ಅಂದು ಹೋಟೆಲ್ ಕಾರ್ಮಿಕರು ಇಂದು ಉನ್ನತ ಸ್ಥಾನದ ಉದ್ಯೋಗಿಗಳು-ಮಂಗಳೂರಿನಲ್ಲಿ ಬದುಕು ಕಟ್ಟಿಕೊಂಡ ಅಂದಿನ ಕಾರ್ಮಿಕರು ಮತ್ತೆ ಒಂದೇ ವೇದಿಕೆಗೆ

ಜಾಹೀರಾತು/Advertisment
ಜಾಹೀರಾತು/Advertisment

 ಅಂದು ಹೋಟೆಲ್ ಕಾರ್ಮಿಕರು ಇಂದು ಉನ್ನತ ಸ್ಥಾನದ ಉದ್ಯೋಗಿಗಳು-ಮಂಗಳೂರಿನಲ್ಲಿ  ಬದುಕು ಕಟ್ಟಿಕೊಂಡ ಅಂದಿನ ಕಾರ್ಮಿಕರು ಮತ್ತೆ ಒಂದೇ ವೇದಿಕೆಗೆ


ಮಂಗಳೂರಿನಲ್ಲಿ ಗಮನಸೆಳೆವ ವಿಭಿನ್ನ ಕಾರ್ಯಕ್ರಮ

ಮಂಗಳೂರು ಇದು ಕೇವಲ ಕಡಲ ನಗರಿಯಲ್ಲ, ಮಂಗಳೂರು ಎಂದರೆ ಬರೀ ಬಂದರು ನಗರ ಅಲ್ಲ, ಶಿಕ್ಷಣ ಸಂಸ್ಥೆಗಳನ್ನು ಹುಟ್ಟಿಸಿ ಬೆಳೆಸಿರುವ ಶಿಕ್ಷಣ ಕಾಶಿ ಮಾತ್ರವಲ್ಲ, ವೈದ್ಯಕೀಯ ಸಾಮ್ರಾಜ್ಯವನ್ನು ನಿರ್ಮಿಸುವ ವೈದ್ಯಕೀಯ ನಗರಿ ಮಾತ್ರವೇ ಅಲ್ಲ... ಮಂಗಳೂರೆಂದರೆ ಲಕ್ಷಾಂತರ ಕೋಟ್ಯಾಂತರ ಜನರು ಬದುಕು ಕಟ್ಟಿಕೊಂಡಿರುವ ನಗರ. ಎಲ್ಲಿಂದಲೋ ಬಂದು ಇಲ್ಲಿ ಬದುಕಿ ಬಾಳಿ ಜೀವನ ಕಟ್ಟಿಕೊಂಡವರು ಅನೇಕರು ಮತ್ತು ಇಲ್ಲಿಂದ ಎಲ್ಲಿಗೋ ತೆರಳಿ, ಅಲ್ಲಿ ಜೀವನ ಕಟ್ಟಿಕೊಂಡು ಮಂಗಳೂರನ್ನು ಮರೆಯದೆ ತಾಯ್ನಾಡನ್ನು ಬೆಳೆಸುತ್ತಿರುವವರು ಮತ್ತದೆಷ್ಟೋ ಜನರು. ಒಟ್ಟಾರೆ ಮಂಗಳೂರೆಂದರೆ ಅದು ನಮ್ಮ ತವರು. ಇಂತಹ ಮಂಗಳೂರಿನ ನಗರದಲ್ಲಿ ಹೋಟೆಲ್ ಕಾರ್ಮಿಕರು ಸೇರಿ ನಡೆಸುವ ವಿಭಿನ್ನ ಕಾರ್ಯಕ್ರಮವೇ ಅಭಿಮಾನ್ ಸ್ನೇಹ ಸಮ್ಮಿಲನ.

ಯಾವುದೋ ಕಷ್ಟಗಳಿಗಾಗಿ, ಜೀವನ ನಡೆಸುವುದಕ್ಕಾಗಿ ಅಥವಾ ತಮ್ಮ ಕುಟುಂಬದವರಿಗಾಗಿ ನಾವು ಒಂದು ಕಡೆ ಕೆಲಸಕ್ಕೆ ತೆರಳುವುದು ಸಾಮಾನ್ಯ. ಆದರೆ ನಾವು ಕೆಲಸ ಮಾಡಿದ ಸಂಸ್ಥೆಯನ್ನು ಜೀವನ ಪರ್ಯಂತ ನೆನಪಿಟ್ಟುಕೊಂಡು ಗೌರವಿಸುವ ಪರಿ ಎಲ್ಲರಲ್ಲೂ ಇರಲ್ಲ. ಕೆಲವು ಸಂಸ್ಥೆಗಳು ಭಾವನಾತ್ಮಕವಾಗಿ ನಮ್ಮಲ್ಲಿ ಅಚ್ಚಳಿಯದೆ ಉಳಿದು ಬಿಡುತ್ತದೆ. ಅಂತಹ ಒಂದು ಅದ್ಭುತವಾದಂತಹ ಕ್ಷಣಕ್ಕೆ ಮಂಗಳೂರು ಸಾಕ್ಷಿಯಾಗಲಿದೆ. ಹತ್ತಾರು ನೂರಾರು ಹೋಟೆಲ್ ಗಳನ್ನು ಹೊಂದಿರುವ ಮತ್ತು ಅನೇಕ ವಸತಿ ಸೌಕರ್ಯ ವ್ಯವಸ್ಥೆಗಳನ್ನು ಹೊಂದಿರುವ ಮಂಗಳೂರು ನಗರದಲ್ಲಿ ಒಂದು ಕಾಲದಲ್ಲಿ ಉದ್ಯೋಗವನ್ನು ನಡೆಸಿಕೊಂಡು ಬದುಕು ಕಟ್ಟಲು ಸೇತುವೆಯಾಗಿ ಕೆಲಸ ಮಾಡಿ ಈಗ ಉನ್ನತ ಸ್ಥಾನಕ್ಕೇರಿದ ಅನೇಕ ಕಾರ್ಮಿಕರು ಒಂದಾಗಿ ನಡೆಸುವ ಅಭಿಮಾನ್ ಸ್ನೇಹ ಸಮ್ಮೇಳನ ಕಾರ್ಯಕ್ರಮವು ಆದಿತ್ಯವಾದ ನಡೆಯಲಿದೆ.

ಗ್ರಾಮೀಣ ಭಾಗದ ಅನೇಕ ಯುವಕರು ಹಗಲಲ್ಲಿ ನಗರದ ಹೋಟೆಲ್ಗಳಲ್ಲಿ‌ ವಿವಿಧ ವಿಭಾಗಗಳಲ್ಲಿ ಕಾರ್ಮಿಕರಾಗಿ ದುಡಿದು ಸಂಜೆಯ ಹೊತ್ತಿಗೆ ವಿದ್ಯಾಭ್ಯಾಸ ನಡೆಸುವಂತಹ ವ್ಯವಸ್ಥೆ ಮಂಗಳೂರಿನಲ್ಲಿ ಹಿಂದಿನಿಂದಲೂ ಇತ್ತು. ಮಂಗಳೂರಿನ ವಿವಿಧ ಶಿಕ್ಷಣ ಸಂಸ್ಥೆಗಳು ಸಂಜೆ ಕಾಲೇಜು ಶಿಕ್ಷಣ ಸಂಸ್ಥೆಗಳು ಕಾರ್ಮಿಕರಿಗಾಗಿ ಈ ವ್ಯವಸ್ಥೆ ತಂದಿತ್ತು. ವಿದ್ಯಾರ್ಥಿಗಳು ಹಗಲಿನಲ್ಲಿ ವಿವಿಧ ಹೋಟೆಲ್ಗಳಲ್ಲಿ ಅಥವಾ ವಿವಿಧ ಕಡೆಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು ಮತ್ತು ಸಂಜೆ ಶಿಕ್ಷಣ ನಡೆಸುತ್ತಿದ್ದರು. ಇಂದು ಆ ಕಾರ್ಮಿಕರು ಸಮಾಜದ ಉನ್ನತ ಹಂತವನ್ನು ತಲುಪುತ್ತಿರುವ ಅಂದಿನ ಕಾರ್ಮಿಕರಾಗಿದ್ದಾರೆ.

 ಇಂದು ಆ ಅಂದಿನ ಕಾರ್ಮಿಕರ ಬಹುತೇಕರ ಪೈಕಿ ಶಿಕ್ಷಕರು, ವೈದ್ಯರು ಪೊಲೀಸರು ಅಥವಾ ಉದ್ಯಮಿಗಳು ಮತ್ತು ಖಾಸಗಿ ಕಂಪನಿಗಳ ಉನ್ನತ ಸ್ಥಾನಮಾನವನ್ನು ಅಲಂಕರಿಸಿದ ಉದ್ಯೋಗಿಗಳಾಗಿದ್ದಾರೆ. ಆದರೆ ಇವರೆಲ್ಲರೂ ತಮ್ಮ ಪೂರ್ವ ಕಾರ್ಯದ ಸೂರನ್ನು ಮರೆಯದೆ ಮತ್ತೆ ಒಂದಾಗೋಣ ಮತ್ತೊಮ್ಮೆ ಸೇರಿ ನಮ್ಮ ಬದುಕನ್ನು ಮೆಲುಕು ಹಾಕೋಣ ಎಂಬ ಚಿಂತನೆಯನ್ನು ನಡೆಸಿ ಆದಿತ್ಯವಾರ 19 ನೇ ತಾರೀಖಿನಂದು ಬೆಳಿಗ್ಗೆ 10:30ಕ್ಕೆ  ಅಭಿಮಾನ್ ಸಮ್ಮಿಲನ 2025 ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. 2011 ರಿಂದ 2022ರ ವರೆಗೆ ಮಂಗಳೂರಿನಲ್ಲಿದ್ದ ಉದ್ಯೋಗಿಗಳ ಸ್ನೇಹ ಸಮ್ಮಿಲನ ಎಂಬ ಕಾರ್ಯಕ್ರಮದ ಅಡಿಯಲ್ಲಿ ಈ ಸಮಾಗಮ ಕಾರ್ಯಕ್ರಮವು ಮಂಗಳೂರಿನ ಜ್ಯೋತಿ ವೃತ್ತದ ಬಳಿ ಇರುವ ಹೋಟೆಲ್ ಕ್ವಾಲಿಟಿಯ ಎಸಿ ಸಭಾಂಗಣದಲ್ಲಿ ನಡೆಯಲಿದೆ.



 ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಭಿಮನ್ ಸ್ನೇಹ ಸಮ್ಮಿಲನ ಸಮಿತಿಯ ಅಧ್ಯಕ್ಷರಾದ ಶ್ರೀ ವಿಶ್ವನಾಥ್ ಕಾಮತ್ ರವರು ವಹಿಸಿರುತ್ತಾರೆ. ಮುಖ್ಯ ಅತಿಥಿಗಳಾಗಿ ಶ್ರೀಮತಿ ಸ್ಟೆಲ್ಲಾ ಡಿಸೋಜಾ ಕದ್ರಿ, ಶ್ರೀ ಮನೋಹರ ಶೆಟ್ಟಿ ಮಂಜೇಶ್ವರ, ಶ್ರೀ ಶೇಖರ ಆಳ್ವ ಕಾರ್ಯದರ್ಶಿಗಳು ಅಭಿಮನ್ ಸ್ನೇಹ ಸಮ್ಮಿಲನ ಸಮಿತಿ ಇವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.


 ಮುಂದುವರಿದು ಈ ಕಾರ್ಯಕ್ರಮದಲ್ಲಿ ಅಂದು ಕಾರ್ಮಿಕರಾಗಿ ಕೆಲಸ ಮಾಡಿದ್ದ ಶ್ರೀಮತಿ ಸುಂದರಿ ಆಕಾಶಭವನ, ಶ್ರೀಮತಿ ಮೀನಾ ಕುತ್ತಾರ್, ಶ್ರೀಮತಿ ಸೀತಾ ಬಜಾರ್, ಶ್ರೀಮತಿ ಜಯಂತಿ ಆಕಾಶಭವನ, ಶ್ರೀಮತಿ ದಮಯಂತಿ ಆಕಾಶಭವನ ಇವರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗಿದೆ. ಹೋಟೆಲ್ ಕಾರ್ಮಿಕರಾಗಿ ಕಾರ್ಯನಿರ್ವಹಿಸಿ ಇಂದು ಉನ್ನತ ಪದವಿಯನ್ನು ಅಲಂಕರಿಸಿರುವ ಪ್ರವೀಣ್ ಪೂಜಾರಿ ಪಣಪಿಲ ಮತ್ತು ಗಿರೀಶ್ ಕುಮಾರ್ ಪಣಪಿಲ ರವರು ಸಂಘಟನಾ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿ ಈ ಕಾರ್ಯಕ್ರಮವನ್ನು ಆಯೋಜಿಸಿರುತ್ತಾರೆ.


ಈ ಸಮ್ಮಿಲನ ಸಮಾಗಮದಲ್ಲಿ ವಿವಿಧ ಮನೋರಂಜನಾ ಕಾರ್ಯಕ್ರಮಗಳು, ಸದಸ್ಯರ ಪರಿಚಯಗಳು, ಸನ್ಮಾನ, ಗೌರವರ್ಪಣೆ ಹಾಗೂ ಭೋಜನದ ವ್ಯವಸ್ಥೆಯನ್ನು ಕೂಡ ಈ ಸಮ್ಮಿಲನ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ. ಇದೊಂದು ವಿಭಿನ್ನ ಹಾಗೂ ವಿಶೇಷ ಕಾರ್ಯಕ್ರಮವಾಗಿದ್ದು ತಾವು ದುಡಿದ ಸಂಸ್ಥೆಯನ್ನು ಅಥವಾ ತಾವು ಕಾರ್ಯನಿರ್ವಹಿಸಿದಂತಹ ಕಾರ್ಯಕ್ಷೇತ್ರವನ್ನು ಮರೆಯದೆ ಅದಕ್ಕೊಂದು ಗೌರವ ನೀಡುವ ಉತ್ತಮ ಕಾರ್ಯಕ್ರಮವಾಗಿದ್ದು ಇದನ್ನು ಹಮ್ಮಿಕೊಳ್ಳಲು ನಮಗೆ ಹೆಮ್ಮೆಯಾಗುತ್ತಿದೆ ಎಂದು ಕಾರ್ಯಕ್ರಮದ ಆಯೋಜಕರು ತಮ್ಮ ಅನಿಸಿಕೆಗಳಲ್ಲಿ ವ್ಯಕ್ತಪಡಿಸಿದ್ದಾರೆ.

Post a Comment

0 Comments