"ಸಾಮಾಜಿಕ ಹೋರಾಟಗಾರ "ಮಾಳ ಹರ್ಷೇಂದ್ರ" ಗೆ ರಾಜ್ಯೋತ್ಸವ ಪ್ರಶಸ್ತಿ"
ರಾಜಧಾನಿ ಬೆಂಗಳೂರಿನ ಹೆಮ್ಮೆಯ ಕನ್ನಡ ಸಂಘ ರಾಷ್ಟ್ರಕೂಟ ಗೆಳೆಯರ ಬಳಗ( ನೊಂ)ವಿಜಯನಗರ ಇವರು ಹುಡುಗಿ ಹುಡುಗಿ ಕೊಡ ಮಾಡುವ ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಬಾರಿ ರಾಜಧಾನಿಯ ಕನ್ನಡ ಪರ ಹಾಗೂ ಸಾಮಾಜಿಕ ಹೋರಾಟಗಾರ, ಮಹಾರಕ್ತದಾನಿ, ಸಾಮಾಜಿಕ ಚಿಂತಕ, ಧರ್ಮ ರಕ್ಷಕ ಪರೋಪಕಾರಿ ಮಾಳ ಹರ್ಷೇಂದ್ರಜೈನ ರವರಿಗೆ ಲಭಿಸಿದೆ.
75 ಬಾರಿ ರಕ್ತದಾನ ಮಾಡಿದ ಉತ್ಸಾಹದ ಚಿಲುಮೆ ಯಾಗಿರುವ ಇವರಿಗೆ ರಾಷ್ಟ್ರಕೂಟ ಕನ್ನಡ ಬಳಗದಿಂದ ಈ ಪ್ರಶಸ್ತಿ ನೀಡಲಾಗಿದೆ.
ಬಿ.ಎಸ್. ಎಂ ಜೈನ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿಯಾಗಿರುವ ಇವರು ಉಡುಪಿ ಜಿಲ್ಲೆ, ಕಾರ್ಕಳ ತಾಲೂಕಿನ ಮಾಳ ಗ್ರಾಮದ ಹೆಗ್ಗಡತಿ ಕುಟುಂಬದಲ್ಲಿ ಜನಿಸಿದ ಇವರು, ಬಾಲ್ಯದಿಂದಲೂ ಸಂಘಟನೆ, ಪರೋಪಕಾರ ಹಾಗೂ ಸಮಾಜ ಮುಖಿ ಚಿಂತನೆಗಳಲ್ಲಿ, ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು,ಕಳೆದ ನಾಲ್ಕು ದಶಕಗಳಿಂದ ಬೆಂಗಳೂರಿನಲ್ಲಿ ನೆಲೆಸಿ ಧರ್ಮದ ರಕ್ಷಣೆ ಸಹಕಾರ ಪ್ರವೃತ್ತಿ, ಮುನಿಗಳು ಸೇವೆ ,ಅಹಿತಕರ ಘಟನೆ ನಡೆದಾಗ ಹೋರಾಟ, ಧರ್ಮದ ರಕ್ಷಣೆಯಲ್ಲಿ ಮುಂಚೂಣಿಯಲ್ಲಿದ್ದಾರೆ ,ಕರೋನ ವಾರಿಯರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇವರ ಕರ್ತವ್ಯ ಮೆಚ್ಚಿ ವಿವಿಧ ಸಂಘಟನೆಗಳು ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.
ಸಂಘದ ಅಧ್ಯಕ್ಷ ಸೋಮಶೇಖರ್, ಕನಕ ಪೀಠದ ಸಿದ್ದರಾಮಯ್ಯನದ ಮಹಾಸ್ವಾಮಿಗಳು, ಮುದ್ದುಕೃಷ್ಣ, ಶಾಸಕ ರಾಮಮೂರ್ತಿ, ಡಿ .ವೈ .ಎಸ್ .ಪಿ ರಾಜೇಶ್ , ಸೇರಿದ್ದಂತೆ ವಿವಿಧ ಗಣ್ಯರ ಸಮ್ಮುಖದಲ್ಲಿ ಕನ್ನಡ ರಾಜ್ಯೋತ್ಸವ ಸೇವಾ ಪ್ರಶಸ್ತಿ 2024 ಗೌರವಿಸಲಾಯಿತು.
0 Comments