ವೈ .ವಿಜಯೇಂದ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರಾಜ್ಯಸಭಾ ಸದಸ್ಯರು ಪದ್ಮಭೂಷಣ ಡಾ,ಡಿ .ವೀರೇಂದ್ರ ಹೆಗ್ಗಡೆ ಸ್ವಾಗತಿಸಿ ,ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಆಚಾರ್ಯ ಶ್ರೀ ಕುಂತ ಸಾಗರ್ ಮಹಾರಾಜರು ಹಾಗೂ ಶ್ರೀ ಕ್ಷೇತ್ರ ವರೂರು ಜೈನಮಠದ ಸ್ವಸ್ತಿ ಶ್ರೀ ಧರ್ಮಸೇನ ಭಟ್ಟರಕ ಪಟ್ಟಾಚಾರ್ಯ ಶ್ರೀಗಳು ಹಾಗೂ ಶ್ರೀ ಗುಣಧರಾನಂದಿ ಮಹಾರಾಜರು ಪಾವನ ಸನ್ನಿಧಿಯ ಉಳಿಸಿದ್ದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸಂಜಯ್ ಪಾಟೀಲ್, ಜಿತೇಂದ್ರ ಕೊಠಾರಿ, ಮಹೇಂದ್ರ ಸಿಂಗ್ವಿ ,ವಿಮಲ್ ತಾಳಿಕೋಟೆ, ಹುಬ್ಬಳ್ಳಿ ದಿಗಂಬರ ಜೈನ ಮಹಿಳಾ ಸಮಾಜದ ಅಧ್ಯಕ್ಷರಾದ ತ್ರಿಶಾಲ ಮಾಲಗುತ್ತಿ ಸೇರಿದಂತೆ ಲಕ್ಷಾಂತರ ಜೈನ ಬಾಂಧವರುಗಳು ,ವಿವಿಧ ಸಂಘ-ಸಂಸ್ಥೆಗಳ ಮುಖಂಡರುಗಳು, ಶ್ರಾವಕ -ಶ್ರಾವಕಿ ಯರು ಭಾಗವಹಿಸಿದ್ದರು.ಕುಮುದ ನಾಗಭೂಷಣ್ ಕಾರ್ಯಕ್ರಮ ನಿರೂಪಿಸಿದರು.
ವರದಿ : ಜೆ ರಂಗನಾಥ- ತುಮಕೂರು
0 Comments