ಮೂಡುಬಿದಿರೆಯಲ್ಲಿ ನೂತನ ಸ್ಟೋರಿಸ್ ಬೈ ಕ್ಯಾಂಡಿಡ್ ಕ್ಲಬ್ ಆರ್ಟ್ ಆಫ್ ಫ್ರಾಂಜನ್ ಬ್ಯೂಟಿ ಆರಂಭ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆಯಲ್ಲಿ ನೂತನ ಸ್ಟೋರಿಸ್ ಬೈ ಕ್ಯಾಂಡಿಡ್ ಕ್ಲಬ್ ಆರ್ಟ್ ಆಫ್ ಫ್ರಾಂಜನ್ ಬ್ಯೂಟಿ ಆರಂಭ


ಮೂಡುಬಿದಿರೆ: ಅಶೋಕ್ ಅಂಚನ್ ಮಾಲಕತ್ವದಲ್ಲಿ ವಿದ್ಯಾಗಿರಿ ಬಳಿ ನೂತನವಾಗಿ ಆರಂಭಗೊಂಡ  ಕ್ಯಾಂಡಿಡ್ ಕ್ಲಬ್ ಸ್ಟುಡಿಯೋವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಅವರು ಉದ್ಘಾಟಿಸಿದರು.

ನಂತರ ಮಾತನಾಡಿದ ಆಳ್ವರು ಫೋಟೋಗ್ರಾಫಿ ವೃತ್ತಿಯಲ್ಲಿ ಸಾಕಷ್ಟು ಅವಕಾಶಗಳಿವೆ. ಇಲ್ಲಿ ಹಲವಾರು ವಿದ್ಯಾ ಸಂಸ್ಥೆಗಳು ಸಹಿತ  ವಿವಿಧ ಸಂಘಟನೆಗಳಿದ್ದು ಹಲವಾರು ಕಾರ್ಯಕ್ರಮಗಳು ನಡೆಯುತ್ತಿರುತ್ತವೆ  ಎಂದ ಅವರು  ಫೋಟೋಗ್ರಾಫಿ ವೃತ್ತಿಯಲ್ಲಿ ಅಶೋಕ್ ಅವರು ತಮ್ಮ ಊರಿನಲ್ಲಿಯೇ ಇದ್ದುಕೊಂಡು ಸ್ಟೋರಿಸ್ ಬೈ ಕ್ಯಾಂಡಿಡ್ ಕ್ಲಬ್ ಎಂಬ ನೂತನವಾದ ಸ್ಟುಡಿಯೋವನ್ನು ಪ್ರಾರಂಭಿಸಿರುವುದು ಖುಷಿಯ ವಿಚಾರ. ಫೋಟೋಗ್ರಾಫಿಯು ಅವರ ಭವಿಷ್ಯವನ್ನು ರೂಪಿಸುವಂತ್ತಾಗಲಿ ಎಂದು ಶುಭ ಹಾರೈಸಿದರು. 

ಬಿಜೆಪಿ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಸುದರ್ಶನ್ ಎಂ ಮಾತನಾಡಿ, ಜಿಲ್ಲೆಯಲ್ಲಿ ಫೋಟೋಗ್ರಾಫಿಯಲ್ಲಿ ಬೆಳೆಯುತ್ತಿರುವ ಯುವ ಪ್ರತಿಭೆ ಅಶೋಕ್ ಅವರ ಭವಿಷ್ಯ ಉಜ್ವಲವಾಗಲಿ, ಫೋಟೋಗ್ರಾಫಿಯಲ್ಲಿ ಇನ್ನಷ್ಟು ಸಾಧನೆಯನ್ನು ಮಾಡಲೆಂದು ಹಾರೈಸಿದರು.

ಪುರಸಭಾಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಅಶ್ವಥ್ ಪಣಪಿಲ, ಹೊಟೇಲ್ ಉದ್ಯಮಿ, ಸಮಾಜ ಸೇವಕ ಸುರೇಶ್,  ಅಶೋಕ್ ಅವರ ಪೋಷಕರಾದ ಪುಷ್ಪಾ, ಗೋಪಾಲ ಮತ್ತು ಹಿತೈಷಿಗಳು ಈ ಸಂದರ್ಭದಲ್ಲಿದ್ದರು.

Post a Comment

0 Comments