ಮೂಡುಬಿದಿರೆ ಯುವವಾಹಿನಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ *ಸಮಾಜಕ್ಕೆ ಕೊಡುಗೆ ನೀಡುವೆ : ಮುರಳೀಧರ್ ಕೋಟ್ಯಾನ್

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ ಯುವವಾಹಿನಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ 

*ಸಮಾಜಕ್ಕೆ ಕೊಡುಗೆ ನೀಡುವೆ : ಮುರಳೀಧರ್ ಕೋಟ್ಯಾನ್ 

ಮೂಡುಬಿದಿರೆ : ತಂದೆ-ತಾಯಿಯ ಆಶಯದಂತೆ ತನ್ನಿಂದ ಸಾಧ್ಯವಾದಷ್ಟು ಸಮಾಜಕ್ಕೆ ಕೊಡುಗೆಯನ್ನು ನೀಡುವೆ ಎಂದು ಯುವವಾಹಿನಿ ಮೂಡುಬಿದಿರೆ ಘಟಕದ ನೂತನ ಅಧ್ಯಕ್ಷ ಮುರಳೀಧರ ಕೋಟ್ಯಾನ್ ತಿಳಿಸಿದರು.

ಅವರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ(ರಿ,) ಮೂಡುಬಿದಿರೆ ಘಟಕದ ವತಿಯಿಂದ  ಭಾನುವಾರ ಕನ್ನಡ ಭವನದಲ್ಲಿ ನಡೆದ 2024-25ನೇ ಸಾಲಿನ ನೂತನ  ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ  ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.

ಯುವವಾಹಿನಿ ಸಂಘಟನೆಯು ತಾನು ಜನರ ಜೊತೆ ಬೆರೆಯಲು ಅವಕಾಶ ಕಲ್ಪಿಸಿದೆ. ಸಮಾಜದಲ್ಲಿರುವ ಆಸಕ್ತರಿಗೆ ನೆರವು ನೀಡುವ ಇರಾದೆ ಇದೆ ಈ ನಿಟ್ಟಿನಲ್ಲಿ ಈಗಾಗಲೇ ಒಂಟಿ ಮಹಿಳೆಯೋವ೯ರಿಗೆ ಮನೆಯನ್ನು ನಿಮಿ೯ಸಲಾಗಿದ್ದು ಹಸ್ತಾಂತರಿಸುವ ಯೋಜನೆಯಿದೆ ಎಂದು ಅವರು ಇನ್ನೂ ಹೆಚ್ಚಿನ ಉತ್ತಮ ಕೆಲಸಗಳನ್ನು ನಿವ೯ಹಿಸಲು ತನಗೆ ಸಹಕಾರ ನೀಡುವಂತೆ  ಕೇಳಿಕೊಂಡರು. 


ನಿವೃತ್ತ ಬ್ಯಾಂಕ್ ಉದ್ಯೋಗಿ ಪದ್ಮನಾಭ ಸಾಲ್ಯಾನ್ ಕಾಯ೯ಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.


ಘಟಕದ ಅಧ್ಯಕ್ಷ ಶಂಕರ್ ಎಂ.ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ ತನ್ನ ಅಧ್ಯಕ್ಷ ಅವಧಿಯಲ್ಲಿ ಹಲವಾರು  ಉತ್ತಮ ಜನಪರ ಕೆಲಸಗಳನ್ನು ಮಾಡಲಾಗಿದ್ದು ಇದಕ್ಕೆ ತಮ್ಮ ಸಮಾಜದವರು ಮಾತ್ರವಲ್ಲದೆ ಇತರ ಸ್ನೇಹಿತರು ಸಹಕಾರ ನೀಡಿದ್ದಾರೆ. ಅಲ್ಲದೆ ತಮ್ಮ ಟೀಮ್ ನವರು ಮತ್ತು ಮನೆಯವರ ಸಹಕಾರದಿಂದಾಗಿ ಸಂಘಟನೆಯನ್ನು ಮುನ್ನಡೆಸಲು ಸಾಧ್ಯವಾಯಿತು ಎಂದರು. ಅಲ್ಲದೆ ಸಹಕಾರ ನೀಡಿದವರನ್ನು ಗುರುತಿಸಿ ಗೌರವಿಸಿದರು.


  ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಹರೀಶ್ ಕೆ.ಪೂಜಾರಿ ಅವರು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

  ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಸುದಶ೯ನ್ ಎಂ. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ    37 ವಾಷಿ೯ಕ ಸಮ್ಮೇಳನ ಮೂಡುಬಿದಿರೆಯಲ್ಲಿ ಯಶಸ್ವಿಯಾಗಿ ನಡೆದಿರುವುದು ಹೆಮ್ಮೆಯ ವಿಷಯ. ಹಿಂದಿನ ಅಧ್ಯಕ್ಷರು 12 ಲಕ್ಷ ವೆಚ್ಚದ ಬಜೆಟ್ ನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಮುಂದಿನ ಅಧ್ಯಕ್ಷರು 20 ಲಕ್ಷದ ಬಜೆಟ್ ನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವಂತ್ತಾಗಲಿ ಎಂದು ಶುಭ ಹಾರೈಸಿದರು. 

 

 ಗೌರವ  :  ಕಂಬಳ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಇರುವೈಲ್ ಪಾಣಿಲ ಸತೀಶ್ಚಂದ್ರ ಸಾಲ್ಯಾನ್ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ  ಮಾಡಿರುವ ಶಮಿತಾ ಶಿವ೯ ಇವರನ್ನು ಗುರುತಿಸಿ ಗೌರವಿಸಲಾಯಿತು. 


ಕಲ್ಲಬೆಟ್ಟು ಸೇ.ಸ.ಸಂಘದ ಅಧ್ಯಕ್ಷ, ಪುರಸಭಾ ಸದಸ್ಯ, ಸುರೇಶ್ ಕೋಟ್ಯಾನ್, ಉದ್ಯಮಿ ರಂಜಿತ್ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ ಡಿ.ಕೆ. ಉಪಸ್ಥಿತರಿದ್ದರು. 

 ನಿಗ೯ಮನ ಕಾಯ೯ದಶಿ೯ ಗಿರೀಶ್ ಕೋಟ್ಯಾನ್ ವಾಷಿ೯ಕ ವರದಿ ವಾಚಿಸಿದರು. ಸ್ಮಿತೇಶ್ ಕಾಯ೯ಕ್ರಮ ನಿರೂಪಿಸಿದರು. ನಿಯೋಜಿತ ಕಾಯ೯ದಶಿ೯ ವಿನೀತ್ ಕುಮಾರ್ ವಂದಿಸಿದರು.

Post a Comment

0 Comments