ಪುತ್ತಿಗೆ ದೇಗುಲಕ್ಕೆ ಧರ್ಮಸ್ಥಳದಿಂದ ದೇಣಿಗೆ
ಮೂಡುಬಿದಿರೆ : ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಜ. 10ರಂದು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಪುತ್ತಿಗೆ ದೇವಸ್ಥಾನದ ಮೊಕ್ತೇಸರ ಚೌಟರ ಅರಮನೆ ಕುಲದೀಪ್ ಎಂ. ಅವರಿಗೆ ದೇಣಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳಾದ ಶ್ರೀಪತಿ ಭಟ್, ವಾದಿರಾಜ ಮಡುಮಣ್ಣಯಾ, ಪ್ರಧಾನ ಅರ್ಚಕ ಅಡಿಗಲ್ಲು ಅನಂತಕೃಷ್ಣ ಭಟ್, ಶಿವಪ್ರಸಾದ್ ಆಚಾರ್, ವಿದ್ಯಾರಮೇಶ್ ಭಟ್,ವೆಂಕಟ್ರಮಣ ಕಾರಂತ್ ಮತ್ತು ರವಿಶಂಕರ ಪಳಕಳ, ನಿಲೇಶ್ ಶೆಟ್ಟಿ, ರಮೇಶ್ ಭಟ್, ಸಮಿತಿ ಸದಸ್ಯರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
0 Comments