"ಶ್ರೀ ಕ್ಷೇತ್ರ ಏಚಿಗನಹಳ್ಳಿ ವಾರ್ಷಿಕೋತ್ಸವ ಸಂಪನ್ನ"
ತಾಲೂಕಿನ ಇತಿಹಾಸ ಪ್ರಸಿದ್ಧ ಏಚಿಗಾನಹಳ್ಳಿ ಶ್ರೀನಿವಾಸ ತೀರ್ಥಂಕರರ 108 ಕಲಸಗಳ ಮಹಾಭಿಷೇಕ ಪೂಜೆ ,ಶ್ರೀ ಕುದುರೆ ಬ್ರಹ್ಮ ಯಕ್ಷರ ಮತ್ತು ಶ್ರೀ ಕುಶ್ಮಾಂಡೀನಿ ದೇವಿಗೆ ಶೋಡಶೋಪಚಾರ ಪೂಜೆ ಇಲ್ಲಿನ ಶ್ರೀ ನೇಮಿನಾಥ ಧಾರ್ಮಿಕ ಸಭಾ ಮಂಟಪದಲ್ಲಿ ನಡೆಯಿತು.
ಶ್ರೀ ಕ್ಷೇತ್ರ ಕನಕಗಿರಿ ಜೈನ ಮಠದ ಸ್ವಸ್ತಿ ಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ಪಾವನ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಹಾಸನದ ಸುದೀಪ್ ಮತ್ತು ಭವ್ಯ ದಂಪತಿಗಳು,ಶ್ರೀ ಕುದುರೆ ಬ್ರಹ್ಮ ದೇವರಿಗೆ ಅರ್ಧ ಕೆ.ಜಿ ತೂಕದ ಬೆಳ್ಳಿಯ ಖಡ್ಗವನ್ನು ದೇಣಿಗೆಯಾಗಿ ನೀಡಿದರು.
ಮಾಜಿ ಮಂಡಲ್ ಪ್ರಧಾನರು ಹಾಗೂ ಎಚಿಗನಹಳ್ಳಿ ಶ್ರೀ ಕುದುರೆ ಬ್ರಹ್ಮದೇವರ ಸೇವಾ ಸಮಿತಿಯ ಅಧ್ಯಕ್ಷ ಕೆ .ಆದಿ ರಾಜಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪುರೋಹಿತ ರತ್ನ ನಾಗ ಕುಮಾರ್ ಪಂಡಿತ್, ಸ್ಥಳೀಯ ಪುರೋಹಿತರು, ಶ್ರೀ ಕುದುರೆ ಬ್ರಹ್ಮದೇವರ ಸೇವಾ ಸಮಿತಿಯ ಪದಾಧಿಕಾರಿಗಳು, ಕಡಕೋಳ -ಏಚಿಗನಹಳ್ಳಿ ಜೈನ ಯುವ ಸಂಘಗಳು, ಮಹಿಳಾ ಸಂಘಗಳು ಪದಾಧಿಕಾರಿಗಳು, ಶ್ರಾವಕ- ಶ್ರಾವಕಿಯರು ಭಾಗವಹಿಸಿದ್ದರು.
ವರದಿ : ಜೆ.ರಂಗನಾಥ ತುಮಕೂರು
0 Comments