ಶಾಲಾ ಆಟದ ಮೈದಾನದಲ್ಲಿ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ತೊಟ್ಟೆಗಳು
*ತೆಂಕಮಿಜಾರಿನಲ್ಲಿ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ವಿದ್ಯಾಥಿ೯ಗಳ ಅಳಲು
ಮೂಡುಬಿದಿರೆ : ನಾವು ಆಟ ಆಡುವ ಶಾಲಾ ಆಟದ ಮೈದಾನದಲ್ಲಿ ಮದ್ಯದ ಬಾಟಲಿಗಳು ಮತ್ತು ಪ್ಲಾಸ್ಟಿಕ್ ತೊಟ್ಟೆಗಳು ಪ್ರತಿದಿನ ಬೀಳುತ್ತಿದ್ದು ಬೆಳಿಗ್ಗೆ ನಾವೇ ತೆಗೆದು ಬಿಸಾಡಿದರೂ ಮತ್ತೆ ಮರುದಿನ ಅದೇ ಪರಿಸ್ಥಿತಿಯಿದೆ ಆದ್ದರಿಂದ ಈ ಬಗ್ಗೆ ಪಂಚಾಯತ್ ಸೂಕ್ತ ವಾದ ಕ್ರಮ ಕೈಗೊಳ್ಳುವಂತೆ ಮಿಜಾರು ಬಂಗಬೆಟ್ಟು ಪ್ರೌಢಶಾಲೆಯ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ
ತೆಂಕಮಿಜಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಲಿನಿ ಕೆ. ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಅಶ್ವತ್ಥಪುರದ ವಿವಿದ್ದೊದ್ದೇಶ ಸಭಾಂಗಣ ಸಂತೆಕಟ್ಟೆ ಇಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆಯಲ್ಲಿ ವಿದ್ಯಾಥಿ೯ನಿ ಪೃಥ್ವಿ ಮಾತನಾಡಿ ಸಮಸ್ಯೆಯನ್ನು ಸಭೆಯ ಗಮನಕ್ಕೆ ತಂದರು.
ಆಟದ ಮೈದಾನ ಕ್ಕೆ ಆವರಣದ ಗೋಡೆ ಇಲ್ಲದಿರುವುದರಿಂದ ಇಂತಹ ಸಮಸ್ಯೆಗಳು ಆಗುತ್ತಿವೆ ಆದ್ದರಿಂದ ಪಂಚಾಯತ್ ಈ ಬಗ್ಗೆ ಗಮನ ಹರಿಸಬಹುದಾ ಎಂದು ಪ್ರಶ್ನಿಸಿದರು.
ಆಟದ ಮೈದಾನದ ಬಳಿ ಯಾರು ಕುಳಿತುಕೊಳ್ಳದಂತೆ ನೋಡುವಂತೆ ಪೊಲೀಸರ ಗಮನಕ್ಕೆ ತರಲಾಗುವುದು. ಆವರಣ ಗೋಡೆ ನಿಮಿ೯ಸುವ ಬಗ್ಗೆ ಯೋಚಿಸಲಾಗುವುದೆಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೋಹಿಣಿ ತಿಳಿಸಿದರು.
ಕನಾ೯ಟಕ ಪಬ್ಲಿಕ್ ಸ್ಕೂಲ್ ಮಿಜಾರು ಇಲ್ಲಿನ ವಿದ್ಯಾಥಿ೯ನಿ ಮಾತನಾಡಿ ಶಾಲೆಯ ಮೇಲ್ಗಡೆ ಅಶ್ವತ್ಥದ ಮರದ ಕೊಂಬೆಗಳು ಬಿದ್ದು ಪಾಟ ಮಾಡಲು ಕಷ್ಟವಾಗುತ್ತಿದೆ. ಅಲ್ಲದೆ ಮಳೆಗಾಲದಲ್ಲಿ ವಿಷಜಂತುಗಳು ಶಾಲೆಯ ಒಳಗಡೆ ಬರುತ್ತಿವೆ ಎಂದು ಸಭೆಯ ಗಮನಕ್ಕೆ ತಂದಳು, ನಮ್ಮ ಶಾಲೆಯಲ್ಲಿ ಶೌಚಾಲಯ ದೂರ ಇರುವುದರಿಂದ ಅಲ್ಲಿಗೆ ಹೋಗಲು ಕಷ್ಟವಾಗುತ್ತಿದೆ ಅಲ್ಲದೆ ಅಲ್ಲಿ ಚಿರತೆಯ ಕಾಟವೂ ಇದೆ ಎಂದು ಇನ್ನೋವ೯ ವಿದ್ಯಾಥಿ೯ ಹೇಳಿದಾಗ ಮರ ತೆರವಿಗೆ ಮತ್ತು ಚಿರತೆಯ ಸಮಸ್ಯೆಗೆ ಅರಣ್ಯ ಇಲಾಖಾಧಿಕಾರಿಗಳ ಗಮನಕ್ಕೆ ತರಲಾಗುವುದು. ಶೌಚಾಲಯದ ಬಗ್ಗೆ ಗಮನ ಹರಿಸಲಾಗುವುದು ಎಂದು ಪಿಡಿಓ ತಿಳಿಸಿದರು.
ಶಾಲೆಯ ಕಸವನ್ನು ಪ್ರತಿದಿನ ಸಂಗ್ರಹ ಮಾಡದಿರುವ ಬಗ್ಗೆ, ವಾಣಿ ವಿಲಾಸ ಅನುದಾನಿತ ಶಾಲೆಗೆ ಆವರಣ ಗೋಡೆ ನಿಮಿ೯ಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಮಧುಮಾಲ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಹಿಳೆ, ಮಕ್ಕಳ ಹಕ್ಕು ಮತ್ತು ರಕ್ಷಣೆ, ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು.
ಕಳೆದ ೫ ವಷ೯ಗಳಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಲ್ಲಮುಂಡ್ಕೂರು ವ್ಯಾಪ್ತಿಯ ಮೇಲ್ವೀಚಾರಕಿಯಾಗಿ ಉತ್ತಮ ಸೇವೆ ಸಲ್ಲಿಸಿ ಇದೀಗ ಬೆಳುವಾಯಿಗೆ ವಗಾ೯ವಣೆಗೊಂಡಿರುವ ಕಾತ್ಯಾಯಿನಿ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಕು.ಹಿಮಾನಿ ಉದ್ಘಾಟಸಿದ ಕಾಯ೯ಕ್ರಮದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಸಾಧನೆ ಮಾಡಿರುವ ವಿದ್ಯಾಥಿ೯ನಿಗಳನ್ನು ಗುರುತಿಸಿ ಗೌರವಿಸಲಾಯಿತು. ಸ್ವಚ್ಛತಾ ಹೀ ಸೇವಾ ಎಂಬ ವಿಷಯದ ಕುರಿತು ನಡೆದ ಸ್ಪಧೆ೯ಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಗ್ರಾ. ಪಂ. ಉಪಾಧ್ಯಕ್ಷ ಕರುಣಾಕರ ಶೆಟ್ಟಿ, ಸದಸ್ಯೆ ಲಕ್ಷ್ಮೀ, ಆರೋಗ್ಯ ಇಲಾಖೆ ದಿವ್ಯಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವೀಚಾರಕಿ ಶುಭ, ಶಿಕ್ಷಣ ಇಲಾಖೆಯ ಸಿ.ಆರ್.ಪಿ. ರಾಬರ್ಟ್, ತಾಲೂಕು ವ್ಯವಸ್ಥಾಪಕ ವಿಜೇಶ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಬೇಬಿ, ನರೇಗಾ ಯೋಜನೆಯ iec ಸಂಯೋಜಕಿ ಅನ್ವಯ ಇಲಾಖೆಯ ಮಾಹಿತಿ ನೀಡಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೋಹಿಣಿ ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ದ್ವಿ. ದ. ಲೆ. ಸಹಾಯಕ ರಮೇಶ್ ಬಂಗೇರ ಉಪಸ್ಥಿತರಿದ್ದರು. ಸಿಬಂದಿ ರಾಕೇಶ್ ಭಟ್ ಕಾಯ೯ಕ್ರಮ ನಿರೂಪಿಸಿ ವಂದಿಸಿದರು.
0 Comments