ಮೂಡುಬಿದಿರೆಯಲ್ಲಿದ್ದಾರೆ ಬ್ಯಾಟರಿ ಕಳ್ಳರು
* 6 ತಿಂಗಳಲ್ಲಿ 25ಕ್ಕೂ ಅಧಿಕ ಬ್ಯಾಟರಿಗಳ ಕಳವು, ಖಡಕ್ ಪೊಲೀಸ್ ಅಧಿಕಾರಿಯ ಕೈಗೆ ಸಿಗದ ಆರೋಪಿಗಳು
ಮೂಡುಬಿದಿರೆಯಲ್ಲಿ ಕಳೆದ 6 ತಿಂಗಳಿನಿಂದ ವಿವಿಧ ವಾಹನಗಳ 25ಕ್ಕೂ ಅಧಿಕ ಬ್ಯಾಟರಿಗಳ ಕಳ್ಳತನ ನಡೆದಿದ್ದು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲವೆಂದು ತಿಳಿದು ಬಂದಿದೆ.
ಮೂಡುಬಿದಿರೆ ತಾಲೂಕು ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳಿಗೆ ಹಿಟಾಚಿ, ಜೆಸಿಬಿ,ಲಾರಿ ಹಾಗೂ ಟಿಪ್ಪರ್ ಗಳನ್ನು ಬಳಸಲಾಗುತ್ತದೆ. ಮರುದಿನ ಅಲ್ಲೇ ಅಥವಾ ಅಕ್ಕಪಕ್ಕದಲ್ಲಿ ಕಾಮಗಾರಿ ನಡೆಯಬೇಕಾಗಿದ್ದರೆ ವಾಹನಗಳನ್ನು ಅಲ್ಲಿಯೇ ನಿಲ್ಲಿಸಬೇಕಾಗುತ್ತದೆ.
ಹೀಗೆ ನಿಲ್ಲಿಸಿ ಹೋದ ವಾಹನಗಳನ್ನು ಗುರುತಿಸುವ ಕಳ್ಳರು ಯಾರೂ ಇಲ್ಲದಾಗ ರಾತ್ರಿ ವೇಳೆಗೆ ಬಂದು ತಮ್ಮ ಕೈ ಚಳಕದಿಂದ ಬ್ಯಾಟರಿಗಳನ್ನು ಕದಿಯುತ್ತಿದ್ದಾರೆ.
ಕೆಲವು ಸಲ ಒಂದೇ ವಾಹನದಿಂದ ಎರಡ್ಮೂರು ಸಲ ಬ್ಯಾಟರಿಗಳನ್ನು ಕದ್ದು ಒಯ್ದದ್ದೂ ಇದೆ ಅದರಲ್ಲಿ ರೋಹನ್ ಕಡೋ೯ಜಾ ಅವರ ವಾಹನದಿಂದ 4 ಬ್ಯಾಟರಿ (37000),
ರಂಜಿತ್ ಪೂಜಾರಿ ತೋಡಾರು ಅವರ ಟಿಪ್ಪರ್ ನಿಂದ 3 ಬ್ಯಾಟರಿ (32,000), ಭಟ್ರು ಪಡುಮೊಗರು 2 ಬ್ಯಾಟರಿ (30,000), ಮ್ಯಾಕ್ಸಿ ವೆಲಂಕಣಿ ಬಸ್ ನಿಂದ 4 (60,000),
ರಮಾ ಬೆಳುವಾಯಿ 1 (15000), ಜೆನೆಟ್ ಮೇರಿ 1 (15000), ಅಭಿಮಾನ್ 1 (15,000), ಸ್ವಸ್ತಿಕ್ 1(15000) ಹಾಗೂ ದಿವ್ಯೇಶ್ 1 (15000) ಹೀಗೆ ರೂ.2,49,000 ವೆಚ್ಚದ ಬ್ಯಾಟರಿಗಳು ಕಳ್ಳತನವಾಗಿದೆ.
ಇದಲ್ಲದೆ ಇನ್ನೂ ಹೆಚ್ಚಿನ ಬ್ಯಾಟರಿಗಳು ಕಳವಾಗಿದ್ದು ಮೊದಲು ಕಳವಾದ ಬ್ಯಾಟರಿಗಳೇ ಪತ್ತೆಯಾಗಿಲ್ಲ ಇನ್ನು ದೂರು ಕೊಟ್ಟು ಪ್ರಯೋಜನವಿಲ್ಲವೆಂದು ಕುಳಿತವರು ಹಲವು ಜನರಿದ್ದಾರೆ.
ತಮ್ಮ ವಾಹನಗಳಿಂದ ಮೂರು ನಾಲ್ಕು ಸಾಲ ಬ್ಯಾಟರಿಗಳನ್ನು ಕಳೆದುಕೊಂಡವರು ಮಾತ್ರ ಕಳ್ಳರಿಗೆ ಹಿಡಿಶಾಪ ಹಾಕುತ್ತಿದ್ದಾರೆ.
----------------------
* ಖಡಕ್ ಪೊಲೀಸ್ ಅಧಿಕಾರಿ ಇರುವಲ್ಲಿ ಹೀಗಾದರೆ ಹೇಗೆ..?
ಮೂಡುಬಿದಿರೆ ಠಾಣೆಯಲ್ಲಿ ಖಡಕ್ ಪೊಲೀಸ್ ಅಧಿಕಾರಿ ಎಂದು ಹೆಸರು ಪಡೆದಿರುವ ಠಾಣಾಧಿಕಾರಿ ಸಂದೇಶ್ ಪಿ.ಜಿ ಯವರಿದ್ದಾರೆ. ಬ್ಯಾಟರಿ ಕಳ್ಳತನ ಜಾಲದ ಬಗ್ಗೆ ಅವರು ಗಮನಕ್ಕೂ ಬಂದಿದೆ ಅಲ್ಲದೆ ಸಿಸಿ ಕ್ಯಾಮೆರಾದ ಫೂಟೇಜ್ ಗಳಲ್ಲಿ ಕಳವು ಮಾಡುವ ವ್ಯಕ್ತಿಗಳ ಮುಖಚರ್ಯೆಯು ಕಾಣುತ್ತಿದೆ ಆದರೂ ಬ್ಯಾಟರಿ ಕಳ್ಳರನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಹೀಗಾದರೆ ಬ್ಯಾಟರಿ ಕಳ್ಳರು ಮತ್ತಷ್ಟು ಕಳವುಗೈಯ್ಯಲು ಸಹಕಾರ ನೀಡಿದಂತ್ತಾಗುವುದಿಲ್ಲವೇ ಎಂದು ಬ್ಯಾಟರಿ ಕಳೆದುಕೊಂಡವರು ಪ್ರಶ್ನಿಸಿದ್ದಾರೆ.
----------+--+++++-
0 Comments