" ಶ್ರೀ ಕ್ಷೇತ್ರ ಕುಚ್ಚಂಗಿ ಶ್ರೀ ಪಾರ್ಶ್ವನಾಥ ಜೈನಬಸದಿ ವಾರ್ಷಿಕ ಪೂಜಾ ಸಂಪನ್ನ"

ಜಾಹೀರಾತು/Advertisment
ಜಾಹೀರಾತು/Advertisment

 " ಶ್ರೀ ಕ್ಷೇತ್ರ ಕುಚ್ಚಂಗಿ ಶ್ರೀ ಪಾರ್ಶ್ವನಾಥ ಜೈನಬಸದಿ ವಾರ್ಷಿಕ ಪೂಜಾ ಸಂಪನ್ನ"

 ತಾಲೂಕಿನ ಇತಿಹಾಸ ಪ್ರಸಿದ್ಧ  ಶ್ರೀ ಕ್ಷೇತ್ರ ಕುಚ್ಛಂಗಿ ಗ್ರಾಮದ ಶ್ರೀ ಪಾರ್ಶ್ವನಾಥ ಜಿನಮಂದಿರದ 55ನೇ ವಾರ್ಷಿಕ ಪೂಜಾ ಮಹೋತ್ಸವ ಇಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಪನ್ನಗೊಂಡಿತು.ಕುಚ್ಚಂಗಿ ಶ್ರೀ ಪಾರ್ಶ್ವನಾಥ ಚಾರಿಟೇಬಲ್ ಅಂಡ್ ಎಜುಕೇಶನಲ್ ಟ್ರಸ್ಟ್ ತುಮಕೂರು ಇವರ ವತಿಯಿಂದ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಅಭಿಷೇಕ, ಆರಾಧನೆಗಳು, 108 ಕಳಸಗಳ ಮಹಾಭಿಷೇಕ ಪೂಜೆಗಳು ನಡೆದವು.ಕಾರ್ಯಕ್ರಮದಲ್ಲಿ ಗೊಮ್ಮಟವಾಣಿ ಜೈನ ಪಾಕ್ಷಿಕ ಪತ್ರಿಕೆ  ಮಾಜಿ ಸಂಪಾದಕ ರಾದ ಎಸ್. ಎನ್ .ಅಶೋಕ್ ಕುಮಾರ್ ಮಾತನಾಡಿದರು.

 ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಜಿ.ಪಿ .ಉಮೇಶ್ ಕುಮಾರ್, ಜಿನರಾಜ್ ಜೈನ, ಎಂ. ಜೆ. ಬ್ರಹ್ಮಪ್ಪ, ಸನ್ಮತಿ ಕುಮಾರ್, ಜಿ.ಸಿ ಬ್ರಹ್ಮದೇವ್, ಜೈ ಭಾರತ್ ಟ್ರಾನ್ಸ್ ಪೋರ್ಟ್ ನ ಬಾಹುಬಲಿ ,ಬೆಳಗುಲಿ ವಿಜಯ್ ಕುಮಾರ್, ಪದ್ಮರಾಜು, ಬೆಳಗುಲಿ ಕುಬೇರ್, ಶ್ರೀ ದಿಗಂಬರ ಜೈನ ಶ್ರೀ ಪಾರ್ಶ್ವ ನಾಥ ಜಿನಮಂದಿರ ಸಮಿತಿ ಉಪಾಧ್ಯಕ್ಷ ತೋವಿನಕೆರೆ ಶೀತಲ್ ,ಕಾಂತರಾಜು, ಶ್ರುತ ಜೈನ್ ಮಹಿಳಾ ಮಿಲನ ಶೀಲಾ ,ಪದ್ಮಿನಿ ಬ್ರಹ್ಮದೇವ್ ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಜೈನ ಬಂಧುಗಳು, ವಿವಿಧ ಜೈನ ಸಂಘಟನೆಗಳ ಪದಾಧಿಕಾರಿಗಳು, ಮಹಿಳಾ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ಪುರೋಹಿತರಾದ ಶ್ರೀ ಪಾರ್ಶ್ವನಾಥ್ ಹಾಗೂ ಪ್ರಸಾದ್ ಪೂಜೆ, ಧಾರ್ಮಿಕ ,ವಿಧಿ ವಿಧಾನಗಳನ್ನು ನೆರವೇರಿಸಿದರು.

 ಜೆ.ರಂಗನಾಥ ತುಮಕೂರು 

Post a Comment

0 Comments