ರತ್ನಾಕರ ಶೆಟ್ಟಿ ಮುಂಡ್ರೆದಗುತ್ತು ನಿಧನ

ಜಾಹೀರಾತು/Advertisment
ಜಾಹೀರಾತು/Advertisment

 ರತ್ನಾಕರ ಶೆಟ್ಟಿ ಮುಂಡ್ರೆದಗುತ್ತು ನಿಧನ


ಮೂಡುಬಿದಿರೆ: ಮಾಜಿ ಸಚಿವ ಕೆ ಅಮರನಾಥ ಶೆಟ್ಟಿ ಅವರ ಕಿರಿಯ ಸಹೋದರ, ವಿಜಯಬ್ಯಾಂಕ್ ನ ನಿವೃತ್ತ ಅಧಿಕಾರಿ ರತ್ನಾಕರ ಶೆಟ್ಟಿ ಮುಂಡ್ರುದೆಗುತ್ತು (70) ಅವರು ಡಿ. 31 ರಂದು ಬೆಂಗಳೂರಿನ ಸ್ವಗೃಹದಲ್ಲಿ ನಿಧನ ಹೊಂದಿದರು.

  ಪಾಲಡ್ಕ ಮೂಡುಬಿದಿರೆ ಮಹಾವೀರ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದ

ಬಳಿಕ ವಿಜಯ ಬ್ಯಾಂಕ್ ನಲ್ಲಿ ಉದ್ಯೋಗಕ್ಕೆ ಸೇರಿದ ಅವರು ವಿವಿಧ ಶಾಖೆಗಳಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದರು. ಸಾಮಾಜಿಕ ಚಟುವಟಿಕೆಗಳಲ್ಲಿ ಅವರು ಸಕ್ರಿಯರಾಗಿದ್ದರು.

ಅಣ್ಣ ಅಮರನಾಥ ಶೆಟ್ಟರ ನಿಧನದ ಬಳಿಕ ಕುಟುಂಬದ ಎಲ್ಲ ವ್ಯವಹಾರಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದರು.


ಮೃತರು ಪತ್ನಿ, ಮತ್ತು ಪುತ್ರಿಯನ್ನು ಅಗಲಿದ್ದಾರೆ.

Post a Comment

0 Comments